Mahindra: ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿಗೆ '0' ಸ್ಟಾರ್ ಸೇಫ್ಟಿ ರೇಟಿಂಗ್.. ಎಲ್ಲಿ ಗೊತ್ತಾ?
ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಅತ್ಯಂತ ಸುರಕ್ಷಿತ ಎಸ್‌ಯುವಿ ಎಂದು ಹೆಸರುವಾಸಿಯಾಗಿದೆ. ಗ್ಲೋಬಲ್ ಎನ್‌ಸಿಎಪಿಯಿಂದ ಈ ಕಾರು, 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಆದರೆ, ಆಸ್ಟ್ರೇಲಿಯನ್ ಎನ್‌ಸಿಎಪಿ (ANCAP) ಪರೀಕ್ಷೆಯಲ್ಲಿ '0' ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿದೆ.
ಆಸ್ಟ್ರೇಲಿಯಾ (Australia) ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿಯನ್ನು ಏಪ್ರಿಲ್ ಹಾಗೂ ನ್ಯೂಜಿಲೆಂಡ್‌ನಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಎಎನ್‌ಸಿಎಪಿ (ANCAP) ಸುರಕ್ಷತಾ ಮಾನದಂಡಗಳು, ಇವೆರೆಡು ದೇಶಗಳಲ್ಲಿ ಮಾರಾಟಗೊಳ್ಳುವ ಈ ಎಸ್‌ಯುವಿಯ ಎಲ್ಲ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ. ಆಸ್ಟ್ರೇಲಿಯಾದಲ್ಲಿ ಸೇಲ್ ಮಾಡುವ 6-ಆಸನದ ರೂಪಾಂತರ, ನ್ಯೂಜಿಲೆಂಡ್‌ನಲ್ಲಿ ಮಾರಾಟಗೊಳಿಸವ 7-ಆಸನ ರೂಪಾಂತರವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆಸ್ಟ್ರೇಲಿಯಾದಲ್ಲಿ ಮಾರಾಟಗೊಳ್ಳುವ ಸ್ಕಾರ್ಪಿಯೋ-ಎನ್ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯಗಳಾದ AEB (ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್), LSS (ಲೇನ್ ಸಪೋರ್ಟ್ ಸಿಸ್ಟಮ್) ಅನ್ನು ಹೊಂದಿಲ್ಲ. ಜೊತೆಗೆ DMS (ಡ್ರೈವರ್ ಮಾನಿಟರಿಂಗ್ ಸಿಸ್ಟಮ್), SLIF (ಸ್ಪೀಡ್ ಲಿಮಿಟ್ ಇನ್ಫಾರ್ಮಶನ್ ಸಿಸ್ಟಮ್), CPD (ಚೈಲ್ಡ್ ಪ್ರೆಸೆನ್ಸ್ ಡಿಟೆಕ್ಷನ್), ಸೆಕೆಂಡ್ & ಥರ್ಡ್ ರೋನಲ್ಲಿ ಯಾವುದೇ ಸೀಟ್‌ಬೆಲ್ಟ್ ರಿಮೆಂಡರ್ ನಂತರ ಸುರಕ್ಷತಾ ಅಂಶಗಳು ಇಲ್ಲದಿರುವುದನ್ನು ಎಎನ್‌ಸಿಎಪಿ ಗುರುತಿಸಿದೆ.
ಆಸ್ಟ್ರೇಲಿಯನ್ ಎನ್‌ಸಿಎಪಿಯಲ್ಲಿ ಸ್ಕಾರ್ಪಿಯೋ-ಎನ್ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 40 ಅಂಕಗಳಿಗೆ 17.67 ಅಂಕ, ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 63ಕ್ಕೆ 14.94 ಅಂಕಗಳನ್ನು ಪಡೆದಿದೆ. ದುರ್ಬಲ ರಸ್ತೆ ಬಳಕೆ ರಕ್ಷಣೆ ವಿಭಾಗದಲ್ಲಿ (Vulnerable Road User Protection) 18ಕ್ಕೆ 0 ಅಂಕಗಳನ್ನು ಗಳಿಸಿದೆ.

ಪ್ರತಿಯೊಂದು ದೇಶವು ತನ್ನದೇಯಾದ ಸುರಕ್ಷತಾ ಮಾನದಂಡಗಳ ಅನ್ವಯ ಸೇಫ್ಟಿ ರೇಟಿಂಗ್ ನೀಡುತ್ತದೆ. ಈವರೆಗೆ, ಭಾರತದಲ್ಲಿ ಗ್ಲೋಬಲ್ ಎನ್‌ಸಿಎಪಿ ರೇಟಿಂಗ್ ಆಧಾರವಾಗಿ ಇಟ್ಟುಕೊಂಡು ವಾಹನ ತಯಾರಕರು ಕಾರುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ನಾಳೆಯಿಂದ ದೇಶದ ವಾಹನ ಸುರಕ್ಷತಾ ಪರೀಕ್ಷಾ ಸಂಸ್ಥೆ 'ಭಾರತ್ ಎನ್‌ಸಿಎಪಿ' ಕಾರ್ಯಾರಂಭ ಮಾಡಲಿದ್ದು, ಭಾರತದಲ್ಲಿ ಮಾರಾಟಗೊಳ್ಳುವ ಕಾರುಗಳಿಗೆ ಆ ರೇಟಿಂಗ್ ಅನ್ವಯಿಸುತ್ತದೆ.
ಭಾರತ್ ಎನ್‌ಸಿಎಪಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿ ಯಾವ ರೇಟಿಂಗ್ ಪಡೆಯಲಿದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಸದ್ಯ, ಸ್ಕಾರ್ಪಿಯೋ-ಎನ್ ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.25 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಪಡೆದಿದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 3 ಸ್ಟಾರ್ ರೇಟಿಂಗ್ ಗಳಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಹೀಂದ್ರಾ ಸ್ಕಾರ್ಪಿಯೋ-ಎನ್, ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ - ಅಸಿಸ್ಟ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications