ಹೊಸ ಕ್ರಾಂತಿ: ಎಲೆಕ್ಟ್ರಿಕ್ ಅವತಾರದಲ್ಲಿ ಧೂಳೆಬ್ಬಿಸಲು ಜನಪ್ರಿಯ ಮಹೀಂದ್ರಾ ಥಾರ್ ಅನಾವರಣ
ಆಫ್-ರೋಡ್ ಎಸ್‍ಯುವಿ ಅಂದರೆ ನಮ್ಮ ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ (Mahindra Thar). ಜನಪ್ರಿಯ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಅವತಾರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದ ತನ್ನ ಫ್ಯೂಚರ್‌ಸ್ಕೇಪ್ ಈವೆಂಟ್‌ನಲ್ಲಿ ಭಾರತೀಯ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರಾ ವಿಷನ್ ಥಾರ್.ಇ (Mahindra Vision Thar.e) ಅನ್ನು ಅನಾವರಣಗೊಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಈ ಮಹೀಂದ್ರಾ ವಿಷನ್ ಥಾರ್.ಇ ಐಕಾನಿಕ್ ಥಾರ್ ಎಸ್‌ಯುವಿಯ ಪೂರ್ವವೀಕ್ಷಣೆಯಾಗಿದೆ. ಮುಂಬರುವ ಎಲೆಕ್ಟ್ರಿಕ್ ಯುಟಿಲಿಟಿ ವೆಹಿಕಲ್‌ಗಳ ಜೊತೆಗೆ ಬೊಲೆರೊ, ಸ್ಕಾರ್ಪಿಯೊ ಮತ್ತು ಎಕ್ಸ್‌ಯುವಿ ಸರಣಿಯ ಇವಿ ಆವೃತ್ತಿಗಳು ಸೇರಿದಂತೆ ಸಂಸ್ಥೆಯ ಇತರ ಎಲೆಕ್ಟ್ರಿಕ್ ವಾಹನಗಳಂತೆ ಮಹೀಂದ್ರಾ ವಿಷನ್ ಥಾರ್.ಇ ಕೂಡ ಮಹೀಂದ್ರಾ ಕಂಪನಿಯ ಮುಂದಿನ ಬಹುನಿರೀಕ್ಷಿತ ಎಸ್‍ಯುವಿಯಾಗಿದೆ. ಈ ಮಹೀಂದ್ರಾ ವಿಷನ್ ಥಾರ್.ಇ ಕಸ್ಟಮೈಸ್ ಮಾಡಿದ INGLO-P1 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಈ INGLO-P1 ಪ್ಲಾಟ್‌ಫಾರ್ಮ್ ಥಾರ್‌ನ ಸಿಲೂಯೆಟ್ ಅನ್ನು ಅದರ ಎಲೆಕ್ಟ್ರಿಕ್ ಅವತಾರ್‌ಗೆ ಸಂಯೋಜಿಸಲು ಸಹಾಯ ಮಾಡುತ್ತದೆ. ಮಹೀಂದ್ರಾ ವಿಷನ್ ಥಾರ್.ಇ ಮಾದರಿಯು 2,775mm ಮತ್ತು 2,975mm ನಡುವಿನ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಐಕಾನಿಕ್ ಎಸ್‍ಯುವಿಯ ಎಲೆಕ್ಟ್ರಿಕ್ ಆವೃತ್ತಿಯು ಅದರ ಡಿನೋ ಬರ್ನಿಂಗ್ ಎಂಬ ಸಹೋದರ ಮಾದರಿಗೆ ಹೋಲಿಸಿದರೆ ಕಡಿಮೆ ಓವರ್‌ಹ್ಯಾಂಗ್‌ಗಳನ್ನು ಹೊಂದಿರುತ್ತದೆ.
ಅಲ್ಲದೇ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿರುತ್ತದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಥಾರ್.ಇ ಮಾದರಿಯು ಸಂಸ್ಥೆಯ ಇತರ ಮುಂಬರುವ ಎಲೆಕ್ಟ್ರಿಕ್ ವಾಹನಗಳ ಮಾದರಿಗಳಂತೆ ಇವಿ ದೈತ್ಯ ಬಿಲ್ಡ್ ಯುವರ್ ಡ್ರೀಮ್ಸ್‌ನಿಂದ 80kWh LFP ಕೆಮಿಸ್ಟ್ರಿ ಬ್ಲೇಡ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. RWD ಆವೃತ್ತಿಯಲ್ಲಿ, ಎಲೆಕ್ಟ್ರಿಕ್ Thar.e ಮಾದರಿಯು 228 bhp ಪವರ್ ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇಲ್ಲವಾದರೆ, ಫೋಕ್ಸ್‌ವ್ಯಾಗನ್‌ನಿಂದ ಪಡೆದ282 bhp ಮತ್ತು 535 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಪಿನ್ನರ್‌ನಿಂದ ನಿಯಂತ್ರಿಸಲಾಗುತ್ತದೆ. ಫೋರ್-ವೀಲ್-ಡ್ರೈವ್ ಆವೃತ್ತಿಯು ಮುಂಭಾಗದ ಆಕ್ಸಲ್‌ನಲ್ಲಿ ಹೆಚ್ಚುವರಿ 107 bhp ಪವರ್ ಮತ್ತು 135 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನ್ ಹೊಂದಿದೆ.
ವಿಷನ್ ಥಾರ್.ಇ ಅದರ ವಿನ್ಯಾಸದ ದೃಷ್ಟಿಯಿಂದ ಥಾರ್ ವಿನ್ಯಾಸವನ್ನು ಭವಿಷ್ಯದಲ್ಲಿ ತರುತ್ತದೆ ಮತ್ತು ಆ ಒರಟಾದ ವಿನ್ಯಾಸವನ್ನು ಉಳಿಸಿಕೊಂಡಿದೆ, ಇದು ಎಸ್‌ಯುವಿಯ ICE ಆವೃತ್ತಿಯನ್ನು ಆಫ್-ರೋಡಿಂಗ್ ಸಮುದಾಯದ ಪ್ರಿಯತಮೆಯನ್ನಾಗಿ ಮಾಡಿದೆ. ವಿಷನ್ ಥಾರ್.ಇ ಮಾದರಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ವಿನ್ಯಾಸದ ದೃಷ್ಟಿಯಿಂದ ಥಾರ್ ವಿನ್ಯಾಸವನ್ನು ಫ್ಯೂಚರಿಸ್ಟಿಕ್ ಆಗಿದೆ. ಈ ಹೊಸ ಮಾದರಿಯು ತನ್ನ ಒರಟಾದ ವಿನ್ಯಾಸ ಶೈಲಿಯನ್ನು ಉಳಿಸಿಕೊಂಡಿದೆ.
ಥಾರ್ ಎಸ್‌ಯುವಿಯ ICE ಆವೃತ್ತಿಯನ್ನು ಆಫ್-ರೋಡಿಂಗ್ ಸಮುದಾಯ ಮೆಚ್ಚಿನ ಮಾದರಿಯಾಗಿದೆ. ಥಾರ್ ಒರಟಾದ ಮತ್ತು ರಗಡ್ ವಿನ್ಯಾಸವು ಕೂಡ ಹಲವಾರು ಗ್ರಾಹಕರನ್ನು ಸೆಳೆಯಲು ಒಂದು ಕಾರಣವಾಗಿದೆ. ಈ ಮಹೀಂದ್ರಾ ಥಾರ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಯಾವಾಗ ಪ್ರಾರಂಭಿಸಲಾಗುವುದು ಎಂಬುದರ ಕುರಿತು ಮಹೀಂದ್ರಾ ಯಾವುದೇ ವಿವರಗಳನ್ನು ಬಹಿರಂಗ ಮಾಡಿಲ್ಲ.
ಆದರೆ ಸಂಸ್ಥೆಯು ಕೆಲವು ವರ್ಷಗಳ ಹಿಂದೆ ಅನಾವರಣಗೊಳಿಸಿದ ಎಸ್‍ಯುವಿಗ ಬಗ್ಗೆ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಮಹೀಂದ್ರಾ ಕಂಪನಿಯು 2024ರ ಡಿಸೆಂಬರ್ ತಿಂಗಳಿನಲ್ಲಿ XUV.e8 ಮಾದರಿಯು ಬಿಡುಗಡೆಯಾಗಲಿದೆ. ಇನ್ನು XUV.e9 2025ರ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾದರೆ, ಮಹೀಂದ್ರಾ BE.05 ಎಲೆಕ್ಟ್ರಿಕ್ ಕಾರು 2025ರ ಅಕ್ಟೋಬರ್ ತಿಂಗಳಿನಲ್ಲಿ ಆದರೆ BE.07 ಎಲೆಕ್ಟ್ರಿಕ್ ಕಾರು 2026ರ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
ಮಹೀಂದ್ರಾ ವಿಷನ್ ಥಾರ್.ಇ ಅನಾವರಣದ ನಂತರ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ಅವರು ಮಾತನಾಡಿ, ವಿಷನ್ ಥಾರ್.ಇ ಅನ್ನು ರಚಿಸುವುದು ದಿಟ್ಟ ಮತ್ತು ನವೀನ ಭವಿಷ್ಯವನ್ನು ಅಳವಡಿಸಿಕೊಳ್ಳುವುದಾಗಿದೆ. ನಮ್ಮ ವಿನ್ಯಾಸವು ಹೊಸ ಹಾದಿಯನ್ನು ರೂಪಿಸುತ್ತದೆ. ಅತ್ಯಾಧುನಿಕ ಸೃಜನಶೀಲತೆ ಮತ್ತು ವಿಘಟನೆ ಚಿಂತನೆಗೆ ಮಹೀಂದ್ರಾದ ಬದ್ಧತೆಗೆ ಸಾಕ್ಷಿಯಾಗಿದೆ. ನಾವು ಸಾಹಸಮಯ ಮನೋಭಾವ ಮತ್ತು ಆಫ್-ರೋಡಿಂಗ್ ಸಾಮರ್ಥ್ಯವನ್ನು ಉಳಿಸಿಕೊಂಡಿದ್ದೇವೆ.
ಇದು ಸರ್ವೋತ್ಕೃಷ್ಟವಾಗಿ ಥಾರ್, ಆದರೆ ನಾವು ಎಲೆಕ್ಟ್ರಿಕ್ ಎಸ್‍ಯುವಿಗಳ ಜಗತ್ತಿನಲ್ಲಿ ವಿಶಿಷ್ಟವಾದ ಗುರುತನ್ನು ರಚಿಸಿದ್ದೇವೆ. ಈ ಪ್ರಯತ್ನದ ನಂತರ ಇದು ಮತ್ತೊಂದು ಆಫ್-ರೋಡರ್ ಆಗಿದೆ. ಇದು ವಾಹನ ವಿನ್ಯಾಸದಲ್ಲಿ ಪ್ರಗತಿಪರ ಹೆಜ್ಜೆಯನ್ನು ಪ್ರತಿನಿಧಿಸುವ ದೃಷ್ಟಿಯನ್ನು ರೂಪಿಸುತ್ತದೆ. ಥಾರ್.ಇ ನಮ್ಮ ರೋಚಕ ಮತ್ತು ಜವಾಬ್ದಾರಿಯುತ ಭವಿಷ್ಯದ ಘೋಷಣೆಯಾಗಿದೆ ಎಂದು ಹೇಳಿದರು.


Click it and Unblock the Notifications








