ದೊಡ್ಡ ಘೋಷಣೆಯೊಂದಿಗೆ ಸಿಹಿಸುದ್ದಿ ಕೊಟ್ಟ ಮಹೀಂದ್ರಾ
ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ತನ್ನ ವಿವಿಧ ಮಾದರಿ ಎಸ್‌ಯುವಿಗಳ ಮೇಲೆ ಫೆಬ್ರುವರಿ ತಿಂಗಳ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಬೊಲೆರೊ, ಬೊಲೆರೊ ನಿಯೋ ಹಾಗೂ XUV300 ಎಸ್‌ಯುವಿ ಖರೀದಿ ಮೇಲೆ ಈ ಪ್ರಯೋಜನಗಳು ಲಭ್ಯವಿದೆ.
ಮಹೀಂದ್ರಾ ತನ್ನ ಮಾರಾಟ ಜಾಲವನ್ನು ದೇಶದ್ಯಂತ ವಿಸ್ತರಣೆ ಮಾಡಲು ಈ ಡಿಸ್ಕೌಂಟ್ ಆಫರ್ ಘೋಷಣೆ ಮಾಡಿದೆ ಎಂದು ವರದಿಯಾಗಿದೆ. ಆದರೆ, ಈ ರಿಯಾಯಿತಿಯನ್ನು ತನ್ನ ಯಾವುದೇ ಜನಪ್ರಿಯ ಆವೃತ್ತಿಗಳ ಮೇಲೆ ಕಂಪನಿಯು ನೀಡುತ್ತಿಲ್ಲ. ಅತಿಹೆಚ್ಚಿನ ಗ್ರಾಹಕರನ್ನು ಹೊಂದಿರುವ ಸ್ಕಾರ್ಪಿಯೊ ಎನ್, ಸ್ಕಾರ್ಪಿಯೊ ಕ್ಲಾಸಿಕ್, ಮಹೀಂದ್ರಾ ಥಾರ್, XUV700 ಹಾಗೂ ಕೆಲದಿನಗಳ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಚ್ಚ ಹೊಸ ಎಲೆಕ್ಟ್ರಿಕ್ ಎಸ್‌ಯುವಿ XUV400 ರಿಯಾಯಿತಿ ಪ್ರಯೋಜನ ಹೊಂದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಮಹೀಂದ್ರಾ ಬೊಲೆರೊ:
ಮೊದಲಿಗೆ ಮಹೀಂದ್ರಾದ ಜನಪ್ರಿಯ ಎಸ್‌ಯುವಿಯಾಗಿರುವ ಬೊಲೆರೊದಿಂದ ಆರಂಭಿಸೋಣ. ಪ್ರಸ್ತುತ ದಿನಮಾನಗಳಲ್ಲೂ ಸಾಕಷ್ಟು ಮಂದಿ ಗ್ರಾಹಕರು ಇದನ್ನು ಖರೀದಿಸಲು ಬಯಸುತ್ತಾರೆ. ಭಾರತದ ಗ್ರಾಮೀಣ ಪ್ರದೇಶದ ಜನರು, ಇದರ ಅತ್ಯನ್ನತ ಕಾರ್ಯಕ್ಷಮತೆಯಿಂದ ಬೊಲೆರೊವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಬಹುದು. ಬೊಲೆರೊ ಒಟ್ಟು ರೂ.70,000 ವರೆಗೆ ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ. B4 ಎಂಜಿನ್ ಆಧಾರಿತ ಬೊಲೆರೊ ರೂಪಾಂತರ ರೂ.47,000 ಹಾಗೂ B6 ಎಂಜಿನ್ ಆಧಾರಿತ ಬುಲೆಟ್ ರೂ.50,000 ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ.
ಮಹೀಂದ್ರಾ ಬೊಲೆರೊ ನಿಯೋ:
ಮಹೀಂದ್ರಾ ಕಂಪನಿ ಬೊಲೆರೊ ನಿಯೋ ಟಾಪ್ ಎಂಡ್ ಮಾದರಿ ಮೇಲೆ ರೂ.59,000 ಹಾಗೂ ಎಂಟ್ರಿ ಲೆವೆಲ್ ಮಾದರಿ N4 ಮೇಲೆ ರೂ.32,000 ವರೆಗೂ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಬೊಲೆರೊ ನಿಯೋ ರೂ.9.48 ಲಕ್ಷದಿಂದ ರೂ.11.99 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಆರು ರೂಪಾಂತರ ಹಾಗೂ ಐದು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. 1493 ಸಿಸಿ ಡೀಸೆಲ್ ಎಂಜಿನ್ ಹೊಂದಿದ್ದು, 17.29 Kmpl ಇಂಧನ ದಕ್ಷತೆಯನ್ನು ಪಡೆದುಕೊಂಡಿದೆ.

ಮಹೀಂದ್ರಾ XUV300:
ದೇಶೀಯ ಮಾರುಕಟ್ಟೆಯಲ್ಲಿ ತನ್ನ ಮಾರಾಟ ಪ್ರಮಾಣವನ್ನು ಉತ್ತೇಜಿಸಲು ಮಹೀಂದ್ರಾ XUV300 ಮೇಲೆಯೂ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ನೂತನ XUV300 ರೂ.36,500 ವರೆಗೆ ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ ಎಂದು ಹೇಳಬಹುದು. ಈ ಕಾರು, ರೂ.8.41 ಲಕ್ಷದಿಂದ ರೂ.14.07 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 108.62 - 128.73 Bhp ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ XUV700 ಖರೀದಿಸುವ ಗ್ರಾಹಕರು, ಅದರ ವಿತರಣೆಯನ್ನು ಪಡೆಯಲು ಹಲವು ತಿಂಗಳು ಕಾಯಬೇಕು. ಈ ಎಸ್‌ಯುವಿ ರೂ.13.45 ಲಕ್ಷದಿಂದ ರೂ.25.47 ಲಕ್ಷ ದರವನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, ಮ್ಯಾನುಯಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 60 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.
ಮಹೀಂದ್ರಾ ಕಂಪನಿಯು ಇತ್ತೀಚ್ಚಿಗೆ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ XUV400ನ್ನು ಬಿಡುಗಡೆ ಮಾಡಿತ್ತು. ಇದು ಹತ್ತು ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಲಭ್ಯವಿದ್ದು, ರೂ.15.99 ಲಕ್ಷದಿಂದ ರೂ.18.99 ಲಕ್ಷ ಬೆಲೆಯನ್ನು ಹೊಂದಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಅವುಗಳೆಂದರೆ, 34.5kWh ಹಾಗೂ 39.4kWh ಬ್ಯಾಟರಿ ಪ್ಯಾಕ್, ಮೊದಲನೇಯದು 375 km ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದರೆ, ಎರಡನೇಯದು 456 km ರೇಂಜ್ ಕೊಡಲಿದೆ. ಈ ಕಾರಿಗೆ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್ 150 PS ಹಾಗೂ 310 Nm ಟಾರ್ಕ್ ಉತ್ಪಾದಿಸಲಿದೆ.
ಮಹೀಂದ್ರಾದಂತೆ ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಕೂಡ ತನ್ನ ವಿವಿಧ ಮಾದರಿಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಿವೆ. ಈ ರಿಯಾಯಿತಿ ಪ್ರಯೋಜನಗಳು ಸೀಮಿತ ಆವೃತ್ತಿಗಳಿಗೆ ಮಾತ್ರ ದೊರೆಯಲಿದೆ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ. ಮಹೀಂದ್ರಾ ಬೊಲೆರೊ:ಮೇಲೆ ನೀಡುತ್ತಿರುವ ರಿಯಾಯಿತಿ ಪ್ರಯೋಜನವು ಸಾಕಷ್ಟು ಜನರಿಗೆ ಅನುಕೂಲವಾಗಿ ಪರಿಣಮಿಸಲಿದೆ ಎಂದು ಹೇಳಬಹುದು. ಗ್ರಾಹಕರಿಂದ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications