ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಥಾರ್ RWD ವೆರಿಯೆಂಟ್
ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಎಸ್‍ಯುವಿಯಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಪ್ರಸ್ತುತ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಾಗುತ್ತಿದೆ.
ಈ ನಡುವೆ ಮಹೀಂದ್ರಾ & ಮಹೀಂದ್ರಾ ಶೀಘ್ರದಲ್ಲೇ ಭಾರತದಲ್ಲಿ ತನ್ನ ಅತ್ಯಂತ ಜನಪ್ರಿಯವಾದ ಥಾರ್ ಆಫ್-ರೋಡರ್‌ನ ಎಂಟ್ರಿ ಲೆವೆಲ್ ರೂಪಾಂತರವನ್ನು ಬಿಡುಗಡೆ ಮಾಡಲಿದೆ. RWD ಥಾರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.50 ಲಕ್ಷವಾಗಿರಬಹುದು. ಈ ಎಸ್‍ಯುವಿಯಲ್ಲಿ ಮರಾಜೊ ಎಂಪಿವಿಯಲ್ಲಿ ಬಳಸಲಾದ 1.5-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗ;ಒದೆ. ಏಕೆಂದರೆ ಇದು ಈಗಾಗಲೇ 2.2-ಲೀಟರ್ mHawk ಡೀಸೆಲ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ mStallion ಪೆಟ್ರೋಲ್ ಎಂಜಿನ್‌ಗಳನ್ನು ಒಳಗೊಂಡಿರುವ ಶ್ರೇಣಿಯನ್ನು ವಿಸ್ತರಿಸುತ್ತದೆ.

ಎರಡನೇ ಜನರೇಷನ್ ಥಾರ್ ಅನ್ನು 2020ರ ಅಕ್ಟೋಬರ್ ತಿಂಗಳಿನಲ್ಲಿ ಹಾರ್ಡ್‌ಟಾಪ್ ಮತ್ತು ಕನ್ವರ್ಟಿಬಲ್ ಕಾನ್ಫಿಗರೇಶನ್‌ಗಳಲ್ಲಿ ಪರಿಚಯಿಸಲಾಯಿತು. ಈ ಥಾರ್ ಎಸ್‍ಯುವಿಯು AX ಮತ್ತು LX ಟ್ರಿಮ್‌ಗಳಲ್ಲಿ 4WD ಲೇಔಟ್‌ನೊಂದಿಗೆ ಮಾತ್ರ ಲಭ್ಯವಿದೆ. ಈ ಹೊಸ 1.5-ಲೀಟರ್ ಡೀಸೆಲ್ ಎಂಜಿನ್ ಅದರ ಗಾತ್ರ ಮತ್ತು ಥಾರ್ ನಾಲ್ಕು ಮೀಟರ್‌ಗಿಂತ ಕಡಿಮೆ ಉದ್ದದ ಕಾರಣದಿಂದ ತೆರಿಗೆ ಪ್ರಯೋಜನಗಳನ್ನು ಸಕ್ರಿಯಗೊಳಿಸುತ್ತದೆ. ಆದ್ದರಿಂದ ಹಿಂಭಾಗ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಹೆಚ್ಚು ಅಗ್ರೇಸಿವ್ ಆಗಿ ಇರಿಸಲಾಗಿದೆ.
ಈ ಪವರ್‌ಟ್ರೇನ್ 117 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದು ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ ಮತ್ತು ಈ ರೂಪಾಂತರದಲ್ಲಿ ಯಾವುದೇ ಆಟೋಮ್ಯಾಟಿಕ್ ಯುನಿಟ್ ಅನ್ನು ಲಭ್ಯವಿಲ್ಲ. ಇದು ವ್ಯಾಪಕವಾದ ಗ್ರಾಹಕರನ್ನು ಆಕರ್ಷಿಸುತ್ತದೆ. ಈ ಎಸ್‍ಯುವಿಯು ಟೂ-ವೀಲ್ ಡ್ರೈವ್ ಕಾನ್ಫಿಗರೇಶನ್ ಅನ್ನು ದೊಡ್ಡ 2.2-ಲೀಟರ್ mHawk ಡೀಸೆಲ್ ಮಿಲ್‌ನೊಂದಿಗೆ ಚಿಲ್ಲರೆ ಮಾಡಲಾಗುವುದಿಲ್ಲ ಆದರೆ ಇದು 2.0-ಲೀಟರ್ ನಾಲ್ಕು-ಪಾಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ.
ಎಂಜಿನ್ ಅನ್ನು ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ನೊಂದಿಗೆ ಜೋಡಿಸಲಾಗುತ್ತದೆ. ಇನ್ನು ಸೋರಿಕೆಯಾದ ಮಾಹಿತಿಗಳ ಪ್ರಕಾರ, ಮಹೀಂದ್ರಾ ಥಾರ್ 2WD ಎಸ್‍ಯುವಿಯನ್ನು ಅನ್ನು ಒಟ್ಟು ಎರಡು ಹೊಸ ಬಣ್ಣದ ಯೋಜನೆಗಳಾದ ಬ್ಲೇಜಿಂಗ್ ಬ್ರೋಂಜ್ ಮತ್ತು ಎವರೆಸ್ಟ್ ವೈಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ RWD AT ಮತ್ತು ಡೀಸೆಲ್ RWD MT ಟ್ರಿಮ್‌ಗಳಲ್ಲಿನ ಕೆಲವು ಪ್ರಮುಖ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ.
ಪ್ರಮುಖ ಫೀಚರ್ಸ್ ಗಳಾದ ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಹೊರಗಿನ ರಿಯರ್ ವ್ಯೂ ಮಿರರ್‌ಗಳು ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಮೊಲ್ಡ್ ಸ್ಟೆಪ್ಸ್, ಫಾಗ್ ಲೈಟ್‌ಗಳು, ರೂಫ್-ಮೌಂಟೆಡ್ ಸ್ಪೀಕರ್‌ಗಳು, ಸುತ್ತಲೂ ಕಪ್ಪು ಬಂಪರ್‌ಗಳು ಮತ್ತು ಎಲ್ಲಾ ಭೂಪ್ರದೇಶದ ಟೈರ್‌ಗಳಲ್ಲಿ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಇದರೊಂದಿಗೆ ಮಹಿಂದ್ರಾ ಕಂಪನಿಯು ಥಾರ್ ಎಸ್‍ಯುವಿಯ 5-ಡೊರಿನ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇತ್ತೀಚಿನ ತಿಂಗಳುಗಳಲ್ಲಿ ಮಹೀಂದ್ರಾ ಥಾರ್ ಆಗಾಗ್ಗೆ ರೋಡ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಇನ್ನಷ್ಟು ಆಕರ್ಷಕವಾಗಿಸಲು ಸಿದ್ಧವಾಗಿದೆ. ಥಾರ್ ಅನ್ನು ಪ್ರಸ್ತುತ 3-ಡೋರಿನ ಲೇಔಟ್‌ನಲ್ಲಿ ನೀಡಲಾಗುತ್ತದೆ. ಇದೀಗ ಮಹಿಂದ್ರಾ ಥಾರ್ ಎಸ್‍ಯುವಿಯು 5-ಡೋರ್ ಆವೃತ್ತಿಯಾಗಿ ಬರಲಿದೆ, ಈ ಮಹೀಂದ್ರಾ ಥಾರ್ ಎಸ್‍ಯುವಿಯು ಇತ್ತೀಚೆಗೆ ರೋಡ್ ಟೆಸ್ಟ್ ನಡೆಸುವ ವೇಳೆ ಕಾಣಿಸಿಕೊಂಡಿದೆ. ಈ ಹೊಸ ಥಾರ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. 2023ರ ಮಹೀಂದ್ರ ಥಾರ್ 5 ಡೋರ್‌ನ ಇತ್ತೀಚಿನ ಸ್ಪೈ ಚಿತ್ರಗಳನ್ನು ಟಾಕಿಂಗ್ ಕಾರ್ಸ್ ಬಹಿರಂಗಪಡಿಸಿದೆ.
ಈ ಸ್ಪೈ ಚಿತ್ರಗಳು ಒಳಾಂಗಣದ ಮಾಹಿತಿಗಳನ್ನು ಬಹಿರಂಗಪಡಿಸುತ್ತದೆ. ಇದು ಪ್ರಸ್ತುತ ಥಾರ್ 3 ಬಾಗಿಲಿನಂತೆಯೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ. ಮುಂಭಾಗದ ಸೀಟ್ ವಿನ್ಯಾಸವೂ ಹೋಲುತ್ತದೆ. ಇನ್ನು 5 ಡೋರ್ ಆವೃತ್ತಿಯಾಗಿರುವುದರಿಂದ ಹಿಂದಿನ ಸೀಟ್‌ಗಳು ಯೋಗ್ಯವಾದ ಲೆಗ್‌ರೂಮ್ ಅನ್ನು ನೀಡುತ್ತವೆ. ಇನ್ನು ಸಾಕಷ್ಟು ಉತ್ತಮವಾದ ಬೂಟ್ ಸ್ಪೇಸ್ ಇದೆ ಎಂದು ಎಂದು ತೋರುತ್ತದೆ. ಹಿಂದಿನ ಸೀಟುಗಳು 50:50 ಸ್ಪ್ಲಿಟ್‌ನಲ್ಲಿವೆ. ಪ್ರಸ್ತುತ ಥಾರ್ ಈಗಾಗಲೇ ಸಮಗ್ರ ಶ್ರೇಣಿಯ ವೈಶಿಷ್ಟ್ಯಗಳನ್ನು ಹೊಂದಿದೆ ಅದು ಒಟ್ಟಾರೆ ಅನುಭವವನ್ನು ನೀಡುತ್ತದೆ.


Click it and Unblock the Notifications