ಮಹೀಂದ್ರಾ XUV400 ಇವಿ ಹೊಸ ದಾಖಲೆ...ಟಾಟಾ ನೆಕ್ಸಾನ್‌ಗೆ ತಕ್ಕ ಪ್ರತಿಸ್ಪರ್ಧಿಯಾಗಲಿದೆಯೇ?

ಮಹೀಂದ್ರಾ ಕಂಪನಿಯು ಪ್ರಸ್ತುತ ಭಾರತದಲ್ಲಿ ಒಂದರ ನಂತರ ಒಂದು ಬೆಸ್ಟ್ ಸೆಲ್ಲರ್ ಎಸ್‌ಯುವಿಯನ್ನು ಪರಿಚಯಿಸುವ ಮೂಲಕ ತನ್ನ ಹವಾ ಮುಂದುವರಿಸುತ್ತಿದೆ. ಇದೀಗ ತನ್ನ ಮುಂದಿನ ಬಹುನಿರೀಕ್ಷಿತ ದೊಡ್ಡ ಬಿಡುಗಡೆಯೆಂದರೆ ಅದು XUV400 ಇವಿ. ಇದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅನಾವರಣವಾಗಿದ್ದು, ಇದೇ ತಿಂಗಳಿನಲ್ಲಿ ಬೆಲೆಗಳನ್ನು ಘೋಷಿಸುವ ನಿರೀಕ್ಷೆಯಿದೆ.

ಪ್ರಾಥಮಿಕ ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ EV ವಿರುದ್ಧ ಸಾಮರ್ಥ್ಯಗಳನ್ನು ಸುಧಾರಿಸಲು XUV400 ನ ಬೇಸ್-ಸ್ಪೆಕ್ ರೂಪಾಂತರಗಳನ್ನು ಸುಮಾರು 17 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ನೀಡಬಹುದು. XUV400 ತಾಂತ್ರಿಕ ವಿಶೇಷತೆಗಳು, ವ್ಯಾಪ್ತಿ, ಬ್ಯಾಟರಿ ಸಾಮರ್ಥ್ಯ, ಇತ್ಯಾದಿಗಳಲ್ಲಿ Nexon EV ಗಿಂತ ಉತ್ತಮವಾಗಿದೆ. ಇದು ಹೀಗಿದ್ದರೇ ಮಾರುಕಟ್ಟೆಗೆ ಇಳಿದ ಬಳಿಕ ಈ ಎರಡೂ ವಾಹನಗಳ ನಡುವೆ ಕಠಿಣ ಪೈಪೋಟಿ ನೋಡುವ ಮುನ್ನವೇ ಮಹೀಂದ್ರಾ XUV400 ಇವಿ ಹೊಸ ದಾಖಲೆ ನಿರ್ಮಿಸಿದೆ.

ಮಹೀಂದ್ರಾ XUV400 ಇವಿ ಹೊಸ ದಾಖಲೆ...ಟಾಟಾ ನೆಕ್ಸಾನ್‌ಗೆ ತಕ್ಕ ಪ್ರತಿಸ್ಪರ್ಧಿಯಾಗಲಿದೆಯೇ?

ಮಹೀಂದ್ರಾ XUV400 ಇವಿ ಹೊಸ ದಾಖಲೆ
XUV400 ಎಲೆಕ್ಟ್ರಿಕ್ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ಮಹೀಂದ್ರಾ ಬಹಿರಂಗಪಡಿಸಿದೆ. 0 ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ 24 ಗಂಟೆಗಳಲ್ಲಿ 751 ಕಿ.ಮೀ ದೂರವನ್ನು ಕ್ರಮಿಸಿದ ಮೊದಲ ಎಲೆಕ್ಟ್ರಿಕ್ ವಾಹನವಾಗಿ ಗುರ್ತಿಸಿಕೊಂಡಿದೆ. ಹಿಮಾಚಲ ಪ್ರದೇಶದ ಕೈಲಾಂಗ್, ಲಾಹೌಲ್ ಸ್ಪಿಟಿಯಿಂದ ಪ್ರಾರಂಭವಾದ ಡ್ರೈವ್ 24 ಗಂಟೆಗಳಲ್ಲಿ 751 ಕಿ.ಮೀ ದೂರವನ್ನು ಕ್ರಮಿಸಿತು. ಕಡಿದಾದ ಇಳಿಜಾರುಗಳಲ್ಲಿ XUV400 ಎಲೆಕ್ಟ್ರಿಕ್ SUV ಸಲೀಸಾಗಿ ಜಿಗ್ ಜಾಗ್ ಮಾಡುವುದನ್ನು ಹಲವರು ಕಂಡಿದ್ದಾರೆ.

ಇದು ಸಾಕಷ್ಟು ಗಮನಾರ್ಹವಾಗಿದೆ, ಏಕೆಂದರೆ ಹೆಚ್ಚಿನ ಎತ್ತರ-ಇಳಿಜಾರುಗಳಲ್ಲಿ ವಾಹನವನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿರುತ್ತದೆ. XUV400 ಯಾವುದೇ ತೊಂದರೆ ನೀಡದೆ ಸರಾಗವಾಗಿ ವೇಗವನ್ನು ಮತ್ತು ಇತರ ಕಾರುಗಳನ್ನು ಹಿಂದಿಕ್ಕಿರುವುದಾಗಿ ಕಂಪನಿ ಹೇಳಿದೆ. XUV400 112 Ah ಸಾಮರ್ಥ್ಯದ ರೇಟಿಂಗ್ ಹೊಂದಿರುವ 39.4 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವುದು ವಾಹನ ಸಾಮರ್ಥ್ಯವನ್ನು ಸಾಭೀತುಪಡಿಸಿದೆ. ಬ್ಯಾಟರಿ ಪ್ಯಾಕ್ ನಿಕಲ್, ಮ್ಯಾಂಗನೀಸ್ ಮತ್ತು ಕೋಬಾಲ್ಟ್ ಎಲೆಕ್ಟ್ರೋ-ಕೆಮಿಕಲ್ ಸಂಯೋಜನೆಯನ್ನು ಹೊಂದಿದೆ.

ಒಟ್ಟು ವಾಹನದ ತೂಕವು 1,960 ಕೆ.ಜಿ ಇದ್ದು, ಅದರಲ್ಲಿ ಬ್ಯಾಟರಿ ಪ್ಯಾಕ್ ಸ್ವತಃ 309 ಕೆ.ಜಿ ತೂಗುತ್ತದೆ. ಅಧಿಕೃತವಾಗಿ, XUV400 ನಲ್ಲಿ 8.3 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಸಾಧಿಸಬಹುದು. ಇದು ಐಷಾರಾಮಿ ಅಲ್ಲದ ವಿಭಾಗವನ್ನು ಹೊರತುಪಡಿಸಿ, ಭಾರತದಲ್ಲಿ ಉತ್ಪಾದಿಸಲಾಗುವ ಅತ್ಯಂತ ವೇಗದ ಎಲೆಕ್ಟ್ರಿಕ್ ಪ್ರಯಾಣಿಕ ವಾಹನವಾಗಿದೆ. XUV400 ಇವಿ 150 kmph ಗರಿಷ್ಠ ವೇಗವನ್ನು ಹೊಂದಿದೆ. ಈ ವೇಗವು ಪ್ರಯಾಣಿಕರು ಹಾಗೂ ಲಗ್ಗೇಜ್ ಅನ್ನು ಒಳಗೊಂಡಿರುವ ವೇಗವಾಗಿದೆ.

AIS 040 (Rev. 1) ಮಾನದಂಡದ ಪ್ರಕಾರ XUV400 456 ಕಿ.ಮೀ ಪ್ರಮಾಣೀಕೃತ ಶ್ರೇಣಿಯನ್ನು ಹೊಂದಿದೆ. ಇದರ ಪ್ರತಿಸ್ಪರ್ಧಿಯಾದ Nexon EV ಮ್ಯಾಕ್ಸ್ 437 ಕಿ.ಮೀ (ARAI) ಪ್ರಮಾಣೀಕೃತ ವ್ಯಾಪ್ತಿಯನ್ನು ಹೊಂದಿದೆ. ಮಹೀಂದ್ರಾ XUV400 ಅನ್ನು ಪವರ್ ಮಾಡುವುದು AC - ಸಿಂಕ್ರೊನಸ್ ಮೋಟಾರ್ ಆಗಿದ್ದು, ಇದು 5,500 rpm ನಲ್ಲಿ 110 kW (147.5 hp) ಗರಿಷ್ಠ ಶಕ್ತಿಯನ್ನು ಮತ್ತು 310 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.

ವೆಚ್ಚವನ್ನು ನಿಯಂತ್ರಣದಲ್ಲಿಡಲು, XUV400 ಮಾದರಿಗೆ ತಾನೇ ತಯಾರಿಸಿದ ಬ್ಯಾಟರಿಗಳನ್ನು ಕಂಪನಿ ಬಳಸುತ್ತದೆ. ಇವುಗಳನ್ನು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್, ಮಹೀಂದ್ರಾ ಸಹಯೋಗದೊಂದಿಗೆ ತಯಾರಿಸಲಿದೆ. ಆದರೆ ಬ್ಯಾಟರಿ ನಿಯಂತ್ರಕ ಮತ್ತು ಎಲೆಕ್ಟ್ರಿಕ್ ಮೋಟಾರ್ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಉಳಿದಂತೆ ಕಾರಿನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, 7-ಏರ್‌ಬ್ಯಾಗ್‌ಗಳು ಮತ್ತು ಹೊಂದಾಣಿಕೆ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, January 7, 2023, 12:05 [IST]
English summary
Mahindra xuv 400 ev sets a new record
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+