ಭಾರೀ ಮೈಲೇಜ್.. ದೊಡ್ಡ ಕಂಪನಿ ಕಾರು ಕಾಣಿಸಿಕೊಂಡ್ತು: 5 ಲಕ್ಷಕ್ಕೆ ಮಾರಾಟ? Tata ಪಂಚ್ SUVಗೆ ಬಿಗ್ ಫೈಟ್!

ಭಾರತದ ಮಾರುಕಟ್ಟೆಯಲ್ಲಿ ಮೈಕ್ರೋ ಎಸ್‌ಯುವಿಗಳು ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸುತ್ತಿವೆ. ಇವು ಕಡಿಮೆ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆಯೊಂದಿಗೆ ಖರೀದಿಗೆ ದೊರೆಯುತ್ತಿರುವುದರಿಂದ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸದ್ಯ, ದೇಶದ ಜನಪ್ರಿಯ ವಾಹನ ತಯಾರಕ ಮಹೀಂದ್ರಾದ ಹೊಸ ಮೈಕ್ರೋ ಎಸ್‌ಯುವಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ.

ಮಹೀಂದ್ರಾ ಕಂಪನಿಯ ಹೊಸ ಕಾರಿನ ಬಗ್ಗೆ ಮಾತನಾಡುವ ಮುನ್ನ, ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಜನಪ್ರಿಯವಾಗಿರುವ ಟಾಟಾ ಪಂಚ್ ಮಾರಾಟದ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯೋಣ. ಪಂಚ್ ಅತ್ಯಂತ ಜನಪ್ರಿಯ ಮೈಕ್ರೋ ಎಸ್‌ಯುವಿ ಆಗಿದ್ದು, ಕಂಪನಿಯು ತಿಂಗಳಿಗೆ ಬರೋಬ್ಬರಿ 10,000ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತದೆ. ಇದೀಗ, ಈ ವಿಭಾಗ ಮೇಲೆ ಹ್ಯುಂಡೈ ಕಣ್ಣಿಟ್ಟಿದ್ದು, ಹೊಸ ಎಕ್ಸ್‌ಟರ್ ಎಸ್‌ಯುವಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.

ಭಾರೀ ಮೈಲೇಜ್.. ದೊಡ್ಡ ಕಂಪನಿ ಕಾರು ಕಾಣಿಸಿಕೊಂಡ್ತು: 5 ಲಕ್ಷಕ್ಕೆ ಮಾರಾಟ? Tata ಪಂಚ್ SUVಗೆ ಬಿಗ್ ಫೈಟ್!

ಇದೀಗ, ನಾನೇನು ಕಮ್ಮಿ ಇಲ್ಲ ಎಂಬಂತೆ ಮಹೀಂದ್ರಾ ಕೂಡ ಮೈಕ್ರೋ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಅದರ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಕಂಡುಬಂದಿವೆ. ಇದನ್ನು ಗಮನಿಸಿದಾಗ ಈ ವಿಭಾಗವನ್ನು ಪ್ರವೇಶಿಸಲು ಮಹೀಂದ್ರಾ ಕೂಡ ಪ್ರಯತ್ನಿಸುತ್ತಿದೆ ಎಂದು ಸುಲಭವಾಗಿ ಹೇಳಬಹುದು.

ಮಹೀಂದ್ರಾ ಕಂಪನಿ ಈಗಾಗಲೇ 'XUV100' ಎಂಬ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಬಹುತೇಕ ಈ ನೂತನ ಕಾರು ಇದೇ ಹೆಸರಿನೊಂದಿಗೆ ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ, ಲಾಂಚ್ ಸಂಬಂಧ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಈ ಹೊಸ ಕಾರು, E20 ಫ್ಯುಯೆಲ್ (ಶೇಕಡ 80% ಪೆಟ್ರೋಲ್ ಹಾಗೂ 20% ಎಥನಾಲ್) ಬೆಂಬಲಿಸುವ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು.

ಭಾರೀ ಮೈಲೇಜ್.. ದೊಡ್ಡ ಕಂಪನಿ ಕಾರು ಕಾಣಿಸಿಕೊಂಡ್ತು: 5 ಲಕ್ಷಕ್ಕೆ ಮಾರಾಟ? Tata ಪಂಚ್ SUVಗೆ ಬಿಗ್ ಫೈಟ್!

ಈ ಹೊಸ ಕಾರು, ಮಹೀಂದ್ರಾ KUV100 ಪಡೆದಿರುವ ಎಂಜಿನ್ ಆಯ್ಕೆಯನ್ನು ಹೊಂದಿರಬಹುದು. ಬಹುಶಃ ಇದರಲ್ಲಿ ಬಳಕೆ ಮಾಡುವ 1.2 ಲೀಟರ್ ಪೆಟ್ರೋಲ್ ಎಂಜಿನ್, 82 bhp ಗರಿಷ್ಠ ಪವರ್ ಹಾಗೂ 114 Nm ಟಾರ್ಕ್ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಆದರೆ, ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜೊತೆಗೆ ವೈಶಿಷ್ಟ್ಯದ ವಿಚಾರಗಳ ಕುರಿತು ತಿಳಿದಿಲ್ಲ. ಮೂಲಗಳ ಪ್ರಕಾರ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಬಹುತೇಕ ಮಾರುಕಟ್ಟೆ ತಜ್ಞರು, ಈ ಕಾರು ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಿದ್ದು, ಸರಿ ಸುಮಾರು ರೂ.5 ರಿಂದ 5.50 ಲಕ್ಷ ದರದಲ್ಲಿ ಸಿಗಬಹುದು.

ಒಟ್ಟಾರೆ, ಮಹೀಂದ್ರಾ ತನ್ನ ಮೈಕ್ರೋ ಎಸ್‌ಯುವಿಯನ್ನು ಇದೇ ಮೊದಲ ಬಾರಿಗೆ ಭಾರತದ ರಸ್ತೆಯಲ್ಲಿ ಪರೀಕ್ಷೆ ನಡೆಸಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಇದು ಉಳಿದ ಕಾರುಗಳಿಗೆ ಹೋಲಿಸಿದರೆ, ಅತಿ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ. ಏನೇ ಊಹಾಪೋಹಗಳಿದ್ದರೂ ಈ ಕಾರು ಅನಾವರಣಗೊಂಡ ಮೇಲೆಯೇ ಖಚಿತ ಮಾಹಿತಿ ಸಿಗಲಿದೆ. ಅಲ್ಲಿಯವರೆಗೆ ಕಾಯಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Thursday, May 25, 2023, 13:49 [IST]
English summary
Mahindra xuv100 small suv spied tata punch rival details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+