Mahindra Cars: ಮಹೀಂದ್ರಾ ಕಾರುಗಳ ಅಭಿಮಾನಿಗಳೇ.. ಇಲ್ಲಿದೆ ಪ್ರಮುಖ ವಿವರ
ಭಾರತದಲ್ಲಿ ಮಹೀಂದ್ರಾ (Mahindra) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಖ್ಯಾತಿ ಗಳಿಸಿದೆ. ಅದರ ಕಾರುಗಳು ನಂಬಿಕೆಗೆ ಹೆಸರುವಾಸಿಯಾಗಿರುವುದರಿಂದ ಹೆಚ್ಚಿನ ಜನರು ಇಷ್ಟಪಟ್ಟು ಖರೀಸುತ್ತಾರೆ. ಈ ಜೂನ್ ತಿಂಗಳಲ್ಲಿಯು ಕಂಪನಿಯ ಕಾರುಗಳು ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮೊದಲಿಗೆ ಜನಪ್ರಿಯ ಸ್ಕಾರ್ಪಿಯೋ ಎನ್ ಎಸ್‌ಯುವಿ ಬಗ್ಗೆ ಮಾತನಾಡೋಣ. ಇದು ಈ ಜೂನ್ ತಿಂಗಳಲ್ಲಿ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. ಇವತ್ತು ಬುಕಿಂಗ್ ಮಾಡಿದರೂ ವಿತರಣೆ ಪಡೆಯಲು 18 ತಿಂಗಳವರೆಗೆ ಕಾಯಬೇಕು. ಈ ಎಸ್‌ಯುವಿ ಭಾರತದ ಮಾರುಕಟ್ಟೆಯಲ್ಲಿ 5 ರೂಪಾಂತರಗಳಲ್ಲಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ದೇಶದಲ್ಲಿ ಸರಿ ಸುಮಾರು ಇಪತ್ತು ವರ್ಷಗಳಿಂದ ಫೇಮಸ್ ಆಗಿರುವ ಸ್ಕಾರ್ಪಿಯೋ ಕ್ಲಾಸಿಕ್ ಈಗಲೂ ದೊಡ್ಡ ಮಟ್ಟದಲ್ಲಿ ತನ್ನದೇ ಜನಪ್ರಿಯತೆ ಹೊಂದಿದೆ. ಈ ಎಸ್‌ಯುವಿಯನ್ನು ಕೂಡ ಬರೋಬ್ಬರಿ 8 ತಿಂಗಳ ನಂತರ ವಿತರಣೆಯಾಗಲಿದೆ. ಇದು 2.2-ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ರೂ.13 ಲಕ್ಷದಿಂದ 16.81 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಲಿದೆ.
ಮಹೀಂದ್ರಾ ಕಂಪನಿಯ ಪ್ರಮುಖ ಎಸ್‌ಯುವಿಗಳಲ್ಲಿ XUV700 ಕೂಡ ಒಂದಾಗಿದ್ದು, ಸರಿ ಸುಮಾರು 14 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಇದು ಸಹ ಐದು ರೂಪಾಂತರಗಳ ಆಯ್ಕೆಯಲ್ಲಿ ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.

ಸ್ವಲ್ಪಮಟ್ಟಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾದ XUV300 ಕೂಡ ಬರೋಬ್ಬರಿ 10 ತಿಂಗಳ ನಂತರ ವಿತರಣೆಯಾಗಲಿದೆ. ಈ ಕಾರು, 5 ಆಸನ ಆಯ್ಕೆಯಲ್ಲಿ ರೂ.8.42 ಲಕ್ಷದಿಂದ ರೂ.14.60 ಲಕ್ಷ ದರದಲ್ಲಿ ಸಿಗಲಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಹೊಂದಿದೆ. ಜೊತೆಗೆ 16.5 - 20.1 kmpl ಮೈಲೇಜ್ ನೀಡುತ್ತದೆ.
ಮಹೀಂದ್ರಾ ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿ ಖ್ಯಾತಿಗಳಿಸಿರುವ ಥಾರ್ ಸಹ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನ ಪಡೆದಿರುವ ಥಾರ್ ವಿತರಣೆಗೆ 18 ತಿಂಗಳು ಹಾಗೂ 4WD (ಫೋರ್ ವೀಲ್ ಡ್ರೈವ್) ಟೆಕ್ನಲಾಜಿ ಹೊಂದಿರುವ ಥಾರ್ ಡಿಲೆವರಿ ಪಡೆಯಲು ಕೇವಲ ಒಂದು ತಿಂಗಳು ಕಾಯಬೇಕು. ಈ ಎಸ್‌ಯುವಿ ರೂ.10.54 - 16.78 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಕಡೆಯದಾಗಿ ಗ್ರಾಮೀಣ ಭಾಗದ ಜನರ ಪ್ರೀತಿಯ ಕಾರಾಗಿರುವ ಮಹೀಂದ್ರಾ ಬೊಲೆರೋ ನಿಯೋ 1 ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿದೆ. ಇದು ರೂ.9.63 - 12.14 ಲಕ್ಷ ಬೆಲೆಯಲ್ಲಿ ಕೇವಲ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿರುವ ಈ ಕಾರು, 17.29 kmpl ಮೈಲೇಜ್ ನೀಡಲಿದ್ದು, 7 ಆಸನ ಆಯ್ಕೆಯನ್ನು ಹೊಂದಿದೆ.
ಇನ್ನು, ದೇಶೀಯ ಕಂಪನಿ ಮಹೀಂದ್ರಾ ಕಾರುಗಳು ಹೊಂದಿರುವ ಬೇಡಿಕೆಯನ್ನು ಗಮನಿಸಿದರೆ, ಅವು ಎಷ್ಟರಮಟ್ಟಿಗೆ ಜನಪ್ರಿಯತೆ ಹೊಂದಿವೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಅದರಲ್ಲೂ ಸ್ಕಾರ್ಪಿಯೋ ಎನ್ ಎಸ್‌ಯುವಿಯನ್ನು ಗ್ರಾಹಕರು ವಿತರಣೆ ಪಡೆಯಲು ಏನಿಲ್ಲ ಅಂದರೂ ಒಂದೂವರೆ ವರ್ಷ ಕಾಯಬೇಕು. ಜನಸಾಮಾನ್ಯರ ಎಸ್‌ಯುವಿಯಂದೇ ಖ್ಯಾತಿಗಳಿಸಿರುವ ಬೊಲೆರೋ ನಿಯೋ ಒಂದೇ ತಿಂಗಳಲ್ಲಿ ವಿತರಣೆಯಾಗಲಿರುವುದು ಒಳ್ಳೆಯ ವಿಚಾರವಾಗಿದೆ.


Click it and Unblock the Notifications