Mahindra: ಮಹೀಂದ್ರಾ ಸ್ಕಾರ್ಪಿಯೋ ಎನ್ ಖರೀದಿಸುತ್ತೀರಾ, ದಿಢೀರನೇ ಬದಲಾಯ್ತು.. ಇಲ್ಲಿದೆ ಮಾಹಿತಿ

ದೇಶದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಎಸ್‌ಯುವಿಗಿಂತ ಜನಪ್ರಿಯ ಕಾರು ಮತ್ತೊಂದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬಿಡುಗಡೆಯಾಗಿ 1 ವರ್ಷ ಕಳೆದರೂ ಈಗಲೂ ದೊಡ್ಡ ಮಟ್ಟದ ಡಿಮ್ಯಾಂಡ್ ಹೊಂದಿದೆ. ಇದೀಗ, ಈ ಎಸ್‌ಯುವಿ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ಪೂರೈಕೆ ಸರಪಳಿ ಸಮಸ್ಯೆಯಿಂದ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ದೀರ್ಘಕಾಲ ಕಾಯುವಿಕೆ ಅವಧಿ ಹೊಂದಿತ್ತು. ಈಗ ಅದೆಲ್ಲ ಬಗೆಹರಿದಂತೆ ಕಾಣುತ್ತಿದೆ. ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯದಲ್ಲಿ ನಿರತವಾಗಿದ್ದು, ಇದರಿಂದಾಗಿ ಕಳೆದ ಮೇ ತಿಂಗಳವರೆಗೆ ಈ ಎಸ್‌ಯುವಿ ವಿತರಣೆಗೆ ಹಿಡಿಯುತ್ತಿದ್ದ ಗರಿಷ್ಠ ಸಮಯ ದಿಢೀರನೇ ಕಡಿಮೆಯಾಗಿದೆ.

Mahindra: ಮಹೀಂದ್ರಾ ಸ್ಕಾರ್ಪಿಯೋ ಎನ್ ಖರೀದಿಸುತ್ತೀರಾ, ದಿಢೀರನೇ ಬದಲಾಯ್ತು.. ಇಲ್ಲಿದೆ ಮಾಹಿತಿ

ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಐದು ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. ಅವುಗಳೆಂದರೆ, ಝಡ್2, ಝಡ್4, ಝಡ್6, ಝಡ್8 ಹಾಗೂ ಝಡ್8ಎಲ್. ಇವುಗಳ ಬದಲಾದ ಕಾಯುವಿಕೆ ಅವಧಿ ಬಗ್ಗೆ ಹೇಳುವುದಾದರೆ, ಝಡ್2 ಪೆಟ್ರೋಲ್ ರೂಪಾಂತರ ಈ ಜೂನ್ ತಿಂಗಳಲ್ಲಿ 6-7 ತಿಂಗಳು (ಮೇ: 11-12 ತಿಂಗಳು) ಕಾಯುವಿಕೆ ಅವಧಿಯನ್ನು ಹೊಂದಿದೆ. ಡೀಸೆಲ್ ವೇರಿಯೆಂಟ್ 7-8 ತಿಂಗಳ (ಮೇ: 11-12 ತಿಂಗಳು) ಬಳಿಕ ವಿತರಣೆಯಾಗಲಿದೆ.

ಝಡ್8ಎಲ್ ಎಟಿ ಪೆಟ್ರೋಲ್ ವೇರಿಯೆಂಟ್ ಸಹ ಕೇವಲ 2-3 ತಿಂಗಳಿಗೆ ವಿತರಣೆಯಾಗಲಿದೆ. ಕಳೆದ ಮೇ ನಲ್ಲಿ 5-6 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿತ್ತು. ಡೀಸೆಲ್ ರೂಪಾಂತರವು ಜೂನ್ ತಿಂಗಳಲ್ಲಿಯು ಹೆಚ್ಚು ಕಮ್ಮಿ ಮೇ ತಿಂಗಳ ರೀತಿಯೇ ವಿತರಣೆಯಾಗಲು ಸಮಯ ತೆಗೆದುಕೊಳ್ಳುತ್ತದೆ. ಸುಮಾರು 7-8 ತಿಂಗಳ ನಂತರ ಡಿಲೆವರಿ ಆಗಲಿದೆ.

ಇನ್ನುಳಿದಂತೆ ವಿತರಣೆಯ ಸಮಯ ಕಡಿಮೆಯಾಗಿರುವುದರಿಂದ ಈ ಜೂನ್ ನಲ್ಲಿ ಝಡ್4 ಪೆಟ್ರೋಲ್ ರೂಪಾಂತರ 6-7 ತಿಂಗಳು, ಡೀಸೆಲ್ ವೇರಿಯೆಂಟ್ 7-8 ಮಾಸ ಕಾಯುವಿಕೆ ಅವಧಿ ಹೊಂದಿದೆ. Z6 ಡೀಸೆಲ್ ರೂಪಾಂತರ 10-12 ತಿಂಗಳ ಬಳಿಕ ಡಿಲೆವರಿಯಾಗಲಿದೆ. ಝಡ್8 ಪೆಟ್ರೋಲ್ ವೇರಿಯೆಂಟ್ 12-13 ತಿಂಗಳು ಹಾಗೂ ಡೀಸೆಲ್ ರೂಪಾಂತರ 12-13 ಮಾಸ ಕಾಯುವಿಕೆ ಸಮಯವನ್ನು ಹೊಂದಿದೆ.

ಝಡ್8ಎಲ್ ಎಂಟಿ ಪೆಟ್ರೋಲ್ ರೂಪಾಂತರ 7-8 ಹಾಗೂ ಡೀಸೆಲ್ ವೇರಿಯೆಂಟ್ 10-12 ತಿಂಗಳ ಬಳಿಕ ವಿತರಣೆಯಾಗಲಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ರೂಪಾಂತರಗಳಿಗೆ ಅನುಗುಣವಾಗಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಇದರ 2.2 ಲೀಟರ್ ಡೀಸೆಲ್ ಎಂಜಿನ್,132 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಪವರ್ ಫುಲ್ ಡೀಸೆಲ್ ಎಂಜಿನ್ ರೂಪಾಂತರಗಳು 175 PS ಪವರ್ ಮತ್ತು 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 203 PS ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಎಸ್‌ಯುವಿ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

Article Published On: Thursday, June 22, 2023, 16:54 [IST]
English summary
Mahindra scorpio n sees drop in waiting period details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+