ಫುಲ್ ಡಿಮ್ಯಾಂಡ್: Mahindraದ ಈ ಕಾರಿನ ವಿತರಣೆಗೆ ಇಷ್ಟು ಸಮಯ ಬೇಕಂತೆ, ಇದೇ ಗುರು.. ಟಾಟಾ ಸಫಾರಿ ಪ್ರತಿಸ್ಪರ್ಧಿ

ಭಾರತದ ಮಹೀಂದ್ರಾ ಕಂಪನಿ ಕಾರುಗಳು ಸುರಕ್ಷತೆ, ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿವೆ. ಅದರಲ್ಲೂ ಕಂಪನಿಯ 'XUV700' ಎಸ್‌ಯುವಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಇದರಿಂದ ಈ ಕಾರನ್ನು ವಿತರಣೆ ಪಡೆಯಲು ತಿಂಗಳುಗಳೇ ಕಾಯಬೇಕು. ಯಾವ ರೂಪಾಂತರ ಎಷ್ಟು ಕಾಯುವಿಕೆ ಅವಧಿ ಹೊಂದಿದೆ ಎಂಬುದನ್ನು ಇಲ್ಲಿ ತಿಳಿಯೋಣ.

ಮಹೀಂದ್ರಾ (Mahindra) ಕಂಪನಿ, ತನ್ನ ಬಹುನೀರಿಕ್ಷಿತ XUV700' ಎಸ್‌ಯುವಿಯನ್ನು 2021ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅಂದಿನಿಂದಲೇ ದೊಡ್ಡ ಮಟ್ಟದ ಬೇಡಿಕೆ ಹೊಂದಿದೆ. ಇದರ ಎಂಟ್ರಿ ಲೆವೆಲ್ MX ಹಾಗೂ AX3 ಪೆಟ್ರೋಲ್ ರೂಪಾಂತರಗಳು 6 ತಿಂಗಳು, ಅದೇ ಡೀಸೆಲ್ ವೇರಿಯೆಂಟ್ 7 ತಿಂಗಳ ಬಳಿಕ ವಿತರಣೆಯಾಗಲಿದೆ. ಮಿಡ್ ಲೆವೆಲ್ AX5 ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತಕ್ಕೆ ಬರೋಬ್ಬರಿ 8 ತಿಂಗಳು ಕಾಯಬೇಕು.

ಫುಲ್ ಡಿಮ್ಯಾಂಡ್: Mahindraದ ಈ ಕಾರಿನ ವಿತರಣೆಗೆ ಇಷ್ಟು ಸಮಯ ಬೇಕಂತೆ, ಇದೇ ಗುರು.. ಟಾಟಾ ಸಫಾರಿ ಪ್ರತಿಸ್ಪರ್ಧಿ

ಮಹೀಂದ್ರಾ XUV700 ಎಸ್‌ಯುವಿ ಟಾಪ್ ಎಂಡ್ ರೂಪಾಂತರಗಳಾದ AX7 and AX7L ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದ್ದು, ಕನಿಷ್ಠವೆಂದರೂ 11 ತಿಂಗಳು ಕಾಯಬೇಕು. ಇತ್ತೀಚೆಗೆ ಕಂಪನಿಯು ಈ ಎಸ್‌ಯುವಿಯನ್ನು ಬರೋಬ್ಬರಿ ಒಂದು ಲಕ್ಷ ಯುನಿಟ್ ಮಾರಾಟ ಮಾಡಿ, ದಾಖಲೆ ನಿರ್ಮಾಣ ಮಾಡಿತ್ತು. ಕಳೆದ ತಿಂಗಳು ಇದರ ಮಾರಾಟದಲ್ಲಿ ಉತ್ತಮ ಪ್ರಗತಿಯನ್ನೇ ಸಾಧಿಸಿದ್ದು, ಮಹೀಂದ್ರಾ ಕಂಪನಿ, 4,757 ಯುನಿಟ್ ಸೇಲ್ ಮಾಡಿದೆ.

ಈ ಕಾರು ಎರಡು ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. ಅವುಗಳೆಂದರೇ, ಪೆಟ್ರೋಲ್ ಹಾಗೂ ಡೀಸೆಲ್. 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 hp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದೆ.

ಇನ್ನೊಂದು, 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 155 hp ಗರಿಷ್ಠ ಪವರ್ ಹಾಗೂ 360 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟಾಪ್ ಎಂಡ್ ವೇರಿಯೆಂಟ್ ಡೀಸೆಲ್ ಆವೃತ್ತಿ, 85 hp ಪವರ್, 420 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು ಕೂಡ 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಪಡೆದಿದೆ.

XUV700 ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಆಕರ್ಷಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟ್ಟಮ್), TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ XUV700 ಎಸ್‌ಯುವಿ, ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಕಾರೆಂದು ಹೆಸರು ಮಾಡಿದ್ದು, ಗ್ಲೋಬಲ್ NCAPಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.

ಒಟ್ಟಾರೆಯಾಗಿ ಮಹೀಂದ್ರಾ XUV700 ಕಾಯುವಿಕೆಯನ್ನು ಗಮನಿಸಿದಾಗ ಈ ಎಸ್‌ಯುವಿ ಎಷ್ಟರ ಮಟ್ಟಿಗೆ ಬೇಡಿಕೆ ಹೊಂದಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ 5 ಸ್ಟಾರ್ ರೇಟಿಂಗ್ ಪಡೆದಿರುವುದು, ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಹೊಂದಿರುವುದು ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗುತ್ತದೆ. ಈ ಕಾರಿಗೆ ಭಾರತದ ಮಾರುಕಟ್ಟೆಯಲ್ಲಿ ನೇರ ಪ್ರತಿಸ್ಪರ್ಧಿಯೆಂದರೆ ಟಾಟಾ ಸಫಾರಿ ಮಾತ್ರ.

Article Published On: Wednesday, May 17, 2023, 18:00 [IST]
English summary
Mahindra xuv700 waiting period suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+