ಮಹೀಂದ್ರಾ ಥಾರ್‌ 4X2 ಡೆಲಿವರಿ ಪಡೆಯಲು ಇಷ್ಟು ವರ್ಷ ಕಾಯಬೇಕಾ?: ತಾಳ್ಮೆಯೇ ಎಲ್ಲ ಇಲ್ಲಿ

ಸದ್ಯಕ್ಕೆ ಭಾರತೀಯರ ನೆಚ್ಚಿನ ಕಾರು ತಯಾರಿಕಾ ಕಂಪನಿಗಳಲ್ಲಿ ಮಹೀಂದ್ರಾವು ಒಂದು. ಈಗಾಗಲೇ ಹಲವಾರು ಜನಪ್ರಿಯ ಕಾರುಗಳನ್ನು ಮಾರುಕಟ್ಟೆಗೆ ತಂದಿರುವ ಮಹೀಂದ್ರಾ ಕಾರು ಪ್ರೀಯರ ನೆಚ್ಚಿನ ಕಂಪನಿಯಾಗಿ ಬದಲಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದೇ ಹೇಳಬಹುದು.

ಇನ್ನು ಮಹೀಂದ್ರಾ ಕಂಪನಿಯ ಪ್ರಮುಖ ಕಾರುಗಳಲ್ಲಿ ಥಾರ್‌ ಸಹ ಒಂದು. ಈಗಾಗಲೇ ಭಾರತದಲ್ಲಿ ಹಲವಾರು ಕಾರು ಪ್ರೀಯರ ನೆಚ್ಚಿ ಎಸ್‌ಯುವಿಯಾಗಿ ಬದಲಾಗಿರುವ ಥಾರ್‌, ರಸ್ತೆಯಲ್ಲಿ ಬರುತ್ತಿದ್ದರೆ ಅದರ ಗತ್ತೇ ಬೇರೆ. ಎಂತವರಾದರೂ ಸಹ ಒಂದು ಕ್ಷಣ ಅತ್ತ ತಿರುಗಿ ನೋಡುವಂತಹ ಗಾಂಭೀರ್ಯ ಈ ಥಾರ್‌ಗೆ ಇದೆ.

Mahindra Thar 4X2

ಮಹೀಂದ್ರಾ ಕಂಪನಿಯು ಕೆಲವು ಸಮಯಗಳ ಹಿಂದೆಯಷ್ಟೇ ಥಾರ್‌ ವೇರಿಯಂಟ್‌ನ 4X2 ವೇರಿಯಂಟ್‌ ಅನ್ನು ಮಾರುಕಟ್ಟೆಗೆ ತಂದಿತ್ತು. ಯಾರು ಹೆಚ್ಚಾಗಿ ಆಫ್‌ರೋಡ್‌ ಹೋಗುವುದಿಲ್ಲ ಆದರೆ ಥಾರ್‌ ಬೇಕು ಎನ್ನುವವರಿಗೆ ಇದೊದು ಸುವರ್ಣಾವಕಾಶವಾಗಿತ್ತು. ಇದಕ್ಕಿಂತ ಮೊದಲು ಮಹೀಂದ್ರಾ ಥಾರ್‌ ಕೇವಲ 4X4 ವೇರಿಯಂಟ್‌ನಲ್ಲಿ ಲಭ್ಯವಾಗಿತ್ತು. ಇನ್ನು ಸಹಜವಾಗಿಯೇ 4X2 ನ ವೇರಿಯಂಟ್‌ಗೆ ಬೇಡಿಕೆ ಹೆಚ್ಚಾಗಿದೆ.

ಇದೀಗ ಮಹೀಂದ್ರಾ ಥಾರ್‌ 4X2 ವೇರಿಯಂಟ್‌ನ ಕುರಿತಾದ ಹೊಸದೊಂದು ಸುದ್ದಿ ಹೊರಬಿದ್ದಿದೆ. ಹೌದು, ಮಹೀಂದ್ರಾ ಥಾರ್‌ 4X2 ವೇರಿಯಂಟ್‌ ನ ವೇಟಿಂಗ್‌ ಪಿರಿಯಡ್‌ ನ ಕುರಿತಾದ ಸುದ್ದಿ ಇದಾಗಿದ್ದು, ನೀವು ಈ ಎಸ್‌ಯುವಿಯನ್ನು ಬುಕ್‌ ಮಾಡಿ ಅದರ ಡೆಲಿವರಿ ಪಡೆಯಲು ಸುಮಾರು 15 - 16 ತಿಂಗಳವರೆಗೆ ಕಾಯಬೇಕಾಗಿದೆ.

Mahindra Thar 4X2

ಮಹೀಂದ್ರಾ ಥಾರ್‌ 4X2 ನ ಎರಡು ವೇರಿಯಂಟ್‌ ಲಭ್ಯವಿದ್ದು, ಇದರ ಪೆಟ್ರೋಲ್‌ ವೇರಿಯಂಟ್‌ ವೇಟಿಂಗ್‌ ಪಿರಿಯಡ್‌ ಸ್ವಲ್ಪ ಕಡಿಮೆ ಇದೆ, ಅಂದರೆ ಸುಮಾರು ಸರಾಸರಿ 5 ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಆದರೆ ಇದರ ಇನ್ನೊಂದು ವೇರಿಯಂಟ್‌ ಆದ ಥಾರ್‌ 4X2 1.5 ಲೀ. ಡೀಸೆಲ್‌ ಎಂಜಿನ್‌ ನ ವೇಟಿಂಗ್‌ ಕಾಲಾವಧಿ ಸಿಕ್ಕಾಪಟ್ಟೆ ಹೆಚ್ಚಾಗಿರುವುದು ಇದೀಗ ಕಾರು ಪ್ರೀಯರ ಆತಂಕಕ್ಕೆ ಕಾರಣವಾಗಿದೆ.

ಇನ್ನು ಮಹೀಂದ್ರಾ ಥಾರ್‌ 4X4 ವೇರಿಯಂಟ್ ವೇಟಿಂಗ್‌ ಪಿರಿಯಡ್‌ ಬಗ್ಗೆ ನೋಡುವುದಾದರೆ ಇದರ ಎಲ್ಲಾ ವೇರಿಯಂಟ್ ನ ಡೆಲಿವರಿ ಪಡೆಯಲು ಕಡಿಮೆ ಎಂದರೂ ಸುಮಾರು 5 ರಿಂದ 6 ತಿಂಗಳುಗಳ ಕಾಲ ಕಾಯಬೇಕಾಗಿದೆ. ಇದರ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಎಲ್ಲಾ ವೇರಿಯಂಟ್‌ಗಳದ್ದೂ ಇದೇ ಕಥೆ.

ಇನ್ನು ಈ ಮಹೀಂದ್ರಾ ಥಾರ್‌ 4X2 ವೇರಿಯಂಟ್‌ನ ಇತರ ವಿಷಯಗಳನ್ನು ಗಮನಿಸುವುದಾದರೆ ಇದು ರಿಯರ್ ವ್ಹೀಲ್ ಆವೃತ್ತಿಯಾಗಿರುವುದರಿಂದ, ಎಸ್‍ಯುವಿಯಲ್ಲಿ ನ 4×4 ಗೇರ್ ಲಿವರ್ ಅನ್ನು ಹೊಂದಿಲ್ಲ. ಆ ಜಾಗವನ್ನು ಸ್ಟೋರೇಜ್ ಸ್ಪೇಸ್ ಆಗಿ ಮಾರ್ಪಡಿಸಲಾಗಿದೆ. ಈ ಹೊಸ ಮಹೀಂದ್ರಾ ಥಾರ್ RWD ತನ್ನ 4WD ಒಡಹುಟ್ಟಿದವರಂತೆಯೇ ಅದೇ ಪೆಟ್ರೋಲ್ ಎಂಜಿನ್ ಅನ್ನು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ ಬರುತ್ತಿದೆ.

ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯ ಟೈಲ್ ಲ್ಯಾಂಪ್‌ಗಳು ಎಲ್ಲಾ ರೂಪಾಂತರಗಳಲ್ಲಿ ಒಂದೇ ಆಗಿರುತ್ತವೆ. ಈ ಎಸ್‍ಯುವಿಯ ಒಳಭಾಗದಲ್ಲಿ ಸೀಟುಗಳು ಫ್ಯಾಬ್ರಿಕ್ ಮತ್ತು ಇನ್ಸ್ ಟ್ರೂಮೆಮ್ಟ್ ಕ್ಲಸ್ಟರ್ ಕೂಡ ಒಂದೇ ಆಗಿರುತ್ತದೆ. ಇಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರೂಫ್-ಮೌಂಟೆಡ್ ಸ್ಪೀಕರ್‌ಗಳು ಮತ್ತು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಅನ್ನು ಹೊಂದಿಲ್ಲ .

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 18, 2023, 16:02 [IST]
English summary
Mahindra thar diesel 4x2 waiting period details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+