Mahindra Thar: ಭಾರತದಲ್ಲಿ ಧೂಳೆಬ್ಬಿಸಲು ಇಷ್ಟರಲ್ಲಿಯೇ ಬರಲಿದೆ 5 ಡೋರ್ 'ಮಹೀಂದ್ರಾ ಥಾರ್' ಅದಕ್ಕೆ ಸಿಕ್ತು ಸಾಕ್ಷಿ!

ಮಹೀಂದ್ರಾ ಕಂಪನಿಯ ಆಫ್ ರೋಡ್ ಎಸ್‌ಯುವಿ 3 ಡೋರ್ 'ಥಾರ್' ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದ್ದು, 2010 ರಿಂದಲೂ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿದೆ. ಇದೀಗ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5 ಡೋರ್ ಥಾರ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಕಂಪನಿ ನಿರತವಾಗಿದ್ದು, ಆ ಬಗ್ಗೆ ಇಲ್ಲಿದೆ ವಿವರ.

ದೇಶದ ರಸ್ತೆಯಲ್ಲಿ ಈಗಾಗಲೇ 5 ಡೋರ್ ಮಹೀಂದ್ರಾ ಥಾರ್ ಎಸ್‌ಯುವಿ, ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ಸದ್ಯ, ಮತ್ತೊಮ್ಮೆ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಕೊಂಚ ಉದ್ದವಾದ ವೀಲ್‌ಬೇಸ್‌ ಪಡೆದಿರುವಂತೆ ಭಾಸವಾಗುತ್ತದೆ. ರೇರ್ ಡೋರ್ ನೋಡಿದಾಗ ಹೆಚ್ಚಿನ ಬೂಟ್ ಸ್ಪೇಸ್ ಹೊಂದಿರಲಿದೆ ಎಂದು ಸುಲಭವಾಗಿ ಹೇಳಬಹುದು. ಜೊತೆಗೆ ಅಲಾಯ್ ವೀಲ್ಸ್ ಡಿಸೈನ್ 3 ಡೋರ್ ಥಾರ್ ಗಿಂತ ಭಿನ್ನ ಕಾಣುತ್ತದೆ.

 Mahindra Thar: ಭಾರತದಲ್ಲಿ ಧೂಳೆಬ್ಬಿಸಲು ಇಷ್ಟರಲ್ಲಿಯೇ ಬರಲಿದೆ 5 ಡೋರ್ ಮಹೀಂದ್ರಾ ಥಾರ್ ಅದಕ್ಕೆ ಸಿಕ್ತು ಸಾಕ್ಷಿ!

ಮುಂಬರಲಿರುವ 5 ಡೋರ್ ಮಹೀಂದ್ರಾ ಥಾರ್ ಕೂಡ 3 ಡೋರ್ ನಂತೆಯೇ ಒಳಭಾಗ ಹಾಗೂ ಹೊರಭಾಗದ ವಿನ್ಯಾಸವನ್ನು ಹೊಂದಿರುವ ಸಾಧ್ಯತೆ ಇದ್ದು, 4x4 ಜೊತೆಗೆ 4x2 ಕಾನ್ಫಿಗರೇಶನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಬೆಲೆಯು ಸಹ ಸ್ಪರ್ಧಾತ್ಮಕವಾಗಿಯೇ ಇರಲಿದ್ದು, ರೂ.10 ರಿಂದ 15 ಲಕ್ಷ ದರದಲ್ಲಿ ದೊರೆಯಬಹುದು. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದಿರುವ ನೀರಿಕ್ಷೆಯಿದೆ.

ಈ 5 ಡೋರ್ ಮಹೀಂದ್ರಾ ಥಾರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, 3 ಡೋರ್ ಥಾರ್ ನಂತೆಯೇ 130 PS ಪವರ್ ಉತ್ಪಾದಿಸುವ 2.2 ಲೀಟರ್ ಡೀಸೆಲ್ ಹಾಗೂ 150 PS ಪವರ್ ಉತ್ಪಾದಿಸಲು ಸಾಮರ್ಥ್ಯವಿರುವ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಜೊತೆಗೆ ಆಟೋಮೆಟಿಕ್ ಹಾಗೂ ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಸಿಗಬಹುದು.

 Mahindra Thar: ಭಾರತದಲ್ಲಿ ಧೂಳೆಬ್ಬಿಸಲು ಇಷ್ಟರಲ್ಲಿಯೇ ಬರಲಿದೆ 5 ಡೋರ್ ಮಹೀಂದ್ರಾ ಥಾರ್ ಅದಕ್ಕೆ ಸಿಕ್ತು ಸಾಕ್ಷಿ!

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 3 ಡೋರ್ ಥಾರ್ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದಾದರೆ, ಇದು ರೂ.10.54 ಲಕ್ಷದಿಂದ ರೂ.16.78 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ AX(O) ಹಾಗೂ LX ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, RWD/ 4X4 ತಂತ್ರಜ್ಞಾನವನ್ನು ಹೊಂದಿದ್ದು, 15.2 kmpl ಮೈಲೇಜ್ ನೀಡಲಿದೆ.

3 ಡೋರ್ ಥಾರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರ 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 150 PS ಗರಿಷ್ಠ ಪವರ್ ಹಾಗೂ 320 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2.2 ಲೀಟರ್ ಡೀಸೆಲ್ ಎಂಜಿನ್, 130 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಮಹೀಂದ್ರಾ ಥಾರ್ 3 ಡೋರ್ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಥಾರ್ ಕ್ರೂಸ್ ಕಂಟ್ರೋಲ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್) ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.

ಒಟ್ಟಾರೆ, ಮುಂಬರಲಿರುವ ಮಹೀಂದ್ರಾ ಥಾರ್ 5 ಡೋರ್, ಮುಂದಿನ ಒಂದೆರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಜಿಮ್ನಿ 5ಗೆ ಭಾರೀ ಪೈಪೋಟಿ ನೀಡಲಿದೆ. ಈ ಥಾರ್ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆ ಇದ್ದು, ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಕಂಪನಿ ನಡೆಸುತ್ತಿರುವ ಪರೀಕ್ಷಾರ್ಥ ಸಂಚಾರವನ್ನು ಗಮನಿಸದಾಗ ಇದು ಆದಷ್ಟು ಬೇಗ ನಿಜವಾಗಬಹುದು. ಆದರೆ, ಮಹೀಂದ್ರಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Image Courtesy: Motorscribes/Instagram

Article Published On: Monday, April 24, 2023, 19:04 [IST]
English summary
Mahindra thar 5 door spied again testing details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+