ಅತ್ಯಂತ ಕೈಗೆಟುಕುವ ಬೆಲೆಯ Mahindra Scorpio-N ಬೇಸ್ ವೇರಿಯೆಂಟ್ ಡೀಲರ್‌ಶಿಪ್‌ಗೆ ಎಂಟ್ರಿ
ಮಹೀಂದ್ರಾ ಸ್ಕಾರ್ಪಿಯೊ-ಎನ್ ಕಾರಿನ ಅತ್ಯಂತ ಜನಪ್ರಿಯ ರೂಪಾಂತರವೆಂದರೆ ಅದರ ಮೂಲ Z2 ರೂಪಾಂತರವಾಗಿದೆ. ಈ ಬಹುನಿರೀಕ್ಷಿತ ವೇರಿಯೆಂಟ್ ಅಂತಿಮವಾಗಿ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ. ಹೊಸ ಸ್ಕಾರ್ಪಿಯೊ-ಎನ್ ಬೇಸ್ Z2 ರೂಪಾಂತರವು ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಎಸ್‌ಯುವಿ ಕುರಿತು ನಮ್ಮ ಅನಿಸಿಕೆಗಳನ್ನು ಇಲ್ಲಿ ತಿಳಿಸಲಾಗಿದೆ.
ಸ್ಕಾರ್ಪಿಯೊ-ಎನ್ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು ಸುಮಾರು 200 ಬಿಎಚ್‌ಪಿ ಮತ್ತು 370 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪೆಟ್ರೋಲ್ ರೂಪಾಂತರದ ಬೆಲೆ 13.05 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಇದು ಹೊಸ ಬೆಲೆಯಾಗಿದ್ದು, ವರ್ಷದ ಆರಂಭದಲ್ಲಿ ಏರಿಕೆಯಾಗಿತ್ತು. ಕಂಪನಿ ಕೂಡ ಮೊದಲೇ ಬೆಲೆ ಏರಿಕೆ ಬಗ್ಗೆ ಗ್ರಾಹಕರಿಗೆ ಈ ಹಿಂದೆ ಹಿಂಟ್ ನೀಡಿತ್ತು.

ಮೂಲ Z2 ರೂಪಾಂತರವು ಸಿಗ್ನೇಚರ್ ಡಬಲ್ ಬ್ಯಾರೆಲ್ ಹೆಡ್‌ಲೈಟ್ ಗಳನ್ನು ಪಡೆದಿದೆಯಾದ್ರೂ ಪ್ರೊಜೆಕ್ಟರ್ ಲೈಟ್ ಸೆಟಪ್ ಹೊಂದಿಲ್ಲ. ಬದಲಿಗೆ, ಇದು ಗುಣಮಟ್ಟದ ಹ್ಯಾಲೊಜೆನ್ ಬಲ್ಬ್‌ಗಳೊಂದಿಗೆ ಬರುತ್ತದೆ. ಯಾವುದೇ ಎಲ್ಇಡಿ ಡಿಆರ್ಎಲ್ ಗಳು ಇಲ್ಲ. ಹಾಗೆಯೇ ಸ್ಕಾರ್ಪಿಯೊ ಎನ್ Z2 ರೂಪಾಂತರವು ಮುಂಭಾಗದಲ್ಲಿ ಫಾಗ್ ಲ್ಯಾಂಪ್, ಕ್ರೋಮ್ ಅಂಶಗಳನ್ನು ಪಡೆಯುವುದಿಲ್ಲ.
ಮುಂಭಾಗದ ಗ್ರಿಲ್ ಅನ್ನು ಮ್ಯಾಟ್ ಬ್ಲಾಕ್ ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ, ಹಾಗೆಯೇ ಇದು ಗ್ರಿಲ್ ಸ್ಲ್ಯಾಟ್‌ಗಳಲ್ಲಿ ಪಿಯಾನೋ ಬ್ಲಾಕ್ ಅಕ್ಸೆಂಟ್‌ಗಳನ್ನು ಪಡೆದಿದೆ. ಕಾರಿನ ಸೈಡ್ ಪ್ರೊಫೈಲ್‌ನ A ಮತ್ತು D ಪಿಲ್ಲರ್‌ಗಳು ಅದೇ ಬಣ್ಣದಲ್ಲಿ ಮುಗಿದಿವೆ. ಬಿ ಮತ್ತು ಸಿ ಪಿಲ್ಲರ್‌ಗಳನ್ನು ಮ್ಯಾಟ್ ಬ್ಲ್ಯಾಕ್‌ನಲ್ಲಿ ಪೂರ್ಣಗೊಳಿಸಲಾಗಿದ್ದು, ಹೆಚ್ಚುವರಿಯಾಗಿ ಏನೂ ಮಾಡಿಲ್ಲ.

ಬದಿಗಳಲ್ಲಿ ಯಾವುದೇ ಕ್ರೋಮ್ ಅಕ್ಸೆಂಟ್‌ಗಳಿಲ್ಲ, ಬದಲಿಗೆ ವೀಲ್ ಆರ್ಚ್‌ಗಳ ಮೇಲೆ ಮ್ಯಾಟ್ ಬ್ಲ್ಯಾಕ್ ಬಾಡಿ ಕ್ಲಾಡಿಂಗ್‌ಗಳನ್ನು ಪಡೆದಿದೆ. ಮೂಲ ಮಾದರಿಯು ಇನ್ನೂ 17 ಇಂಚಿನ ವೀಲ್ ಸೆಟಪ್ ಅನ್ನು ಪಡೆಯುತ್ತದೆ, ಆದರೆ ಇದು ಅಲಾಯ್ ವೀಲ್‌ಗಳೊಂದಿಗೆ ಬರುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಬದಲಾಗಿ ಸಿಲ್ವರ್ ಸ್ಟೀಲ್ ವೀಲ್‌ಗಳನ್ನು ಪಡೆದಿದೆ.
ಬೇಸ್ ವೇರಿಯೆಂಟ್ Z2 ರೂಪಾಂತರದಲ್ಲಿ ಯಾವುದೇ ರೂಫ್ ರೈಲ್ಸ್ ಇಲ್ಲ. ಉಳಿದಂತೆ ಟಾಪ್ ಸ್ಪೆಕ್ ರೂಪಾಂತರಗಳಂತೆಯೇ ಮೂಲ ರೂಪಾಂತರವು ಕೂಡ LED ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ. ಆದರೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುವುದಿಲ್ಲ. ಹಾಗೆಯೇ ಇದು ನಾಲ್ಕು ಪಾರ್ಕಿಂಗ್ ಸೆನ್ಸಾರ್ ಗಳನ್ನು ಪಡೆಯುತ್ತದೆ. ಇವು ಹೊರಾಂಗಣ ವಿನ್ಯಾಸದಲ್ಲಿ ಇರುವ ಬದಲಾವಣೆಗಳು.
ಕಾರಿನ ಒಳಾಂಗಣ ಕುರಿತು ಹೇಳುವುದಾದರೆ, ಮೂಲ ರೂಪಾಂತರವು ಒಳಭಾಗದಲ್ಲಿ ತಕ್ಕಮಟ್ಟಿಗೆ ಸಜ್ಜುಗೊಂಡಿದೆ. ಮೂಲ ಮಾದರಿಯು ಏಳು ಆಸನಗಳ ವ್ಯವಸ್ಥೆಯನ್ನು ಸಹ ಹೊಂದಿದೆ. ಹಿಂದಿನ ಪ್ರಯಾಣಿಕರು 12V ಸಾಕೆಟ್ ಅನ್ನು ಪಡೆಯಬಹುದು. ಮಧ್ಯದ ಸಾಲಿನಲ್ಲಿ ಸ್ಥಳವು ಸಾಕಷ್ಟು ಇದೆ, ಕಾರಿನ ಸುರಕ್ಷತೆಯ ಅಂಶದಲ್ಲಿ ಯಾವುದೇ ವೆಚ್ಚವನ್ನು ಕಡಿತಗೊಳಿಸಲಾಗಿಲ್ಲ ಎಂದು ಹೇಳಬಹುದು.
Mahindra Scorpio N ಬೇಸ್ ವೇರಿಯೆಂಟ್ ಡ್ಯಾಶ್‌ಬೋರ್ಡ್ ಮೂಲ ರೂಪಾಂತರದಂತೆ ಅನಿಸುವುದೇ ಇಲ್ಲ, ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮ್ಯಾನ್ಯುವಲ್ ಎಸಿ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಎಂಐಡಿಯನ್ನು ಪಡೆಯುತ್ತದೆ. ಒಟ್ಟಾರೆಯಾಗಿ, Scorpio-N ನ ಮೂಲ Z2 ರೂಪಾಂತರವು ಹಣಕ್ಕೆ ತಕ್ಕ ಮಾದರಿಯಾಗಿದ್ದು, ಖರೀದಿದಾರರಿಗೆ ಯಾವುದೇ ನಷ್ಟವಿಲ್ಲ ಎಂದು ಹೇಳಬಹುದು.


Click it and Unblock the Notifications