Mahindra Thar: ಮಹೀಂದ್ರಾ ಥಾರ್ ಅಬ್ಬರ.. ಪ್ರತಿಸ್ಪರ್ಧಿಗಳಿಗೆ ಶುರುವಾಯ್ತು ನಡುಕ!

ಆಫ್-ರೋಡ್ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರಾ ಥಾರ್ (Mahindra Thar) ದೊಡ್ಡ ಹೆಸರನ್ನು ಗಳಿಸಿದೆ. ಅದರ ಆಕರ್ಷಕ ನೋಟ ಎಲ್ಲರನ್ನು ಸೆಳೆಯಲಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಬಹುತೇಕರು, ಥಾರ್ ಎಸ್‌ಯುವಿಯನ್ನು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಈ ನವೆಂಬರ್ (2023) ತಿಂಗಳಲ್ಲಿಯೂ ಇದಕ್ಕೆ ಭಾರೀ ಬೇಡಿಕೆಯಿದೆ.

ದೇಶಾದ್ಯಂತ ಡೀಲರ್ ಶಿಪ್ ಅನುಗುಣವಾಗಿ 3-ಡೋರ್ ಮಹೀಂದ್ರಾ ಥಾರ್ ಬೇರೆ - ಬೇರೆ ಕಾಯುವಿಕೆ ಅವಧಿಯನ್ನು ಹೊಂದಿದೆ. RWD (ರೇರ್ ವೀಲ್ ಡ್ರೈವ್) ಹಾರ್ಡ್-ಟಾಪ್ ಡೀಸೆಲ್ ವೇರಿಯೆಂಟ್ಸ್ (RWD hard-top diesel variants) 70 ವಾರಗಳ ಕಾಯುವಿಕೆ ಅವಧಿಯನ್ನು ಹೊಂದಿದೆ. ಥಾರ್ ಎಸ್‌ಯುವಿ ಪೆಟ್ರೋಲ್ ರೂಪಾಂತರವನ್ನು ಇವತ್ತು ಬುಕ್ಕಿಂಗ್ ಮಾಡಿದರೂ 22 ವಾರಗಳೊಳಗೆ ವಿತರಣೆಯಾಗಲಿದೆ.

Mahindra Thar

ಸಾಫ್ಟ್ - ಟಾಪ್ ವರ್ಷನ್ (soft - top versions) ಸೇರಿದಂತೆ ಯಾವುದೇ 4WD (ಫೋರ್ ವೀಲ್ಸ್ ಡ್ರೈವ್) ರೂಪಾಂತರವನ್ನು ಬುಕ್ಕಿಂಗ್ ಮಾಡಿದ ಗ್ರಾಹಕರು, ಡಿಲೆವರಿ ಪಡೆಯಲು 24 ವಾರಗಳವರೆಗೆ ಕಾಯಬೇಕು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮಹೀಂದ್ರಾ ಥಾರ್ ರೂ.43,500 ದರ ಏರಿಕೆಯನ್ನು ಪಡೆದುಕೊಂಡಿದೆ. ಈಗಲೂ ಪ್ರತಿ ತಿಂಗಳು ಗರಿಷ್ಠ ಸಂಖ್ಯೆಯಲ್ಲಿ ಬುಕ್ಕಿಂಗ್ ಸ್ವೀಕರಿಸುವ ಎಸ್‌ಯುವಿಯಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ (Mahindra Thar), ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದರ 1.5 ಲೀಟರ್ ಡೀಸೆಲ್ ಎಂಜಿನ್, 117 hp ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು, 2.2 - ಲೀಟರ್ ಡೀಸೆಲ್ ಎಂಜಿನ್ 128 hp ಪವರ್, 300 Nm ಪೀಕ್ ಟಾರ್ಕ್ ಹೊರಹಾಕುತ್ತದೆ.

Mahindra Thar

ಹಾಗೆಯೇ, 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 150 hp ಪವರ್ ಮತ್ತು 320 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ಟೆಕ್ನಲಾಜಿಯನ್ನು ಒಳಗೊಂಡಿದೆ.

ಈ ಮಹೀಂದ್ರಾ ಥಾರ್ ಐದು ಆಸನ ಆಯ್ಕೆ ವ್ಯವಸ್ಥೆ ಹೊಂದಿದ್ದು, 15.2 kmpl ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಎವರೆಸ್ಟ್ ವೈಟ್, ಅಕ್ವಾಮರೀನ್, ರೆಡ್ ರೇಜ್, ನಪೋಲಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಮಹೀಂದ್ರಾ ಕಂಪನಿ, 5-ಡೋರ್ ಥಾರ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ಹಲವು ಬಾರಿ ಪ್ರಾಯೋಗಿಕ ಸಂಚಾರ ನಡೆಸುವಾಗ ಕಂಡುಬಂದಿದೆ. ಈ ಎಸ್‌ಯುವಿ, ಎರಡು ಎಂಜಿನ್ ಆಯ್ಕೆಯಲ್ಲಿ ಸಿಗಬಹುದು. 2.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 bhp ಪವರ್, 320 Nm ಪೀಕ್ ಟಾರ್ಕ್, ಮತ್ತೊಂದು, 2.2 - ಲೀಟರ್ ಡೀಸೆಲ್ ಎಂಜಿನ್ 130 bhp ಪವರ್ 300 Nm ಪೀಕ್ ಟಾರ್ಕ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ.

ವೈಶಿಷ್ಟ್ಯದ ವಿಚಾರವಾಗಿ ಮಹೀಂದ್ರಾ ಥಾರ್ ಅತ್ಯಾಧುನಿಕವಾಗಿರಲಿದ್ದು, ದೊಡ್ಡದಾದ 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ನವೀನ ಸ್ಟೀರಿಂಗ್ ವೀಲ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ವೈರ್‌ಲೆಸ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಆಕರ್ಷಕ ಫೀಚರ್ಸ್ ಹೊಂದಿರುವ ನೀರಿಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, November 5, 2023, 9:00 [IST]
English summary
Mahindra thar waiting period november still high demand suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+