Mahindra Thar 4×4 ಎವರೆಸ್ಟ್ ವೈಟ್ SUV ಡೀಲರ್‌ಶಿಪ್ ಆಗಮನ... ಹೇಗಿದೆ ನೋಡಿ

ಭಾರತದ ಆಫ್ ರೋಡ್ ವಿಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ Mahindra Thar 4×4 ರೂಪಾಂತರಗಳ ಪರಿಚಯದೊಂದಿಗೆ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಈ 4X4 ರೂಪಾಂತರಗಳಿಗಾಗಿ ಕಂಪನಿಯು ಎರಡು ಬಣ್ಣಗಳ ಆಯ್ಕೆಯಲ್ಲಿ ಮಾತ್ರ ನೀಡಿತ್ತು. ಇದೀಗ ಅದರಲ್ಲಿ ಒಂದು ಡೀಲರ್‌ಶಿಪ್ ತಲುಪಿ ಸದ್ದು ಮಾಡುತ್ತಿದೆ.

ಕಂಪನಿಯು ಮಹೀಂದ್ರಾ ಥಾರ್ 4X4 ರೂಪಾಂತರಗಳಿಗಾಗಿ ಎವರೆಸ್ಟ್ ವೈಟ್ ಮತ್ತು ಬ್ಲೇಜಿಂಗ್ ಬ್ರೋಂಜ್ ಎಂಬ ಬಣ್ಣಗಳನ್ನು ಪರಿಚಯಿಸಿದೆ. ಆರಂಭದಲ್ಲಿ, ಈ ಬಣ್ಣಗಳನ್ನು SUV ಯ 4X2 ರೂಪಾಂತರಗಳೊಂದಿಗೆ ಮಾತ್ರ ನೀಡಲಾಗಿತ್ತು. ಆದರೆ ಈಗ ಇದೇ ಬಣ್ಣಗಳೊಂದಿಗೆ 4X4 ರೂಪಾಂತರಗಳಿಗೂ ನೀಡಿರುವುದು ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದೆ. ಈ ಮಾದರಿಗಳನ್ನು ಬುಕ್ ಮಾಡಿಕೊಂಡಿರುವ ಗ್ರಾಹಕರು ಡೀಲರ್‌ಶಿಪ್ ತಲುಪಿರುವ ಹೊಸ ಎವರೆಸ್ಟ್ ವೈಟ್ 4X4 ರೂಪಾಂತರದ ವಿಡಿಯೋವನ್ನು ಒಮ್ಮೆ ನೋಡಿ.

Mahindra Thar 4×4 Everest White SUV Dealership Arrival... See What Its Like

ಮೊದಲಿಗೆ ವಿಡಿಯೋದಲ್ಲಿ ಕಂಡುಬರುವ 2023 ರ ಮಾದರಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ ಮುಂಭಾಗದ ಫೆಸಿಯಾ ಮತ್ತು ಗ್ರಿಲ್ ಅನ್ನು ಹಳೆಯ ಮಾದರಿಯಂತೆಯೇ ನೀಡಲಾಗಿದೆ. ಇದರ ಜೊತೆಗೆ ಮಹೀಂದ್ರಾ ಬ್ಯಾಡ್ಜ್ ಹಾಗೂ ಹ್ಯಾಲೋಜನ್ ಹೆಡ್‌ಲ್ಯಾಂಪ್ ಸೆಟಪ್‌ಗಳನ್ನು ನೋಡಬಹುದು. ಅದರ ಕೆಳಗೆ ಎರಡು ಫಾಗ್ ಲ್ಯಾಂಪ್‌ಗಳೊಂದಿಗೆ ಅದೇ ಮ್ಯಾಟ್ ಬ್ಲಾಕ್ ಫ್ರಂಟ್ ಬಂಪರ್ ಅನ್ನು ನೋಡಬಹುದು. ಉಳಿದಂತೆ ಎಲ್ಇಡಿ ಡಿಆರ್ಎಲ್‌ಗಳು ಮತ್ತು ಟರ್ನ್ ಇಂಡಿಕೇಟರ್‌ಗಳು ಹಾಗೇ ಉಳಿದಿವೆ.

ಕಾರಿನ ಬದಿಗಳಲ್ಲಿ ಕಪ್ಪು ಮತ್ತು ಎವರೆಸ್ಟ್ ಬಿಳಿ ಬಣ್ಣದ ಥಾರ್‌ನಲ್ಲಿ ಡ್ಯುಯಲ್ ಟೋನ್ ನೋಟವು ಅದ್ಭುತವಾಗಿ ಕಾಣುತ್ತದೆ. ಹಾಗೆಯೇ ಫ್ಯಾಕ್ಟರಿ ಫಿಟೆಡ್ ಎಂದು ಹೇಳಬಹುದಾದ ಗನ್‌ಮೆಟಲ್ ಗ್ರೇ ಬಣ್ಣದಲ್ಲಿ 18 ಇಂಚಿನಲ್ಲಿ ನೀಡಲಾದ ಅಲಾಯ್ ವೀಲ್‌ಗಳು ಎಸ್‌ಯುವಿ ಅನ್ನು ಎದ್ದು ಕಾಣುವಂತೆ ಮಾಡುತ್ತವೆ. ಇಂಟೀರಿಯರ್ ವಿಷಯಕ್ಕೆ ಬಂದರೆ ಕಂಪನಿಯು ಎಲ್ಲಾ ಇತರ ಥಾರ್‌ ಮಾದರಿಗಳಂತಯೇ ಇದನ್ನು ಸಜ್ಜುಗೊಳಿಸಿದ್ದು, ಎಲ್ಲಾ ಅಗತ್ಯ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Mahindra Thar 4×4 Everest White SUV Dealership Arrival... See What Its Like

ಇನ್ನು ಎಂಜಿನ್ ವಿಷಯಕ್ಕೆ ಬಂದರೆ ಕಂಪನಿಯು 4X4 ರೂಪಾಂತರಗಳಿಗಾಗಿ ಎರಡು ಡೀಸೆಲ್ ಎಂಜಿನ್ ಮತ್ತು ಪೆಟ್ರೋಲ್ ಆಯ್ಕೆಯನ್ನು ನೀಡಿದೆ. ಮೊದಲಿಗೆ ಪೆಟ್ರೋಲ್ ಆಯ್ಕೆಯನ್ನು ನೋಡುವುದಾದರೆ 2.0 ಲೀಟರ್ ಪೆಟ್ರೋಲ್ 4X4 ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ. ಹಾಗೆಯೇ ಇದರ 2.0 ಲೀಟರ್ ಪೆಟ್ರೋಲ್ ಮೋಟಾರ್ ಸಹ 4X2 ಸಂರಚನೆಯೊಂದಿಗೆ ಬರುತ್ತದೆ. ಇನ್ನು ಡೀಸೆಲ್ ಆಯ್ಕೆಗಳು 1.5 ಲೀಟರ್ ಮತ್ತು 2.2 ಲೀಟರ್ ಎಂಜಿನ್ ಅನ್ನು ಒಳಗೊಂಡಿವೆ.

1.5 ಲೀಟರ್ ಡೀಸೆಲ್ ಎಂಜಿನ್ 4X2 ಕಾನ್ಫಿಗರೇಶನ್‌ನೊಂದಿಗೆ ಮಾತ್ರ ಲಭ್ಯವಿದೆ, ಆದರೆ 2.2 ಲೀಟರ್ ಡೀಸೆಲ್ 4X4 ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ. ಈ ಎರಡೂ ಪವರ್‌ ಟ್ರೇನ್ ಗಳು ಹಿಂದಿನ ಚಕ್ರಗಳಿಗೆ ಪವರ್ ಅನ್ನು ನೀಡುತ್ತವೆ. ಪ್ರಸ್ತುತ ಥಾರ್ 4×4 ಬೆಲೆ ರೂ. 13. 59 ಲಕ್ಷದಿಂದ ಆರಂಭವಾಗಿ ರೂ. 16. 29 ಲಕ್ಷದವರೆಗೆ ಇದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಪ್ರಕಾರವಾಗಿದೆ.

ಸ್ಟ್ಯಾಂಡರ್ಡ್ ಥಾರ್ 4×4 ಮಾದರಿಯಲ್ಲಿರುವ 2.2 ಲೀಟರ್ ಡೀಸೆಲ್ ಎಂಜಿನ್‌ಗೆ ವಿರುದ್ಧವಾಗಿ, 4×2 RWD ರೂಪಾಂತರವು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನಿಂದ ಸೆಳೆಯುತ್ತದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಥಾರ್ 4×2 RWD ಅದೇ 2.0 ಲೀಟರ್ ಪೆಟ್ರೋಲ್ ಯೂನಿಟ್‌ನಿಂದ ಚಾಲಿತವಾಗುತ್ತದೆ. ಇದು 6 ಸ್ಪೀಡ್ ಟಾರ್ಕ್ ಕರ್ನವಾಟರ್ ಮೂಲಕ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, April 19, 2023, 9:54 [IST]
English summary
Mahindra thar 4 4 everest white suv dealership arrival
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+