Mahindra Thar: ಜಿಮ್ನಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಥಾರ್ ಎಸ್‍ಯುವಿಯ ಹೊಸ 4X4 ಬೇಸ್ ವೆರಿಯೆಂಟ್
ಮಹೀಂದ್ರಾ ಥಾರ್ (Mahindra Thar) ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಎಸ್‍ಯುವಿಯಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಮಹೀಂದ್ರಾ ಥಾರ್ ಕಾಯುವ ಅವಧಿಯು ಕೂಡ ಹೆಚ್ಚಾಗುತ್ತಿದೆ.
2020ರಲ್ಲಿ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಬಿಡುಗಡೆಯಾದಾಗಿನಿಂದ ಭಾರೀ ಯಶಸ್ಸನ್ನು ಕಂಡಿದೆ. ಈ ಥಾರ್ ಎಸ್‍ಯುವಿಯು ವೈವಿಧ್ಯಮಯ ಖರೀದಿದಾರರನ್ನು ಆಕರ್ಷಿಸುತ್ತಿದೆ. ಇದೀಗ ಕಂಪನಿಯು ಥಾರ್ ಎಸ್‍ಯುವಿಯಲ್ಲಿ ನವೀಕರಣಗಳು ಮತ್ತು ರೂಪಾಂತರವನ್ನು ನೀಡಲು ವಾಹನ ತಯಾರಕರು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ರಿಯರ್-ವೀಲ್ ಡ್ರೈವ್ (RWD) ರೂಪಾಂತರಗಳು ಅದನ್ನು ಹೆಚ್ಚು ಕೈಗೆಟುಕುವಂತೆ ಮಾಡಿದರೂ, ಥಾರ್ ಶೀಘ್ರದಲ್ಲೇ ಹೊಸ ಎಂಟ್ರಿ ಲೆವೆಲ್ 4x4 ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲಿದೆ.

ಮಹೀಂದ್ರಾ ಥಾರ್ ಆಫ್-ರೋಡರ್‌ನ 4x4 ವೆರಿಯೆಂಟ್ ಬಗ್ಗೆ ಸೋರಿಕೆಯಾದ ಮಾಹಿತಿಗಳ ಪ್ರಕಾರ, ಮೂಲತಃ ಲಭ್ಯವಿದ್ದ ಬೇಸ್ AX ಟ್ರಿಮ್‌ನ ಪುನರುಜ್ಜೀವನವನ್ನು ನೋಡುತ್ತದೆ. ಥಾರ್ AX AC 4x4 ಟ್ರಿಮ್ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ, ಆದರೆ ಕೇವಲ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿರುತ್ತದೆ.
ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಥಾರ್ RWD ಟ್ರಿಮ್‌ಗಳಿಗೆ ನಿರ್ದಿಷ್ಟವಾಗಿ ಉಳಿದಿದೆ. ಮಹೀಂದ್ರಾ ಥಾರ್ 4x4 AX AC ಇತರ 4x4 ರೂಪಾಂತರಗಳಿಗಿಂತ ಕೆಲವು ಸಾವಿರಗಳಷ್ಟು ಬೆಲೆ ಅಗ್ಗವಾಗುವ ಸಾಧ್ಯತೆಯಿದೆ. ಬೇಸ್ ಟ್ರಿಮ್ ಆಗಿರುವುದರಿಂದ, ಮಹೀಂದ್ರಾ ಥಾರ್ AX AC MT ಕೆಲವು ಫೀಚರ್ಸ್ ಮತ್ತು ಸೌಕರ್ಯಗಳನ್ನು ಕಳೆದುಕೊಳ್ಳುತ್ತದೆ. 4x4 ವೇರಿಯಂಟ್ ಲೈನ್‌ಅಪ್‌ನ ಮೂಲ ಬೆಲೆಯನ್ನು ಕೆಲವು ಸಾವಿರಗಳಷ್ಟು ಇಳಿಸುವಾಗ ಇದು ಎಲ್ಲಾ ಅಗತ್ಯ ವಸ್ತುಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಮುಂಬರುವ ಮಾರುತಿ ಸುಜುಕಿ ಜಿಮ್ನಿ ವಿರುದ್ಧ ಥಾರ್‌ನ ಮಾರಾಟದ ವೇಗವನ್ನು ಉಳಿಸಿಕೊಳ್ಳುವಲ್ಲಿ ಹೊಸ ಎಂಟ್ರಿ ಲೆವೆಲ್ 4x4 ವೆರಿಯೆಂಟ್ ನಿರ್ಣಾಯಕವಾಗಿದೆ. ಈ ಐದು ಡೋರುಗಳೊಂದಿಗೆ ಚಿಕ್ಕದಾದ, ಹಗುರವಾದ ಮತ್ತು ಹೆಚ್ಚು ಪ್ರಾಯೋಗಿಕವಾಗಿರುವ ಜಿಮ್ನಿ ದಿನನಿತ್ಯದ ಆಧಾರದ ಮೇಲೆ ಹೆಚ್ಚು ಬಳಸಬಹುದಾದ ಆಯ್ಕೆಯಾಗಿದೆ ಮತ್ತು ಹೆಚ್ಚು ಕೈಗೆಟುಕುವ ದರದಲ್ಲಿಯೂ ಇರುತ್ತದೆ. ಜಿಮ್ನಿಯ ಪೈಪೋಟಿ ಎದುರಿಸಲು ಹೊಸ 4x4 ವೆರಿಯೆಂಟ್ ಸಹಾಯ ಮಾಡುತ್ತದೆ,
ಇನ್ನು ಮಹೀಂದ್ರಾ ಥಾರ್ ಎಸ್‍ಯುವಿ ತನ್ನ 2023ರ ನವೀಕರಣವನ್ನು ಸ್ವೀಕರಿಸಲು ಸಿದ್ಧವಾಗಿದೆ. ಈ ನವೀಕರಣವು BS6 2-ಕಂಪ್ಲೈಂಟ್ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಎಸ್‍ಯುವಿಯ ವಿನ್ಯಾಸ ಮತ್ತು ಫೀಚರ್ಸ್ ಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ವರದಿಗಳ ಪ್ರಕಾರ, ಥಾರ್ ಶೀಘ್ರದಲ್ಲೇ RDE ಮಾನದಂಡಗಳನ್ನು ಮತ್ತು E20 ಇಂಧನ-ಸಿದ್ಧ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಪಡೆಯುತ್ತದೆ.

ಈ ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್‍ಯುವಿಯಾಗಿದೆ. ಅದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇದು ಕೆಲವು ಪ್ರಭಾವಶಾಲಿ ಸ್ಪೆಕ್ಸ್‌ಗಳನ್ನು ಹೊಂದಿದೆ. ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications