ಮಹೀಂದ್ರಾ ಎಕ್ಸ್​ಯುವಿ400 ವಿತರಣೆ ಪ್ರಾರಂಭ: ಟಾಟಾ ನೆಕ್ಸಾನ್ ಇವಿಗೆ ಸೆಡ್ಡು ಹೊಡೆಯಲು ತಯಾರಿ

ಜನಪ್ರಿಯ ಮತ್ತು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಹೊಸ XUV400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಬಿಡುಗಡೆಗೊಳಿಸಿತು. ಇದೀಗ ಮಹೀಂದ್ರಾ ಕಂಪನಿಯು ತನ್ನ XUV400 ಎಲೆಕ್ಟ್ರಿಕ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ 400 ಯುನಿಟ್‌ಗಳನ್ನು ದೇಶಾದ್ಯಂತ ವಿತರಿಸಲಾಗಿದೆ.

ಈ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಾತ್ಮಕ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ.15.99 ಲಕ್ಷವಾಗಿದೆ. ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯು EC ಮತ್ತು EL ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. EC ರೂಪಾಂತರವು ಎರಡು ಚಾರ್ಜರ್‌ಗಳೊಂದಿಗೆ ಬರುತ್ತದೆ, ಇದು 3.3kW ಮತ್ತು 7.2kW. 3.3kW ಚಾರ್ಜಿಂಗ್ ಆಗಿದೆ. ಈ EC ರೂಪಾಂತರದ ಬೆಲೆಯು ರೂ.15.99 ಲಕ್ಷವಾಗಿದೆ.

ಮಹೀಂದ್ರಾ XUV400

ಇನ್ನು 7.2kW ಚಾರ್ಜರ್‌ನೊಂದಿಗೆ EC ರೂಪಾಂತರದ ಬೆಲೆಯು ರೂ.16.49 ಲಕ್ಷವಾಗಿದೆ. ಇದರ ಟಾಪ್-ಸ್ಪೆಕ್ EL ರೂಪಾಂತರದ ಬೆಲೆಯು ರೂ.18.99 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಚಿಕ್ಕ ಬ್ಯಾಟರಿ ಹೊಂದಿರುವ XUV400 ಬೆಲೆ ರೂ.15.99 ಲಕ್ಷ, ಆದರೆ ದೊಡ್ಡ ಬ್ಯಾಟರಿ ರೂಪಾಂತರದ ಬೆಲೆ ರೂ.18.99 ಲಕ್ಷವಾಗಿದೆ.

ಎರಡೂ ಮಾದರಿಗಳು ಒಂದೇ ರೀತಿಯ ಬೆಲೆಯನ್ನು ಹೊಂದಿವೆ. ಈ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿದೆ. EC ರೂಪಾಂತರದೊಂದಿಗೆ 34.5kWh ಮತ್ತು EL ರೂಪಾಂತರದೊಂದಿಗೆ 39.4kWh ಬ್ಯಾಟರಿ ಪ್ಯಾಕ್. ಬ್ಯಾಟರಿಗಳು ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು 150 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಹೀಂದ್ರಾ XUV400

ಇನ್ನು ಈ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯು 150 ಕಿ,ಮೀ ಟಾಪ್ ಸ್ಪೀಡ್ ಹೊಂದಿದೆ. ಇನ್ನು ಮೊದಲು ಕೇವಲ 8.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಮೂರು ಡ್ರೈವಿಂಗ್ ಮೋಡ್‌ಗಳನ್ನು ನೀಡುತ್ತದೆ. ಇದು ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್ ಆಗಿದೆ. ಈ ಡ್ರೈವಿಂಗ್ ಮೋಡ್‌ಗಳು ಸ್ಟೀರಿಂಗ್ ಮತ್ತು ಥ್ರೊಟಲ್ ಪ್ರತಿಕ್ರಿಯೆಯನ್ನು ಸರಿಹೊಂದಿಸುತ್ತವೆ ಮತ್ತು ಪುನರುತ್ಪಾದಕ ಬ್ರೇಕಿಂಗ್ ಮಟ್ಟವನ್ನು ಸಹ ಬದಲಾಯಿಸುತ್ತವೆ.

ಇನ್ನು 34.5kWh ಬ್ಯಾಟರಿ ಪ್ಯಾಕ್ 375 ಕಿ.ಮೀ ರೇಂಜ್ ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಮಹೀಂದ್ರಾ ಎಲೆಕ್ಟ್ರಿಕ್ ಎಸ್‍ಯುವಿಯ 39.4kWh ಬ್ಯಾಟರಿ ಸಿಂಗಲ್ ಚಾರ್ಜರ್‌ನಲ್ಲಿ 456 km ರೇಂಜ್ ಅನ್ನು ನೀಡುತ್ತದೆ. 50kWh DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು, ಬ್ಯಾಟರಿಯನ್ನು 50 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

ಮಹೀಂದ್ರಾ XUV400

ಕ್ರಮವಾಗಿ 6 ಗಂಟೆ 30 ನಿಮಿಷಗಳು ಮತ್ತು 13 ಗಂಟೆಗಳಲ್ಲಿ 7.2kW ಅಥವಾ 3.3kW AC ಚಾರ್ಜರ್ ಬಳಸಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೆಳಿಕೊಂಡಿದೆ, ಈ ಮಹೀಂದ್ರಾ XUV400 ಉದ್ದವಾಗಿದೆ ಮತ್ತು Nexon EV ಗಿಂತ ದೊಡ್ಡ ಆಯಾಮಗಳನ್ನು ಹೊಂದಿದೆ. ಈ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ 4,200 mm ಉದ್ದ, 1821 mm ಅಗಲ ಮತ್ತು 2600 mm ಎತ್ತರವನ್ನು ಹೊಂದಿದೆ.

ಇನ್ನು ಇದರೊಂದಿಗೆ 2600 mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 418-ಲೀಟರ್‌ಗಳವರೆಗೆ ವಿಸ್ತರಿಸಬಹುದು. ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಎರಡನೇ ತಲೆಮಾರಿನ ಥಾರ್‌ನ ರಿಯರ್-ವೀಲ್ ಡ್ರೈವ್ (RWD) ರೂಪಾಂತರವನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಇದರ ಪರಿಚಯಾತ್ಮಕ ಬೆಲೆಗಳು ರೂ. 9.99 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಈ ಮೇಲಿನ ಪರಿಚಯಾತ್ಮಕ ಬೆಲೆಯು ಮೊದಲ 10,000 ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ.

Article Published On: Friday, March 24, 2023, 8:30 [IST]
English summary
Mahindra xuv400 deliveries started details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+