ಕೈಗೆಟಕುವ ಬೆಲೆಯಲ್ಲಿ ಮಹೀಂದ್ರಾ XUV300 ಎಸ್‍ಯುವಿಯ ಹೊಸ ರೂಪಾಂತರ ಬಿಡುಗಡೆ
ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ, ವಿದೇಶಿ ಕಾರು ಕಂಪನಿಗಳಿಗೆ ಪೈಪೋಟಿ ನೀಡಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಮಹೀಂದ್ರಾ ಕಂಪನಿಯು ತನ್ನ XUV300 ಎಸ್‍ಯುವಿಯನ್ನು ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಈ ಹೊಸ ಮಹೀಂದ್ರಾ XUV300 (Mahindra XUV300) ಎಸ್‍ಯುವಿಯ ಹೊಸ ರೂಪಾಂತರವು ಈಗ ಹೆಚ್ಚು ಕೈಗೆಟುಕುವಂತಿದೆ.
ಮಹೀಂದ್ರಾ XUV300 ಎಸ್‍ಯುವಿಯ ಹೊಸ ರೂಪಾಂತರದ ಬಿಡುಗಡೆಯು ವಾಹನ ತಯಾರಕರಿಗೆ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಮಾರಾಟವನ್ನು ಸಾಹಿಸಲು ನೆರವಾಗುತ್ತದೆ. ಇದು ಸಬ್-4 ಮೀಟರ್ ಎಸ್‍ಯುವಿಯು ಆಕರ್ಷಕ ವಿನ್ಯಾಸದ ಮಾದರಿಯಾಗಿದೆ. ಇದು ವಾಹನ ತಯಾರಕರ ಒಟ್ಟಾರೆ ಮಾರಾಟದ ಅಂಕಿಅಂಶಗಳಲ್ಲಿ ಗಮನಾರ್ಹವಾದ ಉತ್ತೇಜನವನ್ನು ಉಂಟುಮಾಡುವ ಸಾಧ್ಯತೆಯಿದೆ. ಮಹೀಂದ್ರಾ XUV300 ಎಸ್‍ಯುವಿಯ ಹೊಸ ಬೇಸ್ ರೂಪಾಂತರವಾ W2 ಆಗಿದೆ.

ಈ ಹೊಸ ಮಹಿಂದ್ರಾ XUV300 W2 ರೂಪಾಂತರದ ಬೆಲೆಯು ರೂ. 7.99 ಲಕ್ಷವಾಗಿದೆ. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೊಸ ಮಹಿಂದ್ರಾ XUV300 W2 ರೂಪಾಂತರದಲ್ಲಿ 1.2-ಲೀಟರ್, ಟರ್ಬೋಚಾರ್ಜ್ಡ್ (TCMPFi) ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 109 bhp ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದರೊಂದಿಗೆ 1.2-ಲೀಟರ್, ಟರ್ಬೋಚಾರ್ಜ್ಡ್ (mStallion TGDi) ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 128 bhp ಮತ್ತು 230 Nm ಟಾರ್ಕ್ (ಬೂಸ್ಟ್ ಮೋಡ್‌ನಲ್ಲಿ 250 Nm) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪೆಟ್ರೋಲ್ ಎಂಜಿನ್ ಗಳೊಂದಿಗೆ ಮಹಿಂದ್ರಾ XUV300 W2 ರೂಪಾಂತರದಲ್ಲಿ 1.5-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.
ಈ ಡೀಸೆಲ್ ಎಂಜಿನ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. mStallion TGDi ಎಂಜಿನ್ ಹೊರತುಪಡಿಸಿ ಎಲ್ಲಾ ಎಂಜಿನ್ ಗಳು ಸ್ಟ್ಯಾಂಡರ್ಡ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಬದಲಿಗೆ 6-ಸ್ಪೀಡ್ AMT ಯುನಿಟ್‌ನೊಂದಿಗೆ ನಿರ್ದಿಷ್ಟಪಡಿಸಬಹುದು. TCMPFi ರೂಪಾಂತರಗಳ ಬೆಲೆಯು ರೂ.7.99 ಲಕ್ಷ ಮತ್ತು ರೂ.13.29 ಲಕ್ಷ (ಎಕ್ಸ್-ಶೋರೂಂ) ಆಗಿದೆ.
ಆದರೆ mStallion TGDi ರೂಪಾಂತರಗಳ ಬೆಲೆಯು ರೂ.9.29 ಲಕ್ಷ ಮತ್ತು ರೂ.12.99 ಲಕ್ಷ (ಎಕ್ಸ್ ಶೋ ರೂಂ) ನಡುವೆ ಇರುತ್ತದೆ. ಅಂತಿಮವಾಗಿ, ಡೀಸೆಲ್ ರೂಪಾಂತರಗಳ ಬೆಲೆಯು ರೂ.10.20 ಲಕ್ಷ ಮತ್ತು ರೂ.14.59 ಲಕ್ಷವಾಗುತ್ತದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಬೇಸ್ ಸ್ಪೆಕ್ ಬೆಲೆಯು ಕೈಗೆಟುಕುವಂತಿದೆ.
ಮಹೀಂದ್ರಾ XUV300 ಎಸ್‌ಯುವಿ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದಿದ್ದು, ಇದು ಬಹುತೇಕರನ್ನು ಆಕರ್ಷಿಸುತ್ತದೆ. ಎಂದು ಹೇಳಿದರೆ ತಪ್ಪಾಗುವುದಿಲ್ಲ. ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ದೊಡ್ಡದಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಸ್ಟೀರಿಂಗ್ ಮೋಡ್ಸ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ DRLs ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇಷ್ಟೇ ಅಲ್ಲದೆ, ಈ ಮಹೀಂದ್ರಾ XUV300 ಎಸ್‌ಯುವಿಯು ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದ್ದು, ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 6 ಏರ್‌ಬ್ಯಾಗ್ಸ್, CBC (ಕಾರ್ನರ್ ಬ್ರೇಕಿಂಗ್ ಕಂಟ್ರೋಲ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, TC (ಟ್ರಾಕ್ಷನ್ ಕಂಟ್ರೋಲ್)ಯನ್ನು ಪಡೆದಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಈ ಮಹೀಂದ್ರಾ XUV300, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ಬ್ರೆಝಾ ಹಾಗೂ ಹೋಂಡಾ WR-Vಗಳಿಗೆ ಭಾರೀ ಪೈಪೋಟಿ ನೀಡುತ್ತದೆ. ಮುಂಬರುವ ಎಮಿಷನ್ ಮಾನದಂಡಗಳಿಗೆ ಈ ಕಾರನ್ನು ನವೀಕರಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದಲೂ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications