ಸಪ್ತ ಸಾಗರದಾಚೆಯ ಆಸ್ಟ್ರೇಲಿಯಾದಲ್ಲಿ ಹವಾ ಸೃಷ್ಟಿಸಲು ಸಿದ್ಧವಾದ ಮಹೀಂದ್ರಾ XUV 700

ಭಾರತದ ಹೆಮ್ಮೆಯ ವಾಹನ ತಯಾರಿಕಾ ಕಂಪನಿಗಳಲ್ಲಿ ಮಹೀಂದ್ರಾ ಕೂಡ ಒಂದು. ಈಗಾಗಲೇ ಹಲವಾರು ಕಾರು, ಪಿಕ್‌ಅಪ್ ಟ್ರಕ್‌ಗಳನ್ನು ಭಾರತೀಯ ವಾಹನ ಮಾರುಕಟ್ಟೆಗೆ ಪರಿಚಯಿಸಿದ್ದು ಭಾರೀ ಯಶಸ್ಸನ್ನು ಗಳಿಸಿದೆ. ಇದೀಗ ಮಹೀಂದ್ರಾ ಕಂಪನಿಯ ಮತ್ತೊಂದು ಕಾರು ಸಪ್ತಸಾಗರದಾಚೆ ಕಾಲಿಟ್ಟಿದ್ದು ಅಲ್ಲೂ ಭಾರೀ ಯಶಸ್ಸು ಗಳಿಸುವ ನಿರೀಕ್ಷೆಯಿದೆ.

ಮಹೀಂದ್ರಾ XUV 700 ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ತುಂಬಾ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕಾರು. ಕಡಿಮೆ ಬೆಲೆಗೆ ಲಕ್ಷುರಿ ಕಾರುಗಳಲ್ಲಿ ಕಾಣಸಿಗುವ ಆಟೋ ಪೈಲೆಟ್‌ ನಂತಹ ಫೀಚರ್ಸ್‌ ಅನ್ನು ಕಾರು ನೀಡುತ್ತಿದ್ದು, ಮಧ್ಯಮ ವರ್ಗದ, ಕಾರು ಪ್ರೀಯರ ನೆಚ್ಚಿನ ಕಾರಾಗಿದೆ ಎಂಬುದು ಎಲ್ಲರ ಅಭಿಪ್ರಾಯ.

Mahindra XUV 700

ಇದೀಗ ಮಹೀದ್ರಾ XUV 700 ಕಾರು ಆಸ್ಟ್ರೇಲಿಯಾದಲ್ಲಿ ಲಾಂಚ್‌ ಆಗಿದ್ದು, ಭಾರತದಲ್ಲಿ ಮಾರಾಟವಾಗುತ್ತಿದ್ದ ಬೆಲೆಗಿಂತ 10 ಲಕ್ಷ ಅಧಿಕ ಬೆಲೆಗೆ ಇದು ಆಸ್ಟ್ರೇಲಿಯಾದಲ್ಲಿ ಮಾರಾಟವಾಗಲಿದೆ. ಮಾರಾಟದ ಸೇವೆಯನ್ನು ವಿಸ್ತರಿಸುವ ನಿಟ್ಟಿನಿಂದ ಕಾರನ್ನು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಅಂದರೆ ಭಾರತದಲ್ಲಿ ಮಹೀಂದ್ರಾ ಮಹೀದ್ರಾ XUV 700 ಕಾರಿನ AX7 ವೇರಿಯಂಟ್‌ ರೂ. 20,56,300 ರೂಗಳಿಗೆ ಮಾರಾಟವಾಗುತ್ತಿದ್ದು, ಇದೇ ಕಾರು ಆಸ್ಟ್ರೇಲಿಯಾದಲ್ಲಿ ಸುಮಾರು $36,990 ಅಥವಾ ರೂ. 30,35,639 ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಸುಮಾರು 10 ಲಕ್ಷ ರೂ ಆಸ್ಟ್ರೇಲಿಯಾ ದೇಶದ ಕಸ್ಟಮ್‌ ಡ್ಯೂಟೀಸ್‌ ಮತ್ತು ತೆರಿಗೆ ಎಂದು ತಿಳಿದು ಬಂದಿದೆ.

ಮಹೀಂದ್ರಾ ಸಂಸ್ಥೆಯ ಆಟೋಮೋಟಿವ್‌ ಸೆಕ್ಟರ್‌ನ ಅಧ್ಯಕ್ಷರಾದ ವೀಜಯ್‌ ನಕ್ರಾ ಅವರು ಆಸ್ಟ್ರೇಲಿಯಾದಲ್ಲಿ ಕಾರನ್ನು ಲಾಂಚ್‌ ಮಾಡುತ್ತಿರುವ ಕುರಿತು ಮಾತನಾಡುತ್ತಾ, ನಮ್ಮ ಕಾರಾದ ಮಹೀದ್ರಾ XUV 700 ಅನ್ನು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡುವತ್ತ ಮೊದಲ ಹೆಜ್ಜೆ ಇಟ್ಟಿರುವುದು ಇದು ನಮ್ಮ ಸಂಸ್ಥೆಯ ಮುಖ್ಯ ಮೈಲುಗಲ್ಲುಗಳಲ್ಲಿ ಒಂದಾಗಿದೆ.

XUV 700 ಕಾರನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಸಾಮರ್ಥ್ಯದಲ್ಲಿ ತಯಾರಿಸಲಾಗಿದೆ. ಭಾರತೀಯ ಮಾರುಕಟ್ಟೆಯ ಅಭೂತಪೂರ್ವ ಯಶಸ್ಸಿನ ನಂತರ ನಾವು ಇದನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇಲ್ಲಿಯೂ ಸಹ ಕಾರು ತನ್ನ ಛಾಪನ್ನು ಮೂಡಿಸಲಿದೆ ಎಂದು ಅವರು ಇದೇ ಸಂಧರ್ಭದಲ್ಲಿ ತಿಳಿಸಿದ್ದಾರೆ.

ಮಹೀಂದ್ರಾ XUV 700 ಕಾರು ಆಸ್ಟ್ರೇಲಿಯನ್‌ ಮಾರುಕಟ್ಟೆಯಲ್ಲಿ AX7 ಮತ್ತು AX7L ಎಂಬ 2 ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆಯು ತಿಳಿಸಿದೆ. ಇದರ ಜೊತೆಗೆ ಕಂಪನಿಯು ಏಳು ವರ್ಷ ಅಥವಾ 150000 ಲಕ್ಷ ಕಿಲೋ ಮೀಟರ್‌ನ ವಾರಂಟಿ ಸೌಲಭ್ಯವನ್ನು ಕಾರಿಗೆ ನೀಡಲಿದೆ ಎಂದು ತಿಳಿದು ಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 17, 2023, 17:48 [IST]
English summary
Mahindra xuv 700 launched in australia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+