ಯಾವ ಕಾರು ಮಾಡದ ಸಾಧನೆ ಮಾಡಿ ಗಿನ್ನೆಸ್​​ ವಿಶ್ವ ದಾಖಲೆ ಬರೆದ ಮಹೀಂದ್ರಾ ಸ್ಕಾರ್ಪಿಯೋ-ಎನ್

ಸ್ವದೇಶಿ ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡೂ ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯ ಎಸ್‍ಯುವಿಗಳ ಸರಣೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ, ಮಾರಾಟದಲ್ಲಿ ಮಹೀಂದ್ರಾ ಕಂಪನಿಗೆ ಇಂದಿಗೂ ಕೂಡ ಹೆಚ್ಚಿನ ಕೊಡುಗೆಯನ್ನು ನೀಡುವುದನ್ನು ಮುಂದುವರೆಸಿರುವುದು ವಿಶೇಷ.

ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡಲಾಗುತ್ತದೆ, ಈ ಎರಡೂ ಎಸ್‍ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಎಲ್ಲಾ ಎಸ್‍ಯುವಿಗಳ ಬಿಗ್ ಡ್ಯಾಡಿ ಸ್ಕಾರ್ಪಿಯೋ ಬೇಡಿಕೆ ಹೆಚ್ಚಾಗಿರುವುದರಿಂದ ಕಾಯುವ ಅವಧಿ ಕೂಡ ಹೆಚ್ಚಾಗಿದೆ.

Mahindra Scorpio-N

ಇನ್ನು ವಿದೇಶದಲ್ಲೂ ಈ ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಎಸ್‍ಯುವಿಯು ಭಾರೀ ಸದ್ದು ಮಾಡುತ್ತಿದೆ. ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‍ಯುವಿಯು ಸಿಂಪ್ಸನ್ ಮರುಭೂಮಿಯನ್ನು ವೇಗವಾಗಿ ದಾಟಿ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದೆ. ಸ್ಕಾರ್ಪಿಯೋ-ಎನ್ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಈ ಸಾಧನೆಯನ್ನು ಮಾಡಿದೆ. ಇನ್ನು ಮಹಿಂದ್ರಾ ಕಂಪನಿಯು ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ XUV700 ಮಾದರಿಯನ್ನು ಸಹ ಮಾರಾಟ ಮಾಡುತ್ತಿದೆ.

ಸ್ಕಾರ್ಪಿಯೋ-ಎನ್ ಅನ್ನು ಜೀನ್ ಕಾರ್ಬೆಟ್ ಮತ್ತು ಬೆನ್ ರಾಬಿನ್ಸನ್ ಸಹ-ಚಾಲನೆ ಮಾಡಿದರು. ಸಿಂಪ್ಸನ್ ಮರುಭೂಮಿಯನ್ನು ದಾಟಲು 13 ಗಂಟೆಗಳನ್ನು ತೆಗೆದುಕೊಂಡಿದೆ. ಇದು ಬರೊಬ್ಬರಿ 385 ಕಿ.ಮೀ ದೂರವನ್ನು ಪ್ರಯಾಣಿಸಿದೆ. ಆಸ್ಟ್ರೇಲಿಯಾದಲ್ಲಿ, ಸ್ಕಾರ್ಪಿಯೋ-ಎನ್ ಅನ್ನು Z8 ಮತ್ತು Z8L ಟ್ರಿಮ್‌ನಲ್ಲಿ ನೀಡಲಾಗುತ್ತದೆ. ಇದರಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

Mahindra Scorpio-N

ಈ ಎಂಜಿನ್ 173 bhp ಪವರ್ ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಸ್‍ಯುವಿಯಲ್ಲಿ 4-ವೀಲ್ ಡ್ರೈವ್ ತಂತ್ರಜ್ಙಾನವನ್ನು ಹೊಂದಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಟೆಕ್ನಾಲಜಿ ಮತ್ತು ಉತ್ಪನ್ನ ಅಭಿವೃದ್ಧಿಯ ಅಧ್ಯಕ್ಷ ಆರ್ ವೇಲುಸಾಮಿ ಅವರು ಮಾತನಾಡಿ, ನಮ್ಮ ಐಕಾನಿಕ್ ಎಸ್‌ಯುವಿ, ಸ್ಕಾರ್ಪಿಯೋ-ಎನ್ ವೇಗದ ದಾಟುವಿಕೆಗಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದು ಹೊಸ ಛಾಪು ಮೂಡಿಸಿದೆ ಎಂದು ಹಂಚಿಕೊಳ್ಳಲು ನಮಗೆ ಅಪಾರ ಹೆಮ್ಮೆಯಿದೆ ಎಂದರು.

Mahindra Scorpio-N

ಮಾತನ್ನು ಮುಂದುವರೆಸಿ, ಉತ್ಪಾದನಾ ವಾಹನದಿಂದ ಸಿಂಪ್ಸನ್ ಮರುಭೂಮಿಯನ್ನು ದಾಟುವ ಸಾಧನೆಯಾಗಿದೆ. ಈ ಜಾಗತಿಕವಾಗಿ ಗುರುತಿಸಲ್ಪಟ್ಟ ಸಾಧನೆಯು ಸ್ಕಾರ್ಪಿಯೋ-ಎನ್‌ನ ಅಸಾಧಾರಣ ಎಂಜಿನಿಯರಿಂಗ್ ಮತ್ತು ಕಾರ್ಯಕ್ಷಮತೆಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಇದು ನಮ್ಮ ನುರಿತ ಎಂಜಿನಿಯರ್‌ಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸೃಜನಶೀಲ ಮನೋಭಾವವನ್ನು ಗೌರವಿಸುತ್ತದ ಎಂದು ಹೇಳೀದರು.

ಸಾಮಾನ್ಯ ಸ್ಕಾರ್ಪಿಯೋಗೆ ಹೋಲಿಸಿದರೆ ಸ್ಕಾರ್ಪಿಯೋ-ಎನ್ ಎಸ್‍ಯುವಿಯಲ್ಲ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ನೊಂದಿಗೆ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ. ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್‌ ನಂತರದಲ್ಲಿ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದೆ. ಇನ್ನು ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ.

Article Published On: Thursday, July 6, 2023, 8:30 [IST]
English summary
Mahindra scorpio n becomes fastest suv cross of the simpson desert details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+