Mahindra Scorpio: ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ S5 ಹೇಗಿದೆ ನೋಡಿ.. ಮೊದಲ ವಿಡಿಯೋ

ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಎನ್ ಎಸ್‌ಯುವಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ದೊಡ್ಡ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿದೆ. ಆದರೂ, ಹಳೆಯ ಸ್ಕಾರ್ಪಿಯೋ ಆವೃತ್ತಿಗೆ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಇದನ್ನು ಮನಗಂಡ ಕಂಪನಿ, ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ರೀ ಲಾಂಚ್ ಮಾಡಿದೆ.

ಸದ್ಯ, ದೇಶದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. 'S' ಎಂಟ್ರಿ ಲೆವೆಲ್ ವೇರಿಯೆಂಟ್ ಆಗಿದ್ದು, 'S11' ಟಾಪ್ ಎಂಡ್ ಮಾದರಿಯಾಗಿದೆ. ಆದರೆ, ಇವುಗಳ ನಡುವೆ ಬೆಲೆಯ ಅಂತರ ಸಾಕಷ್ಟು ಹೆಚ್ಚಿದ್ದು, ಇದಕ್ಕಾಗಿ ಕಂಪನಿ ಮಿಡ್ ವೇರಿಯೆಂಟ್ 'S5' ಅನ್ನು ಪರಿಚಯಿಸಿದೆ. ಸದ್ಯ, ಈ ಕಾರು ಹೇಗಿದೆ ಎಂಬುದರ ಬಗ್ಗೆ ಯೂಟ್ಯೂಬ್ ವಾಹಿನಿಯೊಂದರಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಲಾಗಿದೆ.

Mahindra Scorpio: ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ S5 ಹೇಗಿದೆ ನೋಡಿ.. ಮೊದಲ ವಿಡಿಯೋ

ಈ ವಿಡಿಯೋವನ್ನು ನೋಡಿದಾಗ ಹೊಸ ಸ್ಕಾರ್ಪಿಯೋ ಕ್ಲಾಸಿಕ್ S5 ವೇರಿಯೆಂಟ್, ಇತರೆ ರೂಪಾಂತರಗಳಂತೆ ಹೊರಭಾಗದಲ್ಲಿ ಕೆಲವೊಂದು ವೈಶಿಷ್ಟ್ಯಗಳನ್ನು ಪಡೆದುಕೊಂಡಿಲ್ಲ. ಮುಖ್ಯವಾಗಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ DRLs, ಫಾಗ್ ಲ್ಯಾಂಪ್ಸ್, ಗ್ಲೋಸ್ ಬ್ಲ್ಯಾಕ್ ಫ್ರಂಟ್ ಗ್ರಿಲ್ ಹಾಗೂ ಬಾಡಿ ಕಲರ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿಲ್ಲ. ಇದು ಅದರ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಬಹುದು.

ಆದರೂ, ಔಟ್ ಸೈಡ್ ಕೆಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. 17 ಇಂಚಿನ ಅಲಾಯ್ ವೀಲ್ಸ್, ಬಾಡಿ ಕಲರ್ ಫ್ರಂಟ್, ರೇರ್ ಬಂಪರ್, ಗ್ಲೋಸ್ ಬ್ಲಾಕ್ ORVM, ರೂಫ್ ರೈಲ್ಸ್, ರೇರ್ ಸ್ಪಾಯ್ಲರ್ ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಪಡೆದಿದೆ. ಜೊತೆಗೆ ಈ ಕಾರಿನ ಒಳಭಾಗವು ಕೆಲವು ಆಕರ್ಷಕ ವೈಶಿಷ್ಟ್ಯಗಳಿಲ್ಲ. ಇನ್ಫೋಟೈನ್‌ಮೆಂಟ್ ಯೂನಿಟ್ ಹೊಂದಿಲ್ಲದಿರುವುದರಿಂದ ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್ ಕೂಡ ಇಲ್ಲ. ಆದರೂ ಕ್ಯಾಬಿನ್ ಅತ್ಯುತ್ತುಮವಾಗಿದೆ.

Mahindra Scorpio: ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ S5 ಹೇಗಿದೆ ನೋಡಿ.. ಮೊದಲ ವಿಡಿಯೋ

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದರ 2.2 ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌, 132 bhp ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಬೆಲೆ ಬಗ್ಗೆ ಹೇಳುವುದಾದರೆ, ಇದು ರೂ.13 ಲಕ್ಷದಿಂದ 16.81 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಸರಿ ಸುಮಾರು 7 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ನೂತನ ಮಿಡ್ ವೇರಿಯೆಂಟ್ S5, ಎಂಟ್ರಿ ಹಾಗೂ ಟಾಪ್ ವೇರಿಯೆಂಟ್ ನಡುವಿನ ಬೆಲೆಯನ್ನು ಪಡೆದಿದ್ದು, ರೂ.15 ಲಕ್ಷ ದರದಲ್ಲಿ ಗ್ರಾಹಕರಿಗೆ ದೊರೆಯುವ ಸಾಧ್ಯತೆಯಿದೆ.

ಇನ್ನು, ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ಐದು ರೂಪಾಂತರಗಳಲ್ಲಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕೆಲವು ರೂಪಾಂತರಗಳನ್ನು ವಿತರಣೆ ಪಡೆಯಲು 11 ರಿಂದ 12 ತಿಂಗಳು ಕಾಯಬೇಕು. ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ದೊರೆಯಲಿದ್ದು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಸದ್ಯ, ಕಂಪನಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ S5 ರೂಪಾಂತರ ಕೆಲವು ವೈಶಿಷ್ಟ್ಯಗಳನ್ನು ಕಳೆದುಕೊಂಡರೂ ನೋಡಲು ಅತ್ಯಾಕರ್ಷಕವಾಗಿದ್ದು, ಬೆಲೆಯು ಕೈಗೆಟುಕುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಲಿದೆ. ಮುಂಬರುವ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಖರೀದಿದಾರರು ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಲಿದ್ದಾರೆ. ಜೊತೆಗೆ ಪ್ರತಿಸ್ಪರ್ಧಿ ಕಂಪನಿ ಕಾರುಗಳಿಗೆ ಹೇಗೆ ಪೈಪೋಟಿ ನೀಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Article Published On: Tuesday, May 30, 2023, 15:30 [IST]
English summary
Mahindra scorpio classic s5 walkaround video out details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+