Mahindra Thar: ಶಕ್ತಿಯುತ ಮಹೀಂದ್ರಾ ಥಾರ್ 5 ಡೋರ್ ಮತ್ತೆ ಕಾಣಿಸಿತು, ವಿಶೇಷತೆಗಳೇನು?

ಆಫ್-ರೋಡ್ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರಾ ಥಾರ್ (Mahindra Thar) ಬಹುದೊಡ್ಡ ಬ್ರ್ಯಾಂಡ್. ಪ್ರಸ್ತುತ, 3 ಡೋರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು 5 ಡೋರ್ ಥಾರ್ ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈಗಾಗಲೇ, ದೇಶದ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಹಲವು ಬಾರಿ ಕಂಡುಬಂದಿದೆ.

ಮಹೀಂದ್ರಾ ಕಂಪನಿಯು, ಭಾರತದ ಮಾರುಕಟ್ಟೆಯಲ್ಲಿ ಥಾರ್ 5 ಡೋರ್ ಎಸ್‌ಯುವಿಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಅದಕ್ಕೂ ಕೆಲವು ತಿಂಗಳ ಮೊದಲು ಈ ಕಾರನ್ನು ಅನಾವರಣಗೊಳಿಸಿ, ಒಂದಷ್ಟು ವಿವರಗಳ ಬಗ್ಗೆ ಬೆಳಕು ಚೆಲ್ಲಬಹುದು. ಸದ್ಯ, ಇಂಟರ್ನೆಟ್ ನಲ್ಲಿ ಸೋರಿಕೆಯಾಗಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೆಲವೊಂದು ಬದಲಾವಣೆಗಳು ತಿಳಿಯುತ್ತವೆ.

Mahindra Thar: ಶಕ್ತಿಯುತ ಮಹೀಂದ್ರಾ ಥಾರ್ 5 ಡೋರ್ ಮತ್ತೆ ಕಾಣಿಸಿತು, ವಿಶೇಷತೆಗಳೇನು?

ನೂತನ ಮಹೀಂದ್ರಾ ಥಾರ್ 5 ಡೋರ್, ಕೊಂಚ ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರುತ್ತದೆ ಎಂದು ಸ್ಪೈ ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ 3 ಡೋರ್ ಥಾರ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಅದಕ್ಕೆ ಹೋಲಿಸಿದರೆ, ಮುಂಬರಲಿರುವ ಥಾರ್ 5 ಡೋರ್, 10 ಇಂಚಿನ ಟಚ್‌ಸ್ಕ್ರೀನ್ ಪಡೆದಿರುವ ನೀರಿಕ್ಷೆಯಿದೆ.

ಮುಂಬರುವ ಮಹೀಂದ್ರಾ ಥಾರ್ 5 ಡೋರ್ ಎಸ್‌ಯುವಿ, ಆಫ್-ರೋಡ್ ಪ್ರಿಯರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಪ್ರಮುಖವಾಗಿ, ಆಕರ್ಷಕ ಸನ್‌ರೂಫ್, ಫೋರ್ - ಸ್ಪೋಕ್ ಸ್ಟೀರಿಂಗ್ ವೀಲ್, ಸರ್ಕ್ಯುಲರ್ ಎಸಿ ವೆಂಟ್ಸ್, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್ಸ್, ಫ್ರಂಟ್ ಆರ್ಮ್‌ರೆಸ್ಟ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿರಬಹುದು. ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿರಲಿದ್ದು, ಸರ್ಕ್ಯುಲರ್ ಹೆಡ್ ಲ್ಯಾಂಪ್ಸ್ ಹಾಗೂ ಫಾಗ್ ಲೈಟ್ಸ್ ಹೊಂದಿರಲಿದೆ.

Mahindra Thar: ಶಕ್ತಿಯುತ ಮಹೀಂದ್ರಾ ಥಾರ್ 5 ಡೋರ್ ಮತ್ತೆ ಕಾಣಿಸಿತು, ವಿಶೇಷತೆಗಳೇನು?

ಮಹೀಂದ್ರಾ ಥಾರ್ 5 ಡೋರ್ ಎಂಜಿನ್ ಬಗ್ಗೆ ಮೂಲಗಳಿಂದ ಒಂದಷ್ಟು ಮಾಹಿತಿ ಲಭ್ಯವಾಗಿದೆ. ಇದು, 2.0 ಲೀಟರ್ mStallion ಪೆಟ್ರೋಲ್ ಹಾಗೂ 2.2 mHawk ಡೀಸೆಲ್ ಎಂಜಿನ್ ಜೊತೆಗೆ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುವ ಸಾಧ್ಯತೆಯಿದೆ. ಬೆಲೆ ವಿಚಾರವಾಗಿ ಯಾವುದೇ ಮಾಹಿತಿಯಿಲ್ಲ. ಆದರೂ ರೂ.15.00 - 16.00 ಲಕ್ಷ ಬೆಲೆಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ 3 ಡೋರ್ ಮಹೀಂದ್ರಾ ಥಾರ್, ರೂ.10.54 ಲಕ್ಷದಿಂದ ರೂ.16.78 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 4WD (ಫೋರ್ ವೀಲ್ ಡ್ರೈವ್) ಹಾಗೂ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. 15.2 kmpl ಮೈಲೇಜ್ ನೀಡುತ್ತದೆ.

ಎವರೆಸ್ಟ್ ವೈಟ್, ರೆಡ್ ರೇಜ್, ನಪೋಲಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಸಿಗುವ 3 ಡೋರ್ ಮಹೀಂದ್ರಾ ಥಾರ್, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕ್ರೂಸ್ ಕಂಟ್ರೋಲ್, ಮ್ಯಾನ್ಯುವಲ್ ಎಸಿ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ ಅನ್ನು ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಮಹೀಂದ್ರಾ ಥಾರ್ 3 ಡೋರ್ ಅತ್ಯುತ್ತಮವಾಗಿದ್ದು, ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನೇಕ ಸೇಫ್ಟಿ ಫೀಚರ್ಸ್ ಹೊಂದಿದೆ. ಈ ಎಸ್‌ಯುವಿಗೆ ಭಾರತದಲ್ಲಿ ಭರ್ಜರಿ ಬೇಡಿಕೆಯಿದ್ದು, 78 ವಾರಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿದೆ. ಇವತ್ತಿಗೂ ಪ್ರತಿ ತಿಂಗಳು ಹತ್ತು ಸಾವಿರಕ್ಕೂ ಹೆಚ್ಚಿನ ಬುಕ್ಕಿಂಗ್ ಆಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, August 25, 2023, 19:00 [IST]
English summary
Mahindra thar 5 door offroad suv spotted again details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+