ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಕ್ರಾಂತಿ ಮಾಡಲು ಎಲೆಕ್ಟ್ರಿಕ್ ರೂಪದಲ್ಲಿ ಬರುತ್ತಿದೆ ಮಹೀಂದ್ರಾ ಥಾರ್
ಭಾರತೀಯ ಮಾರುಕಟ್ಟೆಯಲ್ಲಿ ಜ ಮಹೀಂದ್ರಾ ಥಾರ್ ಮಾದರಿಯ್ಯ್ ಬಹಳ ವರ್ಷಗಳಿಂದನಪ್ರಿಯ ಆಫ್ ರೋಡರ್ ಎಸ್‍ಯುವಿಯಾಗಿದ್ದು, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಭಾರೀ ಬೇಡಿಕೆಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಈ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಿದೆ.
ಹೊಸ ವರದಿಗಳ ಪ್ರಕಾರ, ಮಹೀಂದ್ರಾ ತನ್ನ ಜನಪ್ರಿಯ ಲೈಫ್ಟ್ ಸ್ಟೈಲ್ ಆಫ್-ರೋಡರ್ ಥಾರ್‌ನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಲು ಸಿದ್ಧವಾಗಿದೆ. ಹೊಸ ಮಹೀಂದ್ರಾ ಥಾರ್ ಎಲೆಕ್ಟ್ರಿಕ್ [Mahindra Thar Electric] ಕಾನ್ಸೆಪ್ಟ್ ಆಗಸ್ಟ್ 15 ರಂದು ದಕ್ಷಿಣ ಆಫ್ರಿಕಾದಲ್ಲಿ ಕಂಪನಿಯ ಮುಂಬರುವ ಸಾರ್ವಜನಿಕ ಸಮಾರಂಭದಲ್ಲಿ ಪ್ರದರ್ಶಿಸಲಾಗುತ್ತದೆ. ಜನಪ್ರಿಯ ಸ್ಕಾರ್ಪಿಯೊ-ಎನ್ ಎಸ್‌ಯುವಿ ಆಧಾರಿತ ಡಬಲ್-ಕ್ಯಾಬ್ ಪಿಕಪ್ ಕಾನ್ಸೆಪ್ಟ್ ಅನುಸರಿಸಿ ಇದು ಮಹೀಂದ್ರಾದಿಂದ ಎರಡನೇ ಕಾನ್ಸೆಪ್ಟ್ ಮಾದರಿಯಾಗಿರುತ್ತದೆ.

ಮಹೀಂದ್ರಾ ಕಂಪನಿಯು ಐದು-ಡೋರಿನ ಥಾರ್ ಎಸ್‍ಯುವಿ ಆಗಸ್ಟ್ 15 ರಂದು ಬಹಿರಂಗಪಡಿಸಲಾಗುವುದಿಲ್ಲ ಎಂದು ಮಹೀಂದ್ರಾ ಖಚಿತಪಡಿಸಿದೆ. ಬದಲಾಗಿ, ಥಾರ್‌ನ ಎಲೆಕ್ಟ್ರಿಕ್ ಕಾನ್ಸಾಪ್ಟ್ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಪ್ರಾಯಶಃ ಸ್ಟ್ಯಾಂಡರ್ಡ್ ನಾಲ್ಕು-ವ್ಹೀಲ್ ಡ್ರೈವ್ ಟಪ್ ಅನ್ನು ಒಳಗೊಂಡಿರುತ್ತದೆ. ಈ ಹೊಸ ಎಲೆಕ್ಟ್ರಿಕ್ ಪರಿಕಲ್ಪನೆಗಾಗಿ ಮೂಲಭೂತ ಲ್ಯಾಡರ್-ಆನ್-ಫ್ರೇಮ್ ಚಾಸಿಸ್ ಮತ್ತು ಮಹೀಂದ್ರ ಥಾರ್‌ನ ಮೂರು-ಬಾಗಿಲಿನ ವಿನ್ಯಾಸವನ್ನು ಉಳಿಸಿಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಎಲೆಕ್ಟ್ರಿಕ್ ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಮಹೀಂದ್ರಾ ಥಾರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕ್ವಾಡ್ ಮೋಟಾರ್ ಸೆಟಪ್ ಅನ್ನು ಅಳವಡಿಸಿಕೊಳ್ಳಬಹುದು, ಪ್ರತಿ ಚಕ್ರದಲ್ಲಿ ಒಂದು ಮೋಟರ್ ಅನ್ನು ಹೊಂದಿದ್ದು, ಹಮ್ಮರ್ ಇವಿಯಂತೆಯೇ ಸಾಮರ್ಥ್ಯದಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುತ್ತದೆ. ಪವರ್‌ಟ್ರೇನ್ ಕುರಿತು ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಮಹೀಂದ್ರಾ ಕಳೆದ ವರ್ಷ ಐದು ವಿಭಿನ್ನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಗಳನ್ನು ಪ್ರದರ್ಶಿಸಿತು.

ಅವುಗಳಲ್ಲಿ ಯಾವುದೂ ಲ್ಯಾಡರ್-ಆನ್-ಫ್ರೇಮ್ ನಿರ್ಮಾಣವನ್ನು ಒಳಗೊಂಡಿಲ್ಲ. ಮಹೀಂದ್ರಾ ಥಾರ್‌ನ ಒರಟುತನವು ಅದರ ಬಲವಾದ ಲ್ಯಾಡರ್-ಆನ್-ಫ್ರೇಮ್ ಚಾಸಿಸ್‌ಗೆ ಕಾರಣವಾಗಿದೆ, ಇದು ಅದೇ ಗಾತ್ರದ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಕಂಡುಬರುವ ಮೊನೊಕಾಕ್ ಫ್ರೇಮ್‌ಗಿಂತ ಭಾರವಾಗಿರುತ್ತದೆ. ಹಿಂದೆ, ಲ್ಯಾಡರ್-ಆನ್-ಫ್ರೇಮ್ ಎಸ್‍ಯುವಿಗಳಿಗೆ ಬ್ಯಾಟರಿ ಪ್ಯಾಕೇಜಿಂಗ್ ಮತ್ತು ಪ್ಲೇಸ್‌ಮೆಂಟ್ ಒಂದು ಸಮಸ್ಯೆ ಎಂದು ಪರಿಗಣಿಸಲಾಗಿತ್ತು.
ಇನ್ನು ಮಹಿಂದ್ರಾ ಕಂಪನಿಯು ಬಹುಬೇಡಿಕೆಯ ಥಾರ್ ಎಸ್‍ಯುವಿಯ 5-ಡೊರಿನ ಆವೃತ್ತಿಯನ್ನು ಬಿಡುಗಡೆಗೊಳಿಸಲು ಕಾರ್ಯನಿರ್ವಹಿಸುತ್ತಿದೆ. ಮಹೀಂದ್ರಾ ಥಾರ್ 5-ಡೊರಿನ ಆವೃತ್ತಿಯು ಕಳೆದ ಕೆಲವು ತಿಂಗಳುಗಳಿಂದ ಅಗಾಗ ರೋಡ್ ಟೆಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಇನ್ನಷ್ಟು ಆಕರ್ಷಕವಾಗಿಸಲು ಸಿದ್ಧವಾಗಿದೆ. ಥಾರ್ ಅನ್ನು ಪ್ರಸ್ತುತ 3-ಡೋರಿನ ಲೇಔಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಮಹಿಂದ್ರಾ ಥಾರ್ ಎಸ್‍ಯುವಿಯು 5-ಡೋರ್ ಆವೃತ್ತಿಯಾಗಿ ಬರಲು ಸಜ್ಜಾಗಿದೆ.

ಈ ಮಹೀಂದ್ರಾ ಥಾರ್ 5-ಡೋರಿನ ಎಸ್‍ಯುವಿಯು ಇತ್ತೀಚೆಗೆ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ 5-ಡೋರಿನ ಆವೃತ್ತಿಯು 3-ಡೋರಿನ ಥಾರ್‌ಗೆ ಹೋಲುತ್ತದೆ. ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯು ಉದ್ದವಾದ ವೀಲ್‌ಬೇಸ್ ಮತ್ತು ಹಿಂಭಾಗದ ಡೋರುಗಳನ್ನು ಹೊಂದಿವೆ. 3-ಡೋರಿನ ಥಾರ್‌ನಂತೆಯೇ ಥಾರ್ 5-ಡೋರ್ ಆವೃತ್ತಿಯು ಆಗಸ್ಟ್ 15 ರಂದು ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಹೊಸ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ.
ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಭಾರವಾದ ಮತ್ತು ಕಾರ್ಯವನ್ನು ನಿರ್ವಹಿಸುವ ಕಾರಣ, 5-ಡೋರ್ ಮಹೀಂದ್ರಾ ಥಾರ್ 2-0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಬಹುದು.ಇನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ 370 ಎನ್ಎಂ ಮತ್ತು 6-ಸ್ಪೀಡ್ ಎಟಿಯೊಂದಿಗೆ 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 130 ಎಚ್‌ಪಿ ಮತ್ತು 172 ಬಿಹೆಚ್‍ಪಿ ಎಂಬ ಎರಡು ಸ್ಥಿತಿಗಳಲ್ಲಿ ನೀಡಲಾಗುತ್ತದೆ.
ಮೊದಲನೆಯದು ಕೇವಲ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ ಮತ್ತು 300 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಟ್ಯೂನ್‌ನ ಉನ್ನತ ಸ್ಥಿತಿಯಲ್ಲಿ, ಟಾರ್ಕ್ ಔಟ್‌ಪುಟ್ ಮ್ಯಾನುಯಲ್‌ನೊಂದಿಗೆ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಹೀಂದ್ರಾ ಥಾರ್ ಡೀಸೆಲ್ 130 ಬಿಹೆಚ್‍ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications