Mahindra Scorpio: ಮಹೀಂದ್ರಾ ಸ್ಕಾರ್ಪಿಯೋ ಎನ್ ಗ್ರಾಹಕರಿಗೆ ಸಡನ್ ಶಾಕ್!

ಮಹೀಂದ್ರಾ (Mahindra) ಮಾರಾಟ ಮಾಡುವ ಜನಪ್ರಿಯ ಎಸ್‌ಯುವಿ ಪಟ್ಟಿಯಲ್ಲಿ ಸ್ಕಾರ್ಪಿಯೋ ಎನ್ (Scorpio-N) ಮೊದಲ ಸ್ಥಾನ ಪಡಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಕಾರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಪ್ರಸ್ತುತ, ಇದೇ ಎಸ್‌ಯುವಿ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಆ ಕುರಿತು ಇಲ್ಲಿದೆ ಮಾಹಿತಿ.

ಭಾರತದಲ್ಲಿ ಮಹೀಂದ್ರಾ, ತನ್ನ ಸ್ಕಾರ್ಪಿಯೋ ಎನ್ ಎಸ್‌ಯುವಿ ದರವನ್ನು ಈ ವರ್ಷ ಮೂರನೇ ಬಾರಿಗೆ ಏರಿಕೆ ಮಾಡಿದೆ. ಈ ಮೂಲಕ ಹಬ್ಬದ ಸೀಸನ್ ಆರಂಭವಾಗುವ ಮುನ್ನವೇ ತನ್ನ ಗ್ರಾಹಕರಿಗೆ ಆಘಾತ ನೀಡಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಸ್ಕಾರ್ಪಿಯೋ ಆರಂಭಿಕ ಬೆಲೆ ಕನಿಷ್ಠ ರೂ.21,000 ಹೆಚ್ಚಳವಾಗಿದ್ದು, ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುವ ಝಡ್2 (ಪೆಟ್ರೋಲ್) ರೂಪಾಂತರದ ಬೆಲೆ ರೂ.13.26 ಲಕ್ಷಕ್ಕೆ ತಲುಪಿದೆ.

Mahindra Scorpio: ಮಹೀಂದ್ರಾ ಸ್ಕಾರ್ಪಿಯೋ ಎನ್ ಗ್ರಾಹಕರಿಗೆ ಸಡನ್ ಶಾಕ್!

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೋ ಎನ್ ಝಡ್2, ಝಡ್4, ಝಡ್6, ಝಡ್8 ಮತ್ತು ಝಡ್8ಎಲ್ ಎಂಬ ರೂಪಾಂತರಗಳಲ್ಲಿ ಸಿಗಲಿದ್ದು, ಎಲ್ಲವೂ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತವೆ. ಬೆಲೆ ಏರಿಕೆಯಿಂದಾಗಿ ಮ್ಯಾನುವಲ್ ಡೀಸೆಲ್ ರೂಪಾಂತರ ಝಡ್2 ಬೆಲೆ ರೂ.13.76 ಲಕ್ಷ (ಎಕ್ಸ್ ಶೋರೂಂ) ಆಗಿದೆ.

ಅದೇ ರೀತಿಯಲ್ಲಿ ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಟಾಪ್-ಎಂಡ್ ಡೀಸೆಲ್ ರೂಪಾಂತರವಾದ ಝಡ್8ಎಲ್ (4WD) ಬೆಲೆ ರೂ.2,000 ಹೆಚ್ಚಳವಾಗಿರುವುದರಿಂದ ರೂ.24.53 ಲಕ್ಷ ಎಕ್ಸ್ ಶೋರೂಂ ದರವಾಗಿದೆ. 6 ಆಸನ ಹೊಂದಿರುವ ಝಡ್8ಎಲ್ ವೇರಿಯೆಂಟ್ ಬೆಲೆ ರೂ.21.78 ಲಕ್ಷಕ್ಕೆ ತಲುಪಿದೆ. 7 ಆಸನ ಹಾಗೂ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಝಡ್4ಇ ಡೀಸೆಲ್ (4WD) ಗರಿಷ್ಠ ಬೆಲೆ (ರೂ. 81,000) ಹೆಚ್ಚಳವಾಗಿದ್ದು, ರೂ.18.50 ಲಕ್ಷವಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ 2 ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 bhp ಪವರ್ ಹಾಗೂ 380 Nm ಪೀಕ್ ಟಾರ್ಕ್, ಮತ್ತೊಂದು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 172 bhp ಗರಿಷ್ಠ ಪವರ್ ಮತ್ತು 370 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಕಾರು, 6 ಸ್ವೀಡ್ ಆಟೋಮೆಟಿಕ್ ಅಥವಾ 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಜೊತೆಗೆ 6, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಲಭ್ಯವಿದೆ. 2WD (ಟೂ ವೀಲ್ ಡ್ರೈವ್) ಮತ್ತು 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, ಇದರೊಂದಿಗೆ ಹೆಚ್ಚು ಪವರ್ ಫುಲ್ ಆಗಿದೆ.

ಸ್ಕಾರ್ಪಿಯೋ ಎನ್ ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ನಪೋಲಿ ಬ್ಲಾಕ್ ಸೇರಿದಂತೆ ಏಳು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, 360 - ಡಿಗ್ರಿ ಕ್ಯಾಮೆರಾ ಒಳಗೊಂಡನಂತೆ ವಿವಿಧ ಫೀಚರ್ಸ್ ಪಡೆದಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಿಲ್ - ಅಸಿಸ್ಟ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಒಳಗೊಂಡಿದೆ. ಈ ಕಾರಿಗೆ ಟಾಟಾ ಹ್ಯಾರಿಯರ್, ಸಫಾರಿ ಮತ್ತು ಹ್ಯುಂಡೈ ಕ್ರೆಟಾ/ಅಲ್ಕಾಜರ್ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 19, 2023, 15:18 [IST]
English summary
Mahindra scorpio n price hiked again india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+