Mahindra cars: ಭಾರತದಲ್ಲಿ ಮಹೀಂದ್ರಾ ಸ್ಕಾರ್ಪಿಯೋಗೆ ಕಂಡು ಕೇಳರಿಯದ ಡಿಮ್ಯಾಂಡ್
ಭಾರತದಲ್ಲಿ ಮಹೀಂದ್ರಾ ಕಂಪನಿ ಕಾರುಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿವೆ. ಪ್ರಮುಖವಾಗಿ ಸ್ಕಾರ್ಪಿಯೋ ಹಾಗೂ XUV700 ಎಸ್‌ಯುವಿಗಳು ಸಖತ್ ಫೇಮಸ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಅದರಲ್ಲೂ ಇವುಗಳ ಕಾರ್ಯಕ್ಷಮತೆ, ವೈಶಿಷ್ಟ್ಯ ಹಾಗೂ ವಿನ್ಯಾಸ ಗ್ರಾಹಕರಿಗೆ ಇಷ್ಟವಾಗುವುದರಿಂದ ವಿತರಣೆ ಪಡೆಯಲು ತಿಂಗಳು ಗಟ್ಟಲೇ ಕಾಯುತ್ತಾರೆ.
ಮೊದಲಿಗೆ ಜನಪ್ರಿಯ ಸ್ಕಾರ್ಪಿಯೋ ಎನ್ ಎಸ್‌ಯುವಿ ಬಗ್ಗೆ ಮಾತನಾಡೋಣ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, Z2, Z4, Z6, Z8 ಹಾಗೂ Z8L ಎಂಬ 5 ರೂಪಾಂತರಗಳಲ್ಲಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. Z6, Z8 ರೂಪಾಂತರ 11-12 ತಿಂಗಳು, Z4 ವೇರಿಯೆಂಟ್ 17-18 ಹಾಗೂ Z8L ಎಂಟಿ ರೂಪಾಂತರ 6-7 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿರುವ ಈ ಎಸ್‌ಯುವಿ ಆರು ಏರ್ ಬ್ಯಾಗ್ ಹೊಂದಿದೆ.
ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಸುಮಾರು ಎರಡು ದಶಕದಿಂದ ದೊಡ್ಡಮಟ್ಟದಲ್ಲಿ ಬೇಡಿಕೆ ಹೊಂದಿದೆ. ಇದು S ಹಾಗೂ S11 ಎಂಬ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, 7 ತಿಂಗಳು ಕಾಯುವಿಕೆ ಬಳಿಕ ಗ್ರಾಹಕರಿಗೆ ವಿತರಣೆಯಾಗಲಿದೆ. ರೂ. 13 ಲಕ್ಷದಿಂದ 16.81 ಲಕ್ಷ ಬೆಲೆಯಲ್ಲಿ ಸಿಗಲಿದೆ. ಜೊತೆಗೆ ಅತ್ಯಾಧುನಿಕ ವೈಶಿಷ್ಠ್ಯಗಳನ್ನು ಪಡೆದಿದೆ.

ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಕೇವಲ ಒಂದು ಎಂಜಿನ್ ಆಯ್ಕೆಯಲ್ಲಿ ದೊರೆಯಲಿದೆ. ಇದರ 2.2-ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್, 132 bhp ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, ರೇರ್ ವೀಲ್ ಗೆ ಪವರ್ ವರ್ಗಾಯಿಸುತ್ತದೆ.
ಕಂಪನಿಯ ಮತ್ತೊಂದು ಜನಪ್ರಿಯ ಎಸ್‌ಯುವಿ, XUV 700 ಐದು ರೂಪಾಂತರಗಲ್ಲಿ ಸಿಗಲಿದೆ. ಅವುಗಳೆಂದರೆ, MX, AX3, AX5, AX7 ಹಾಗೂ AX7L. ಇವೆಲ್ಲವು ಗರಿಷ್ಠ ಕಾಯುವಿಕೆ ಅವಧಿ ಹೊಂದಿದ್ದು, ನೀವು ಇವತ್ತು ಬುಕಿಂಗ್ ಮಾಡಿದರೂ 8 ರಿಂದ 15 ತಿಂಗಳ ಬಳಿಕ ವಿತರಣೆಯಾಗಲಿದೆ. ಈ ಕಾರು, ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಇತ್ತೀಚೆಗೆ ಮಹೀಂದ್ರಾ, XUV 700 ಎಸ್‌ಯುವಿಯ ಒಂದು ಲಕ್ಷ ಯುನಿಟ್ ಮಾರಾಟ ಮಾಡಿ ದಾಖಲೆ ನಿರ್ಮಿಸಿತ್ತು. ಇದು, 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್, 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ ವಯಸ್ಕರ ರಕ್ಷಣೆಯಲ್ಲಿ 5 ಸ್ಟಾರ್ ಹಾಗೂ ಮಕ್ಕಳ ರಕ್ಷಣೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.
ಇನ್ನು, ಸ್ಕಾರ್ಪಿಯೋ ಹಾಗೂ XUV700 ಎಸ್‌ಯುವಿಗಳು ಹೊಂದಿರುವ ಬೇಡಿಕೆಯನ್ನು ಗಮನಿಸಿದಾಗ ಇವು ಗ್ರಾಹರಿಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಅದರಲ್ಲೂ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ವಾಹನಗಳೆಂದು ಖ್ಯಾತಿಗಳಿಸಿದ್ದು, ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿ, ಪ್ರತಿಸ್ಪರ್ಧಿ ಕಂಪನಿಗಳಿಗೆ ಸರಿಯಾಗಿಯೇ ಠಕ್ಕರ್ ನೀಡುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


Click it and Unblock the Notifications