ಭಾರತವೇ ಕಾಯುತ್ತಿರುವ ಸ್ವದೇಶಿ EV ಕಾರು ಟೆಸ್ಟಿಂಗ್ ವೇಳೆ ದರ್ಶನ... ನೋಡಲು ಹೇಗಿದೆ ಗೊತ್ತಾ?

ಭಾರದಲ್ಲಿ ಸದ್ಯ EV ಕಾರುಗಳ ಅಬ್ಬರ ಜೋರಾಗಿದ್ದು, ಪ್ರಮುಖ ವಾಹನ ತಯಾರಕರು ಹೊಸ ಇವಿ ವಲಯದಲ್ಲಿ ಹಿಡಿತ ಸಾಧಿಸಲು ಹೊಸ ಕಾರುಗಳನ್ನು ಪರಿಚಯಿಸಲು ಕಾತುರದಲ್ಲಿದ್ದಾರೆ. ಈ ನಿಟ್ಟಿನಲ್ಲೇ ಇತ್ತೀಚೆಗೆ ಪ್ರಮುಖ ಸ್ವದೇಶಿ ಕಂಪನಿಯಾದ ಮಹೀಂದ್ರಾದವರ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಪ್ರಸ್ತುತ ಭಾರತದಲ್ಲಿ ಟಾಟಾ ಮೋಟಾರ್ಸ್, ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಟಾಟಾ ಇವಿ ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಪ್ರತಿ ವಾಹನ ತಯಾರಕರು ಕೂಡ ಟಾಟಾ ಕಾರುಗಳಿಗೆ ಪೈಪೋಟಿಯಾಗಿ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದೀಗ ಮಹೀಂದ್ರಾ ಕಂಪನಿಯ ಹೊಸ ಎಲೆಕ್ಟ್ರಕ್ ಕಾರು ಕೂಡ ಟಾಟಾ ಕಾರುಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

mahindra xuv 700 ev

ಅಷ್ಟಕ್ಕೂ ಮಹೀಂದ್ರಾದ ಯಾವ ಕಾರಿನ ಬಗ್ಗೆ ಹೇಳುತ್ತಿದ್ದೀರಾ ಎಂದು ಕೇಳಿದ್ರೇ, ಅದು ಇನ್ಯಾವುದೂ ಅಲ್ಲಾ ಮಹೀಂದ್ರಾ XUV700 EV, ಈ ಎಲೆಕ್ಟ್ರಿಕ್ ಕಾರನ್ನು ಇತ್ತೀಚೆಗೆ ಚೆನ್ನೈನಲ್ಲಿ ಪರೀಕ್ಷಿಸಿತ್ತಿದ್ದ ವೇಳೆ ಫೋಟೋ ತೆಗೆಯಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಮೂಲಗಳ ಪ್ರಕಾರ ಅತಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಟಾಟಾ ಕೂಡ ತನ್ನ ಟಾಪ್ ಮಾದರಿಗಳಾದ ಟಾಟಾ ಹ್ಯಾರಿಯರ್ ಹಾಗೂ ಟಾಟಾ ಸಫಾರಿ ಕಾರುಗಳನ್ನು ಸಹ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಅಲ್ಲಿಗೆ ಮಹೀಂದ್ರಾ ತನ್ನ XUV700 ಕಾರಿನ ಎಲೆಕ್ಟ್ರಿಕ್ ಆವೃತ್ತಿಯು ಟಾಟಾ ಕಾರುಗಳಿಗೆ ನೇರ ಪ್ರತಿಸ್ಪರ್ಧಿಯಾಗುವುದು ಖಚಿತ ಎಂಬುದು ನಮ್ಮ ಅಭಿಪ್ರಾಯ.

mahindra xuv 700 ev

ಚೆನ್ನೈನ ಕೆಲ ಪ್ರದೇಶಗಳಲ್ಲಿ ಮಹೀಂದ್ರಾ XUV700 EV ಅನ್ನು ಪರೀಕ್ಷಿಸಲಾಗಿದೆ. ನೀವು ಪ್ರಸ್ತುತ ಇಲ್ಲಿ ವೀಕ್ಷಿಸುತ್ತಿರುವ ಫೋಟೋಗಳು ಚೆನ್ನೈನ ಕೆಲವೆಡೆ ಕಾರನ್ನು ಪರೀಕ್ಷಿಸುತ್ತಿದ್ದಾಗ ತೆಗೆದ ಫೋಟೋಗಳಾಗಿವೆ. ಮಹೀಂದ್ರಾ XUV 700 ಅನ್ನು INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಇದೇ ವೇದಿಕೆಯಲ್ಲಿ ಒಟ್ಟು 5 ಕಾರುಗಳನ್ನು ನಿರ್ಮಿಸುವುದಾಗಿ ಮಹೀಂದ್ರಾ ಈ ಹಿಂದೆಯೇ ಪ್ರಕಟಿಸಿತ್ತು.

XUV700 ಎಲೆಕ್ಟ್ರಿಕ್ ಕಾರು 60kWh ಅಥವಾ 80kWh ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಈ ಕಾರು ಅಡಾಸ್ ತಂತ್ರಜ್ಞಾನ, ಫ್ಲ್ಯಾಷ್ ಡೋರ್ ಹ್ಯಾಂಡಲ್‌ಗಳು, 5 ಸ್ಟಾರ್ ಕ್ರ್ಯಾಶ್ ಡೇಟೆಡ್ ಬಾಡಿ ಶೆಲ್, ಪನೋರಮಿಕ್ ಸನ್ ರೂಫ್, ಮೆಮೊರಿ ಫಂಕ್ಷನ್‌ನೊಂದಿಗೆ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಪ್ರೊಟೆಕ್ಷನ್ ಮಾದರಿಯ ಡ್ಯಾಶ್ ಬೋರ್ಡ್‌ನಲ್ಲಿ 3 ಸ್ಕ್ರೀನ್ ಲೇಔಟ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

mahindra xuv 700 ev

ಉಳಿದಂತೆ ಚಾರ್ಜಿಂಗ್ ಹಾಗೂ ರೇಂಜ್ ಬಗ್ಗೆ ಮಾಹಿತಿ ಹೊರಬರಬೇಕಿದೆ. ಒಟ್ಟಾರೆ ಮಹೀಂದ್ರಾ ಮುಂಬರುವ ದಿನಗಳಲ್ಲಿ ಸಾಲು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದು ಖಚಿತವಾಗಿದೆ. ಅತ್ಯಾಧುನಿಕ ಫೀಚರ್ಸ್, ಹೊಸ ಡಿಸೈನ್, ಹೊಸ ತಂತ್ರಜ್ಞಾನವನ್ನು ಒಳಗೊಂಡಿರಲಿವೆ. ಆದರೆ ಇವು ಟಾಟಾಗೆ ಹೋಲಿಸಿಕೊಂಡರೆ ಯಾವ ಮಟ್ಟಿಗೆ ಯಶಸ್ವಿಯಾಗಲಿವೆ ಎಂಬುದನ್ನು ಬಿಡುಗಡೆ ಬಲಿಕವಷ್ಟೇ ನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Rushlane
Link: https://www.rushlane.com/mahindra-xuv700-electric-suv-spied-testing-in-chennai-12471710.html

Article Published On: Tuesday, June 13, 2023, 19:05 [IST]
English summary
Mahindra xuv 700 ev appeared during testing chennai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+