Mahindra Scorpio Sales: ಮಾರಾಟದಲ್ಲಿ ಭಾರೀ ವೇಗದಲ್ಲಿ ಮುನ್ನುಗುತ್ತಿರುವ ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡು ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯ ಎಸ್‍ಯುವಿಗಳ ಸರಣೆಯಲ್ಲಿ ಬೊಲೆರೊ ನಂತರ ಸ್ಕಾರ್ಪಿಯೊ ಎರಡನೇ ಹೆಚ್ಚು ಮಾರಾಟವಾಗುವ ಎಸ್‍ಯುವಿಯಾಗಿದೆ. ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡುವುದನ್ನು ಮುಂದುವರೆಸಿದೆ.

ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡಲಾಗುತ್ತದೆ, ಈ ಎರಡೂ ಎಸ್‍ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ, 2022ರ ಏಪ್ರಿಲ್ ತಿಂಗಳಿನಿಂದ 2023ರ ಫೆಬ್ರವರಿ ತಿಂಗಳ ಅವಧಿವರೆಗೆ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಮತ್ತು ಸ್ಕಾರ್ಪಿಯೋ-ಎನ್ ಮಾದರಿಗಳ ಒಟ್ಟು 69,324 ಯುನಿಟ್ ಗಳನ್ನು ಮಾರಾಟ ಮಾಡಿವೆ.

ಮಹೀಂದ್ರಾ ಸ್ಕಾಪಿಯೋ ಮಾರಾಟ

ಇವುಗಳಲ್ಲಿ 68,147 ಯುನಿಟ್‌ಗಳು ದೇಶೀಯ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ದಾಖಲಾದ 32,635 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡಾ 108 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. 2023ರ ಜನವರಿ ತಿಂಗಳ ಹೊತ್ತಿಗೆ, ಸ್ಕಾರ್ಪಿಯೋ ಮತ್ತು ಸ್ಕಾರ್ಪಿಯೋ ಎನ್ ಮಾದರಿಗಳಿಗೆ 1.19 ಲಕ್ಷ ಬುಕ್ಕಿಂಗ್ ಗಳನ್ನು ಪಡೆದುಕೊಂಡಿತು.

ನವೀಕರಿಸಿದ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯು ಗಟ್ಟಿಮುಟ್ಟಾದ ನಿರ್ಮಾಣ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸಿಗ್ನೇಚರ್ ಬೋಲ್ಡ್ ಲುಕ್‌ನೊಂದಿಗೆ ಎಸ್‍ಯುವಿ ದೇಶದಾದ್ಯಂತ ಗ್ರಾಹಕರನ್ನು ಆಕರ್ಷಿಸಿದೆ.ಅದರ ಜನಪ್ರಿಯತೆಯಿಂದಾಗಿ, ಮೂರನೇ ತಲೆಮಾರಿನ ಮಾದರಿಯ ಆಗಮನದ ಹೊರತಾಗಿಯೂ, ಸ್ಕಾರ್ಪಿಯೊ ಎನ್, ಮಹೀಂದ್ರಾ ಎರಡನೇ ತಲೆಮಾರಿನ ಮಾದರಿಯನ್ನು ಮಾರಾಟದಲ್ಲಿ ಇರಿಸಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಈ ಮಾದರಿಗೆ ಸ್ಕಾರ್ಪಿಯೊ ಕ್ಲಾಸಿಕ್ ಎಂದು ಮರುನಾಮಕರಣ ಮಾಡಿದರು.

ಮಹೀಂದ್ರಾ ಸ್ಕಾಪಿಯೋ ಮಾರಾಟ

ಸ್ಕಾರ್ಪಿಯೋ ಕ್ಲಾಸಿಕ್ ರಿಫ್ರೆಶ್ ಲುಕ್ ಮತ್ತು ಪವರ್‌ಟ್ರೇನ್ ಅಪ್‌ಗ್ರೇಡ್‌ಗಳು ಎಸ್‌ಯುವಿಯ ಮಾರಾಟಕ್ಕೆ ಒಲವು ತೋರುತ್ತಿವೆ. ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದರೆ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯು ಈ ಹಿಂದಿನ ತಲೆಮಾರಿನ ಫೀಚರ್ಸ್ ಗಳೊಂದಿಗೆ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಈ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯ ಮುಂಭಾಗದ ಡಿಸೈನ್ ಮತ್ತು ಕ್ಯಾಬಿನ್ ಒಳಾಂಗಣದಲ್ಲಿ ಕೂಡ ಕೆಲವು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ಬದಲಾವಣೆಯ ನಂತರ ನವೀಕರಿಸಿದ ಮಾದರಿಯು ಹಳೆಯ ಮಾದರಿಯ ವಿನ್ಯಾಸವನ್ನೇ ನೆನಪಿಸುತ್ತದೆ. ಈ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಇದರಲ್ಲಿ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿಲ್ಲ. ಇದು 132 ಬಿಎಚ್‌ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಹೀಂದ್ರಾ ಸ್ಕಾಪಿಯೋ ಮಾರಾಟ

ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‍ಯುವಿಯಲ್ಲಿ ಎಂಜಿನ್ ಸೆಟಪ್ 2.0-ಲೀಟರ್, ಟರ್ಬೊ-ಪೆಟ್ರೋಲ್ ಮತ್ತು 2.2L mHawk ಡೀಸೆಲ್ ಅನ್ನು ಒಳಗೊಂಡಿದೆ. ಪೆಟ್ರೋಲ್ ಮೋಟರ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 203 ಬಿಹೆಚ್‍ಪಿ ಪವರ್ ಮತು 370 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಪೆಟ್ರೋಲ್ ಆಟೋಮ್ಯಾಟಿಕ್ ಸಂಯೋಜನೆಯು Z4, Z8 ಮತ್ತು Z8L ರೂಪಾಂತರಗಳಲ್ಲಿ ಲಭ್ಯವಿದೆ. ಎಲ್ಲಾ ಪೆಟ್ರೋಲ್ ರೂಪಾಂತರಗಳು 2WD ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ. ಇನ್ನು 2-ಲೀಟರ್, mHawk ಡೀಸೆಲ್ ಯುನಿಟ್ ಅನ್ನು ಹೊಂದಿದೆ. ಇದು Z2 ಮತ್ತು Z4 ರೂಪಾಂತರಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ 130 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Article Published On: Thursday, March 23, 2023, 17:30 [IST]
English summary
Mahindra scorpio sales 69000 units fy 22 23 report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+