Mahindra: ಮಹೀಂದ್ರಾದಿಂದ ಹಬ್ಬದ ವೇಳೆಗೆ ಗುಡ್ ನ್ಯೂಸ್!
ಭಾರತದಲ್ಲಿ ಮಹೀಂದ್ರಾ (Mahindra) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ಅದರ ಕಾರುಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುವುದರಿಂದ ಬಹುತೇಕ ಗ್ರಾಹಕರು, ಅವುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಕಂಪನಿಯು ಮುಂಬರುವ ಹಬ್ಬದ ಋತುವಿನಲ್ಲಿ 'XUV700' ಎಸ್‌ಯುವಿ ಖರೀದಿಸಲು ಬಯಸಿರುವವರಿಗೆ ಸಿಹಿಸುದ್ದಿ ನೀಡಲು ಹೊರಟಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
2021ರ ಆಗಸ್ಟ್ ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಅದ್ದೂರಿಯಾಗಿ ಬಿಡುಗಡೆ ಮಾಡಿದ 'XUV700' ಎಸ್‌ಯುವಿಗೆ ಪ್ರತೇಕ ಅಭಿಮಾನಿ ಬಳಗವಿದೆ. ಇತ್ತೀಚೆಗೆ, 1 ಲಕ್ಷ ಕಾರುಗಳನ್ನು ವಿತರಣೆ ಮಾಡಿ, ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿತ್ತು. ಸದ್ಯ, ದೊರೆಯುವ ಮಾಹಿತಿ, ಪ್ರಕಾರ, ಕಂಪನಿಯು XUV700 ಎಸ್‌ಯುವಿಯ AX5 L ಸೇರಿದಂತೆ ನಾಲ್ಕು ಹೊಸ ರೂಪಾಂತರಗಳನ್ನು ಹಬ್ಬದ ಸೀಸನ್ ವೇಳೆಗೆ ಪರಿಚಯಿಸುವ ಸಾಧ್ಯತೆಯಿದೆ.

ಆದರೆ, ಈ ಬಗ್ಗೆ ಮಹೀಂದ್ರಾದಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೊಸ ರೂಪಾಂತರಗಳು, ಈಗಿನ ಯುವ ಗ್ರಾಹಕರನ್ನು ಆಕರ್ಷಿಸುವ ಒಂದಷ್ಟು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನೀರಿಕ್ಷೆಯಿದೆ. ಪ್ರಮುಖವಾಗಿ ರೇರ್ ಭಾಗದಲ್ಲಿ ಎಲ್ಇಡಿ ಸ್ಟ್ರಿಪ್ ಪಡೆಯಬಹುದು. ಜೊತೆಗೆ ನೂತನ ವೇರಿಯೆಂಟ್ ಗಳ ಕ್ಯಾಬಿನ್ ಒಳಭಾಗದ ವೆಂಟಿಲೇಟೆಡ್ ಫ್ರಂಟ್ ಹಾಗೂ ರೇರ್ ಸೀಟ್ ಅನ್ನು ಹೊಂದಿರಬಹುದು.
ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ XUV700 ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಇದು ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಮಹೀಂದ್ರಾ XUV700 ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದ್ದು, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, LED ಹೆಡ್ ಲ್ಯಾಂಪ್ಸ್, 12 ಸ್ವೀಕರ್ ಗಳೊಂದಿಗೆ 3D ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ. ಜೊತೆಗೆ ಎವರೆಸ್ಟ್ ವೈಟ್, ಮಿಡ್ನೈಟ್ ಬ್ಲಾಕ್ ಸೇರಿದಂತೆ ಐದು ಬಣ್ಣದ ಆಯ್ಕೆಯಲ್ಲಿ ಸಿಗುತ್ತದೆ.
ಈ ಎಸ್‌ಯುವಿ, ಸುರಕ್ಷತೆಯ ದೃಷ್ಟಿಯಿಂದ ಅತ್ಯುನ್ನತವಾಗಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. XUV700 ಎಸ್‌ಯುವಿ, 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್ ಸೇರಿದಂತೆ ಹಲವು ಸೇಫ್ಟಿ ಫೀಚರ್ ಹೊಂದಿದೆ.
ಮಹೀಂದ್ರಾ XUV 700 ಎಸ್‌ಯುವಿಗೆ ದೇಶದಲ್ಲಿ ದೊಡ್ಡ ಕಂಪನಿ ಕಾರುಗಳೇ ಪ್ರತಿಸ್ಪರ್ಧಿಯಾಗಿದ್ದು, ಅದರಲ್ಲಿ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಪ್ರಮುಖವಾಗಿವೆ. ಇನ್ನು, ಕಂಪನಿಯು ತನ್ನ ಉತ್ಪಾದನಾ ಘಟಕದಲ್ಲಿ XUV 700 ತಯಾರಿಕೆಗೆ ವೇಗವನ್ನು ನೀಡಿರುವುದರಿಂದ ಕಾಯುವಿಕೆ ಅವಧಿ ಕಡಿಮೆಯಾಗಿದೆ. ಒಂದೊಮ್ಮೆ ನೂತನ ರೂಪಾಂತರಗಳು ಬಿಡುಗಡೆಯಾದರೆ ಗ್ರಾಹಕರನ್ನು ಹೇಗೆ ಆಕರ್ಷಿಸಲಿವೆ ಎಂಬುದನ್ನು ಕಾದುನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications