ಜನಪ್ರಿಯ ಎಸ್‌ಯುವಿ ಈಗ ಜೀವರಕ್ಷಕ: ಆಂಬ್ಯುಲೆನ್ಸ್ ಆಗಿ ಸೇವೆ ಸಲ್ಲಿಸಲಿದೆ ಮಹೀಂದ್ರಾ Bolero Neo+
ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್, ಇಂದು Bolero Neo+ ಆಂಬ್ಯುಲೆನ್ಸ್ ಅನ್ನು ಬಿಡುಗಡೆ ಮಾಡಿದೆ. ಟೈಪ್ ಬಿ ಆಂಬ್ಯುಲೆನ್ಸ್ ವಿಭಾಗವನ್ನು ನಿಯಂತ್ರಿಸುವ AIS: 125 (ಭಾಗ 1) ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸಿ ಇದನ್ನು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
Neo+ 2021 ರಲ್ಲಿ ಬಿಡುಗಡೆಯಾದ Bolero Neo ನ ಅದೇ ಕಠಿಣ ತಳಹದಿಯನ್ನು ಹಂಚಿಕೊಂಡಿದೆ, ಆದರೆ ಹೆಚ್ಚು ವಿಶಾಲವಾದ ಕ್ಯಾಬಿನ್‌ಗಾಗಿ ದೀರ್ಘವಾದ ವೀಲ್‌ಬೇಸ್ ಮತ್ತು ಆಂಬ್ಯುಲೆನ್ಸ್ ಮಾಲೀಕರು ಮತ್ತು ನಿರ್ವಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚು ಶಕ್ತಿಶಾಲಿ 2.2L mHawk ಎಂಜಿನ್ ಹೊಂದಿದೆ. Bolero Neo+ ಆಂಬ್ಯುಲೆನ್ಸ್‌ನ ಬೆಲೆ ESR ರೂ. 13.99 ಲಕ್ಷ, ಸರ್ಕಾರಿ ಇ-ಮಾರುಕಟ್ಟೆ (GeM) ಬೆಲೆ ರೂ. 12.31 ಲಕ್ಷವಾಗಿದೆ.

Bolero Neo+ ಆಂಬ್ಯುಲೆನ್ಸ್ ದೃಢವಾದ ನಿಯೋ ಪ್ಲಾಟ್‌ಫಾರ್ಮ್ ಮತ್ತು ಅದರ Gen-3 ಚಾಸಿಸ್‌ನಿಂದ ಆಧಾರವಾಗಿದೆ. ಇದು ಹೆಚ್ಚಿನ ಸಾಮರ್ಥ್ಯದ ಸ್ಟೀಲ್ ಬಾಡಿ ಶೆಲ್ ಅನ್ನು ಒಳಗೊಂಡಿದ್ದು, 2.2-ಲೀಟರ್ mHawk ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ರಿಯರ್ ವೀಲ್ ಡ್ರೈವ್ ಕಾನ್ಫಿಗರೇಶನ್‌ನಲ್ಲಿ ಬರುತ್ತದೆ. ಈ ಮೂಲಕ ಎಂಜಿನ್ 120 HP ಪವರ್ ಮತ್ತು 280 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.
ಇದು ತನ್ನ ಪೋಷಕ ಪ್ಲಾಟ್‌ಫಾರ್ಮ್‌ಗಿಂತ ಉದ್ದವಾದ ವೀಲ್‌ಬೇಸ್‌ನೊಂದಿಗೆ ಬಂದರೂ, ನಿಯೋ + ಆಂಬ್ಯುಲೆನ್ಸ್ ಇನ್ನೂ ಸಾಂದ್ರವಾಗಿರುತ್ತದೆ. ನಗರದ ಟ್ರಾಫಿಕ್‌ನಲ್ಲಿ ಸುಲಭವಾಗಿ ಓಡಿಸಲು ಚಾಲಕರಿಗೆ ಸಾಕಷ್ಟು ಸೌಕರ್ಯಗಳನ್ನು ನೀಡಲಾಗಿದೆ. ಆದರೆ ಅದರ ಬಾಡಿ ಆನ್ ಫ್ರೇಮ್ ನಿರ್ಮಾಣ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮಲೆನಾಡಿನ ಭೂಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ.

ಸಾಮರ್ಥ್ಯ, ವೇಗ ಮತ್ತು ಸ್ಥಳಾವಕಾಶವನ್ನು ಸಂಯೋಜಿಸುವ ಮೂಲಕ ಬೊಲೆರೊ ನಿಯೋ + ಆಂಬ್ಯುಲೆನ್ಸ್ ಸಣ್ಣ ವ್ಯಾನ್-ಆಧಾರಿತ ಕೊಡುಗೆಗಳ ಸಾಮರ್ಥ್ಯಗಳನ್ನು ಮೀರಿಸುತ್ತದೆ. ದೊಡ್ಡ ಕೋಚ್-ಆಧಾರಿತ ಆಂಬ್ಯುಲೆನ್ಸ್‌ಗಳಿಗಿಂತ ಉತ್ತಮ ಪ್ರಾಯೋಗಿಕತೆ ಮತ್ತು ದಕ್ಷತೆಯನ್ನು ನೀಡುತ್ತದೆ. ಹಾಗೆಯೇ ವಿಶೇಷ ವೈದ್ಯಕೀಯ ಉಪಕರಣಗಳನ್ನು ಸಹ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.
Bolero Neo+ ಆಂಬ್ಯುಲೆನ್ಸ್ ಅನ್ನು AIS:125 (ಭಾಗ 1) ವಿಧದ B ಆಂಬ್ಯುಲೆನ್ಸ್ ವಿಭಾಗವನ್ನು ನಿಯಂತ್ರಿಸುವ ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸಿ ನಿರ್ಮಿಸಲಾಗಿದೆ. ರೋಗಿಗಳ ಆರೈಕೆ ಮತ್ತು ಸಾರಿಗೆ ದಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಮಹೀಂದ್ರಾ ಇದನ್ನು ಹಲವಾರು ಪ್ರಾಯೋಗಿಕ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಿರುವುದಾಗಿ ತಿಳಿಸಿದೆ.
ಇದು ಏಕ ವ್ಯಕ್ತಿ ಚಾಲಿತ ಸ್ಟ್ರೆಚರ್ ಯಾಂತ್ರಿಕ ವ್ಯವಸ್ಥೆ, ಆಮ್ಲಜನಕ ಸಿಲಿಂಡರ್, ನೈರ್ಮಲ್ಯವನ್ನು ಸುಗಮಗೊಳಿಸುವ ವಾಶ್‌ಬೇಸಿನ್ ಜೋಡಣೆ ಮತ್ತು ತುರ್ತು ಸಂದರ್ಭಗಳಲ್ಲಿ ಸ್ಪಷ್ಟ ಸಂವಹನವನ್ನು ಖಾತ್ರಿಪಡಿಸುವ ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗೆಯೇ ಬೊಲೆರೊ ನಿಯೋ+ ಆಂಬ್ಯುಲೆನ್ಸ್ ತನ್ನ ಹವಾನಿಯಂತ್ರಿತ ಕ್ಯಾಬಿನ್‌ನಲ್ಲಿ D+4 ಆಸನ ಸಾಮರ್ಥ್ಯವನ್ನು ಒಳಗೊಂಡಿದೆ.
ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಸೆಕ್ಟರ್ ಸಿಇಒ ನಳಿನಿಕಾಂತ್ ಗೊಲ್ಲಗುಂಟಾ ಮಾತನಾಡಿ, "ಬೊಲೆರೊ ನಿಯೋ + ಆಂಬ್ಯುಲೆನ್ಸ್ ಅನ್ನು ಪ್ರಾರಂಭಿಸುವುದರೊಂದಿಗೆ, ನಾವು ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತೇವೆ. ಬೊಲೆರೊ ಬ್ರ್ಯಾಂಡ್ ಸಮುದಾಯಗಳು ಮತ್ತು ಸಾರ್ವಜನಿಕರನ್ನು ಸುಧಾರಿಸಲು ಮತ್ತು ಸುರಕ್ಷಿತವಾಗಿರಿಸಲು ದೀರ್ಘಕಾಲ ಸೇವೆ ಸಲ್ಲಿಸಿದೆ ಎಂದರು.
ಪೊಲೀಸ್, ಸೇನೆ ಮತ್ತು ಅರೆಸೈನಿಕ ಪಡೆಗಳಿಂದ ಹಿಡಿದು, ಅಗ್ನಿಶಾಮಕ, ಅರಣ್ಯ, ನೀರಾವರಿ ಮತ್ತು ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿರುವ ಸರ್ಕಾರಿ ಇಲಾಖೆಗಳವರೆಗೆ, ಎಲ್ಲರೂ ಬೊಲೆರೊ-ಬ್ಯಾಡ್ಜ್‌ನ SUV ಗಳನ್ನು ಅದರ ದೃಢತೆ ಮತ್ತು ವೈವಿಧ್ಯಮಯ ಕಾರ್ಯಾಚರಣೆಯ ಪರಿಸರದಲ್ಲಿ ಕಾರ್ಯಕ್ಷಮತೆಗಾಗಿ ಅವಲಂಬಿಸಿದ್ದಾರೆ ಎಂದು ನಳಿನಿಕಾಂತ್ ಗೊಲ್ಲಗುಂಟಾ ತಿಳಿಸಿದರು.
ಬೊಲೆರೊ ನಿಯೋ + ಆಂಬ್ಯುಲೆನ್ಸ್, ಅದರ ಬಹುಮುಖ ಕಾರ್ಯಕ್ಷಮತೆಯೊಂದಿಗೆ, ಆರೋಗ್ಯ ಸೇವೆಗಳಿಗೆ ಪ್ರವೇಶಿಸುವಿಕೆಯನ್ನು ವಿಸ್ತರಿಸುವ ಮೂಲಕ ಈ ಪರಂಪರೆಯನ್ನು ಮುಂದುವರೆಸಿದೆ, ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಮಲೆನಾಡಿನ ಸ್ಥಳಗಳ ದೂರದ ಪ್ರದೇಶಗಳಲ್ಲಿರುವವರಿಗೆ ನಮ್ಮ ಈ ಹೊಸ ಕೊಡುಗೆಯು ತುಂಬಾ ಸಹಕಾರಿಯಾಗಲಿದೆ ಎಂದು ನಳಿನಿಕಾಂತ್ ಗೊಲ್ಲಗುಂಟಾ ಅಭಿಪ್ರಾಯಪಟ್ಟರು.


Click it and Unblock the Notifications