Mahindra Scorpio N ಎಸ್‍ಯುವಿ 9 ತಿಂಗಳ ಕಾಯುವ ಅವಧಿಯನ್ನು ಕೇಕ್ ಕಟ್ ಮಾಡಿ ಸಂಭ್ರಮಿಸಿದ ಗ್ರಾಹಕ
ಸ್ವದೇಶಿ ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡೂ ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯ ಎಸ್‍ಯುವಿಗಳ ಸರಣೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲಿ ಒಂದಾಗಿದೆ, ಮಾರಾಟದಲ್ಲಿ ಮಹೀಂದ್ರಾ ಕಂಪನಿಗೆ ಇಂದಿಗೂ ಹೆಚ್ಚಿನ ಕೊಡುಗೆಯನ್ನು ನೀಡುವುದನ್ನು ಮುಂದುವರೆಸಿರುವುದು ವಿಶೇಷ.
ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡಲಾಗುತ್ತದೆ, ಈ ಎರಡೂ ಎಸ್‍ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ, ಎಲ್ಲಾ ಎಸ್‍ಯುವಿಗಳ ಬಿಗ್ ಡ್ಯಾಡಿ ಸ್ಕಾರ್ಪಿಯೋ ಬೇಡಿಕೆ ಹೆಚ್ಚಾಗಿರುವುದರಿಂದ ಕಾಯುವ ಅವಧಿ ಕೂಡ ಹೆಚ್ಚಾಗಿದೆ.

ಕೆಲವರು ಕಾರ್ ಬುಕ್ ಮಾಡಿ ಅಷ್ಟು ಅವಧಿ ಕಾಯಬೇಕೆಂಬ ದುಖ ಇರುತ್ತದೆ. ಇನ್ನು ಕೆಲವರು ತಮ್ಮ ಕನಸಿನ ಕಾರಿಗಾಗಿ ಕಾಯಲು ರೆಡಿ ಇರುತ್ತಾರೆ. ತಮ್ಮ ಮೆಚ್ಚಿನ ಕಾರಿನ ಕಾಯುವುದು ಒಂದು ಸುಂದರ ಅನುಭವ ಎಂದು ಗ್ರಾಹಕರೊಬ್ಬರು ಸಂತಸ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸ್ಕಾರ್ಪಿಯೋ ಎನ್ ಗ್ರಾಹಕ ಅನುಭವ್ ಚೌಹಾಣ್ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಈ ಮಹೀಂದ್ರಾ ಎನ್ ಎಸ್‍ಯುವಿಗಾಗಿ 9 ತಿಂಗಳಿನಿಂದ ಡೆಲಿವರಿ ಪಡೆಯಲು ಕಾಯುತ್ತಿದ್ದಾರೆ ಎಂದು ಕೇಕ್‌ನಲ್ಲಿ ಬರೆದೆಕೊಂಡಿದ್ದಾರೆ. ಗ್ರಾಹಕರು ತಮ್ಮ ನೆಚ್ಚಿನ ಎಸ್‌ಯುವಿಯನ್ನು ಪಡೆದುಕೊಳ್ಳಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾದ ಸಾಧ್ಯತೆಯಿದೆ. ಕೇಕ್ ಸ್ಕಾರ್ಪಿಯೋ ಎನ್ ಚಿತ್ರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿ ಕಾಯಲು ಯೋಗ್ಯವಾಗಿದೆ ಎಂಬುವುದು ಅವರ ಮಾತನ ಅರ್ಥವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಿತ್ರದ ಮೂಲಕ, ಸ್ಕಾರ್ಪಿಯೋ ಎನ್ ಗ್ರಾಹಕರು ತಾವು ಯಾವುದಕ್ಕೂ ಇಷ್ಟು ಕಾಯಲಿಲ್ಲ ಎಂದು ಹೇಳಿದ್ದಾರೆ. ಚಿತ್ರದ ಹಿನ್ನಲೆಯಲ್ಲಿ, ಜನಪ್ರಿಯ ಬಾಲಿವುಡ್ ಹಾಡು ಪ್ಲೇ ಆಗುತ್ತದೆ, ಕಾಯುವ ಅವಧಿಯ ಬಗ್ಗೆ ಒಬ್ಬರ ದುಃಖವನ್ನು ವ್ಯಕ್ತಪಡಿಸಲು ಇಂತಹ ವಿಶಿಷ್ಟ ವಿಧಾನವನ್ನು ಬಳಸಿರುವುದು ಬಹುಶಃ ಇದೇ ಮೊದಲು. ಹೆಚ್ಚಿನ ಇತರ ಸಂದರ್ಭಗಳಲ್ಲಿ, OEM ಅಥವಾ ಡೀಲರ್ ಅನ್ನು ದೂಷಿಸುವಂತಹ ಪ್ರತಿಕ್ರಿಯೆಯು ಸಾಮಾನ್ಯವಾಗಿ ಕಠಿಣವಾಗಿರುತ್ತದೆ.
ಕೆಲವರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸುವ ಮಟ್ಟಕ್ಕೂ ಹೋಗುತ್ತಾರೆ. ಕಾಯುವ ಅವಧಿಯನ್ನು ಕಡಿಮೆ ಮಾಡುವಂತಹ ಯಾವುದಾದರೂ ರೀತಿಯಲ್ಲಿ ವ್ಯಕ್ತಿಯ ಸೃಜನಶೀಲ ಪ್ರಯತ್ನಗಳಿಗೆ ಪ್ರತಿಫಲ ಸಿಗುತ್ತದೆಯೇ ಎಂದು ನೋಡಬೇಕಾಗಿದೆ. ಕೆಲವು ರದ್ದತಿಗಳಿದ್ದರೆ ಅದು ಸಾಧ್ಯವಾಗಬಹುದು. ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಕಾಯುವ ಅವಧಿಯನ್ನು ಕಡಿಮೆ ಮಾಡಲು ಮಹೀಂದ್ರಾ ಘಟಕಗಳು ಅತ್ಯುತ್ತಮ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಗಳಾಗಿದೆ.
ಇನ್ನು ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ. ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್ ಫ್ರೇಮ್‌ನಲ್ಲಿ ಸ್ಕಾರ್ಪಿಯನ್ ಸ್ಟಿಂಗ್ ಅಂಶವನ್ನು ಸಹ ಹೊಂದಿದೆ.
ಇನ್ನು ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ನೊಂದಿಗೆ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ. ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್ ನಂತರದಲ್ಲಿ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ.


Click it and Unblock the Notifications