Mahindra: ದಸರಾ ಬರುವ ಮುನ್ನವೇ.. ಮಹೀಂದ್ರಾದಿಂದ ಭರ್ಜರಿ ಸಿಹಿಸುದ್ದಿ!
ಭಾರತದಲ್ಲಿ ಮಹೀಂದ್ರಾ (Mahindra) ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಬಾಕಿ ಉಳಿಸಿಕೊಂಡಿರುವ ಕಾರುಗಳ ಆರ್ಡರ್‌ನ್ನು ಹಬ್ಬದ ಋತು ಆರಂಭವಾಗುವ ಮೊದಲು ಗ್ರಾಹಕರಿಗೆ ತಲುಪಿಸಲು ಸಾಕಷ್ಟು ಶ್ರಮವಾಗಿಸುತ್ತಿದ್ದು, ಜನಪ್ರಿಯ ಎಸ್‌ಯುವಿಗಳಾದ ಸ್ಕಾರ್ಪಿಯೋ-ಎನ್, XUV700 ಹಾಗೂ ಥಾರ್ ಕಾಯುವಿಕೆ ಅವಧಿಕ್ಕೆ ಒಂದಷ್ಟು ವಾರಗಳು ಕಡಿಮೆಯಾಗಿದೆ.
ಪ್ರಸ್ತುತ, ಮಹೀಂದ್ರಾ ಕಂಪನಿಯೂ 2.80 ಲಕ್ಷಕ್ಕೂ ಹೆಚ್ಚಿನ ಕಾರುಗಳನ್ನು ಗ್ರಾಹಕರಿಗೆ ಪೂರೈಸಬೇಕಾಗಿದೆ. ಕೆಲವು ತಿಂಗಳ ಹಿಂದೆ, ಸ್ಕಾರ್ಪಿಯೋ-ಎನ್ ಒಂದುವರೆ ವರ್ಷಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿತ್ತು. ಇತ್ತೀಚಿನ ವರದಿ ಪ್ರಕಾರ, ಬುಕ್ಕಿಂಗ್ ಮಾಡಿದ 8 ವಾರಗಳಲ್ಲಿಯೇ ಸ್ಕಾರ್ಪಿಯೋ-ಎನ್ ಅನ್ನು ಡಿಲೆವರಿ ಮಾಡಲಾಗುತ್ತದೆ. ಆದರೆ, ಟಾಪ್ ಎಂಡ್ ಮಾದರಿಗಳು ಮಾತ್ರ ದೀರ್ಘ ಕಾಯುವಿಕೆ ಅವಧಿಯನ್ನು ಹೊಂದಿದ್ದು, 55 ವಾರಗಳಲ್ಲಿ ವಿತರಣೆಯಾಗಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ-ಎನ್ ರೂ.13.26 ಲಕ್ಷದಿಂದ ರೂ.24.53 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಎಸ್‌ಯುವಿ, 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಹಾಗೂ 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಸಿಗಲಿದ್ದು, 6 ಸ್ವೀಡ್ ಆಟೋಮೆಟಿಕ್ ಅಥವಾ 6 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
6, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಲಭ್ಯವಿರುವ ಈ ಕಾರು, ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ನಪೋಲಿ ಬ್ಲಾಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS ಪಡೆದಿದೆ.

ಮಹೀಂದ್ರಾದ ಮತ್ತೊಂದು ಪ್ರಖ್ಯಾತ ಎಸ್‌ಯುವಿ, XUV700 ಕಾಯುವಿಕೆ ಅವಧಿಯೂ ಒಂದು ವರ್ಷದೊಳಗೆ ಇಳಿಕೆಯಾಗಿದೆ. ಎಂಎಕ್ಸ್, ಎಎಕ್ಸ್3 ಹಾಗೂ ಎಎಕ್ಸ್5 ರೂಪಾಂತರಗಳು ಗರಿಷ್ಠವೆಂದರೆ 40 ವಾರಗಳಲ್ಲಿ ವಿತರಣೆಯಾಗಲಿವೆ. ಮ್ಯಾನುವಲ್ ವೇರಿಯೆಂಟ್ 17 ವಾರಗಳಲ್ಲಿ ಡಿಲೆವರಿಯಾಗಲಿದ್ದು, ಟಾಪ್ ಎಂಡ್ ಮಾದರಿ ಎಎಕ್ಸ್7 ರೂಪಾಂತರ 24 ರಿಂದ 34 ವಾರಗಳಲ್ಲಿ ಗ್ರಾಹಕರ ಕೈಸೇರಲಿದೆ.
ಮಹೀಂದ್ರಾ XUV700 ಐದು ರೂಪಾಂತರಗಳ ಆಯ್ಕೆಯಲ್ಲಿ ರೂ.14.03 ಲಕ್ಷದಿಂದ ರೂ.26.57 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ. ಈ ಕಾರು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಡಿಜಿಟಲ್ ಸ್ಕ್ರೀನ್ಸ್, ಆಕರ್ಷಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿರುವ ಮಹೀಂದ್ರಾ ಥಾರ್, ಭಾರೀ ಬೇಡಿಕೆಯನ್ನು ಹೊಂದಿದ್ದು, ಧೀರ್ಘ ಕಾಯುವಿಕೆ ಅವಧಿಯನ್ನು ಒಳಗೊಂಡಿದೆ. ವಿತರಣೆಯಾಗಲು ಬರೋಬ್ಬರಿ 70 ವಾರಗಳು ಬೇಕು. ಕಳೆದ ತಿಂಗಳು ಕಾಯುವಿಕೆ ಸಮಯ ಇದಕ್ಕಿದ್ದಂತೆ 18 ತಿಂಗಳಿಗೆ ತಲುಪಿತ್ತು. ಥಾರ್, 2WD (ಟೂ ವೀಲ್ ಡ್ರೈವ್) ಹಾಗೂ 4WD (ಫೋರ್ ವೀಲ್ ಡ್ರೈವ್) ಆಯ್ಕೆಯಲ್ಲಿ ರೂ.14.03 ಲಕ್ಷದಿಂದ ರೂ.16.93 ಲಕ್ಷ ಬೆಲೆಯಲ್ಲಿ ಸಿಗುತ್ತದೆ.
ಮಹೀಂದ್ರಾ ಥಾರ್, 15.2 kmpl ಮೈಲೇಜ್ ನೀಡಲಿದ್ದು, ಎವರೆಸ್ಟ್ ವೈಟ್, ರೆಡ್ ರೇಜ್, ನಪೋಲಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications