ಯಾರು ಊಹಿಸಿರಲಿಲ್ಲ, ಮಹೀಂದ್ರಾ XUV700 ಎಸ್‍ಯುವಿಗೆ ಭಾರೀ ಡಿಮ್ಯಾಂಡ್

ಮಹೀಂದ್ರಾ ಕಂಪನಿಯ ಎಸ್‍ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅದರಲ್ಲೂ ಹೊಸದಾಗಿ ಬಿಡುಗಡೆಗೊಂಡ ಮಹಿಂದ್ರಾ XUV700 ಮಾದರಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಈ ನಡುವೆ ಮಹೀಂದ್ರಾ ಕಂಪನಿಯು 2023ರ ಸೆಪ್ಟೆಂಬರ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ.

ಮಹೀಂದ್ರಾ ಕಂಪನಿಯು ತನ್ನ ಮಹೀಂದ್ರಾ XUV700 (Mahindra XUV700) ಮಾದರಿಯ 8,555 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇವುಗಳಲ್ಲಿ, ಡೀಸೆಲ್ ರೂಪಾಂತರಗಳು 6,350 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಪೆಟ್ರೋಲ್ ರೂಪಾಂತರದ ಮಾರಾಟವು 2,205 ಯುನಿಟ್‌ಗಳಷ್ಟಿದೆ. ಇನ್ನು ಕಳೆದ ತಿಂಗಳು, ಮಹೀಂದ್ರಾ ಕಂಪನಿಯು ಈ XUV700 ಮೂರು-ಸಾಲಿನ ಎಸ್‍ಯುವಿಯ ಬೆಲೆಯನ್ನು 38,880 ರೂ.ವರೆಗೆ ಹೆಚ್ಚಿಸಿದೆ. ಪರಿಣಾಮವಾಗಿ, ಮಹೀಂದ್ರಾ XUV700 ಮಾದರಿಯ ಆರಂಭಿಕ ಬೆಲೆ ರೂ. 14.03 ಲಕ್ಷ (ಎಕ್ಸ್ ಶೋ ರೂಂ) ಆಗಿದೆ.

Mahindra XUV700

2021ರ ಆಗಸ್ಟ್ ತಿಂಗಳಲ್ಲಿ ಮಹೀಂದ್ರಾ ಕಂಪನಿ 'XUV700' ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಕಾರುಗಳನ್ನು ವಿತರಣೆ ಮಾಡಿ, ದೊಡ್ಡದೊಂದು ದಾಖಲೆ ಮಾಡಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಬಿಡುಗಡೆಯಾದ ಮೊದಲ 12 ತಿಂಗಳಲ್ಲಿಯೇ ಕಂಪನಿಯು 50,000 ಯುನಿಟ್ XUV700 ಎಸ್‌ಯುವಿಗಳನ್ನು ಡಿಲೆವರಿ ಮಾಡಿತ್ತು.

ಅಂತೂ ಒಂದು ಲಕ್ಷಕ್ಕೂ ಹೆಚ್ಚು ಕಾರುಗಳನ್ನು ವಿತರಣೆ ಮಾಡಿ, ಸಖತ್ ಜೋಶ್ ನಲ್ಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಡಿಲೆವರಿಯನ್ನು ವೇಗಗೊಳಿಸಲು ಹೆಚ್ಚಿನ XUV700 ಎಸ್‌ಯುವಿಗಳನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ. ಈ ಕಾರನ್ನು ಗ್ರಾಹಕರು, ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು ಒಂದಷ್ಟು ತಿಂಗಳು ಕಾಯಲೇಬೇಕು.

Mahindra XUV700

ಮಹೀಂದ್ರಾ XUV700 ಮಾದರಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಪ್ರಮುಖವಾಗಿ ಡೀಸೆಲ್ ಎಂಜಿನ್ ಚಾಲಿತ ರೂಪಾಂತರ ಜಿಪ್, ಜ್ಯಾಪ್, ಜೂಮ್ ಮತ್ತು ಕಸ್ಟಮ್ ಎಂಬ ಡ್ರೈವ್ ಮೋಡ್ ಹೊಂದಿದೆ. ಇದರ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 hp ಪವರ್, 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮತ್ತೊಂದು 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 155 hp ಪವರ್, 360 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇವೆರೆಡು ಎಂಜಿನ್ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ. ಸುರಕ್ಷತೆಯ ದೃಷ್ಟಿಯಿಂದ ಮಹೀಂದ್ರಾ XUV700 ಅತ್ಯುತ್ತಮ ಎಸ್‌ಯುವಿ ಎಂದು ಖ್ಯಾತಿಗಳಿಸಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.

Mahindra XUV700

ಈ ಕಾರು, 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮಹೀಂದ್ರಾ XUV700 ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಮುಖವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಅತ್ಯಾಧುನಿಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ. ಮಹೀಂದ್ರಾ XUV 700 ಎಸ್‌ಯುವಿಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ನೇರ ಪ್ರತಿಸ್ಪರ್ಧಿಯಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಪೂರೈಸಲು ಕಂಪನಿಯು ತಯಾರಿ ನಡೆಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Sunday, October 29, 2023, 17:33 [IST]
English summary
Mahindra xuv700 registers over 41 percent sales growth in september 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+