Mahindra Scorpio-N: ಇದ್ದಕ್ಕಿದ್ದಂತೆ ಕಳಚಿಕೊಂಡ ಚಕ್ರ... ಕೇವಲ 5 ತಿಂಗಳ ಕಾರಿಗೆ ಇದೆಂಥಾ ಪರಿಸ್ಥಿತಿ!
2022 ಜೂನ್‌ನಲ್ಲಿ ಅನಾವರಣ, ದಾಖಲೆಯ ಬುಕಿಂಗ್ಸ್, ವಿತರಣೆಯಲ್ಲಿ ವಿಳಂಭ, ಕೈಸೇರಿದ ಬಳಿಕ ದೋಷಗಳ ಸರಮಾಲೆ ಇವು ಹೊಸ Mahindra Scorpio-N ಎಸ್‌ಯುವಿಯ ಹೊಸ ಅಪ್‌ಡೇಟ್ಸ್. ಕೇಳಲು ವಿಚಿತ್ರವೆನಿಸಿದರೂ ಸ್ಕಾರ್ಪಿಯೋ-ಎನ್ ಕಾರಿನ ಕುರಿತು ಆಗಾಗ್ಗೆ ದೂರುಗಳು ಕೇಳಿ ಬರುತ್ತಲೇ ಇವೆ.
ಮಹೀಂದ್ರಾ ಸ್ಕಾರ್ಪಿಯೋ-ಎನ್ ಮಾದರಿಗೆ ಸಿಕ್ಕಾಪಟ್ಟೆ ಡಿಮಾಂಡ್ ಇದೆ. ಬಿಡುಗಡೆಯಾದಾಗಿನಿಂದ ದಾಖಲೆಯ ಬುಕಿಂಗ್ಸ್ ಪಡೆದು ಡೆಲಿವರಿಗೆ ವರ್ಷಗಟ್ಟಲೇ ಕಾಯುವ ಪರಿಸ್ಥಿತಿಯಿದೆ. ಈ ನಡುವೆ ಸ್ಕಾರ್ಪಿಯೋ-ಎನ್‌ನಲ್ಲಿ ಉತ್ಪಾದನಾ ದೋಷಗಳು ಕಾಣಿಸಿಕೊಂಡಿರುವ ಕೆಲವು ನಿದರ್ಶನಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಮತ್ತೊಮ್ಮೆ ಮಹೀಂದ್ರಾ ಸ್ಕಾರ್ಪಿಯೊ-ಎನ್ ಅನ್ನು ಚಾಲನೆ ಮಾಡುವಾಗ ಮುಂಭಾಗದ ಚಕ್ರ ಕಳಚಿಕೊಂಡ ಘಟನೆ ವರದಿಯಾಗಿದೆ. ಕೇವಲ ಐದು ತಿಂಗಳ ಕಾರಿಗೆ ಇದೆಂಥಾ ಪರಿಸ್ಥಿತಿ ಎಂದು ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.

ವಿಷಯಕ್ಕೆ ಬಂದರೆ ಇದು ಸಾಮಾನ್ಯ ಅಪಘಾತದಂತೆ ಕಂಡರೂ, ಈ ಅಪಘಾತದ ಹಿಂದಿನ ಕಾರಣ ಆಘಾತಕಾರಿಯಾಗಿದೆ. ಈ ಘಟನೆಯು ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಸಂಭವಿಸಿದೆ, ಟಾಪ್-ಸ್ಪೆಕ್ ಮಹೀಂದ್ರಾ ಸ್ಕಾರ್ಪಿಯೋ-ಎನ್ Z8 (O) ರಸ್ತೆಯಲ್ಲಿ ಚಾಲನೆಯಲ್ಲಿದ್ದಾಗಲೇ ವೀಲ್ ಕಳಚಿಕೊಂಡು ರಸ್ತೆ ಮಧ್ಯೆ ನಿಯಂತ್ರಣ ಕಳೆದುಕೊಂಡು ಬದಿಯಲ್ಲಿ ನಿಂತಿದ್ದ ಮಹೀಂದ್ರಾ XUV700 ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳು ಆಗದಿದ್ದರೂ ಎರಡೂ ಕಾರುಗಳಿಗೆ ಹಾನಿಯಾಗಿದೆ.
ಸ್ಕಾರ್ಪಿಯೋ-ಎನ್‌ನ ಮುಂಭಾಗದ ಗ್ರಿಲ್, ಬಂಪರ್ ಮತ್ತು ಫೆಂಡರ್‌ಗಳು ಮುರಿದುಹೋಗಿವೆ. ಹಾಗೆಯೇ XUV700 ಎಸ್‌ಯುವಿಗೂ ಸಣ್ಣಪುಟ್ಟ ಹಾನಿಯಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಕಾರ್ಪಿಯೋ-ಎನ್ ಮಾಲೀಕ ಮಾತನಾಡಿ, ಇದು ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದಲ್ಲಿ ಸಂಭವನೀಯ ಪರಿಣಾಮಗಳು ಘೋರವಾಗಿರುತ್ತಿತ್ತು ಎಂದಿದ್ದಾರೆ. ಸ್ಥಳೀಯ ಮಹೀಂದ್ರಾ ಡೀಲರ್‌ಶಿಪ್‌ನೊಂದಿಗೆ ಮಾತುಕತೆ ನಡೆಸಿದ್ದು, ಚಕ್ರವು ಉತ್ಪಾದನಾ ದೋಷವಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.
ಬದಲಿ ವಾಹನ ಅಥವಾ ನೋಂದಣಿ ಮತ್ತು ಇತರ ಔಪಚಾರಿಕತೆಗಳು ಸೇರಿದಂತೆ ಎಸ್‌ಯುವಿಗೆ ಪಾವತಿಸಿದ ಪೂರ್ಣ ಮೊತ್ತವನ್ನು ಹಿಂದಿರುಗಿಸುವಂತೆ ಮಾಲೀಕರು ಒತ್ತಾಯಿಸಿದ್ದಾರೆ. ಆದರೆ, ಘಟನೆಯ ಕುರಿತು ಮಹೀಂದ್ರಾ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಮಹೀಂದ್ರಾ ವಾಹನವನ್ನು ಇನ್ನೂ ಪರಿಶೀಲಿಸದ ಕಾರಣ, ನಿಖರವಾಗಿ ಏನಾಯಿತು ಎಂಬುದರ ಕುರಿತು ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಮಾಲೀಕರು ಪಂಕ್ಚರ್ ರಿಪೇರಿ ಹಾಕಿಸಿಕೊಂಡಿದ್ದಾರೆ. ಈ ವೇಳೆ ಬೋಲ್ಟ್ಗಳನ್ನು ಸರಿಯಾಗಿ ಜೋಡಿಸದಿರುವ ಸಾಧ್ಯತೆಯಿದೆ ಎಂದು ಕೂಡ ಹೇಳಲಾಗುತ್ತಿದೆ.
ಈ ಹಿಂದೆಯೂ ದೋಷಗಳ ವರದಿ:
ಮಹೀಂದ್ರಾ ಸ್ಕಾರ್ಪಿಯೋ-ಎನ್ ಮಾಲೀಕರಾದ ಶಿಖಾ ಶ್ರೀವಾಸ್ತವ ಎಂಬುವರು ಎದುರಿಸಿದ್ದ ಸಮಸ್ಯೆಗಳ ಕುರಿತು ತಮ್ಮ ಕಾರಿನ ಫೋಟೋಗಳು ಮತ್ತು ವೀಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಕ್ಲಚ್ ಮತ್ತು ಗೇರ್, ಫ್ಲೋರ್‌ಗೆ ಅಂಟಿಕೊಂಡು ಹಿಂದಕ್ಕೆ ಬಾರದೇ ಮಾಲೀಕರು ಚಾಲನೆ ಮಾಡುವಾಗ ಸಮಸ್ಯೆ ಎದುರಾಗಿತ್ತು. ಕ್ಲಚ್ ಪೆಡಲ್ ಅನ್ನು ಎಳೆಯಲು ತಮ್ಮ ಪಾದವನ್ನು ಹೇಗೆ ಬಳಸಬೇಕು ಎಂಬುದನ್ನು ಪ್ರದರ್ಶಿಸುವ ವೀಡಿಯೊವನ್ನು ಅವರು ಅಪ್‌ಲೋಡ್ ಮಾಡಿದ್ದರು.
ಇನ್ನೊಬ್ಬರು ಮಾಲೀಕರು ಕೂಡ ಹೊಸ ಸ್ಕಾರ್ಪಿಯೋ-ಎನ್‌ನೊಂದಿಗೆ ಸಮಸ್ಯೆಗಳನ್ನು ಎದುರಿಸಿದ್ದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಸೋರಿಕೆಯಾದ ಕೂಲಂಟ್ ಸಮಸ್ಯೆಯಿಂದಾಗಿ SUV ಹೆಚ್ಚು ಬಿಸಿಯಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಸ್ಕಾರ್ಪಿಯೋ-ಎನ್ ಬಗ್ಗೆ ಮತ್ತೊಮ್ಮೆ ಪೋಸ್ಟ್ ಮಾಡಿದ ಅವರು ಕಾರನ್ನು ಐದು ನಿಮಿಷಗಳ ಕಾಲ AC ಆನ್ ಮಾಡಿ ಐಡಲಿಂಗ್ ಮಾಡಿದರೆ ಕಾರಿನ ಡಿಸ್‌ಪ್ಲೇ ಅಧಿಕ ಬಿಸಿಯಾಗುವ ಎಚ್ಚರಿಕೆಯನ್ನು ತೋರಿಸುತ್ತಿದೆ ಎಂದು ಕಾರಣವನ್ನು ತಿಳಿಸಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications