Mahindra: ಬೃಹತ್ ದಾಖಲೆ ಮಾಡಿದ ಮಹೀಂದ್ರಾದ 5 ಸ್ಟಾರ್ ಸೇಫ್ಟಿ ಎಸ್‌ಯುವಿ: ಅಧಿಕೃತ ಘೋಷಣೆ

ಭಾರತದಲ್ಲಿ ಮಹೀಂದ್ರಾ (Mahindra) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಜನಪ್ರಿಯತೆ ಗಳಿಸಿದೆ. ಅದರಲ್ಲೂ 'XUV700' ಎಸ್‌ಯುವಿಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಸದ್ಯ, ಕಂಪನಿ ಇದೇ ಕಾರಿನ ಮಾರಾಟದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

2021ರ ಆಗಸ್ಟ್ ತಿಂಗಳಲ್ಲಿ ಮಹೀಂದ್ರಾ ಕಂಪನಿ 'XUV700' ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಕೇವಲ 20 ತಿಂಗಳಲ್ಲಿ ಬರೋಬ್ಬರಿ ಒಂದು ಲಕ್ಷ ಕಾರುಗಳನ್ನು ವಿತರಣೆ ಮಾಡಿ, ದೊಡ್ಡದೊಂದು ದಾಖಲೆ ಮಾಡಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಲಾಂಚ್ ಆಗಿ ಮೊದಲ 12 ತಿಂಗಳಲ್ಲಿಯೇ ಕಂಪನಿಯು 50,000 ಯುನಿಟ್ XUV700 ಎಸ್‌ಯುವಿಗಳನ್ನು ಡಿಲೆವರಿ ಮಾಡಿತ್ತು.

Mahindra: ಬೃಹತ್ ದಾಖಲೆ ಮಾಡಿದ ಮಹೀಂದ್ರಾದ 5 ಸ್ಟಾರ್ ಸೇಫ್ಟಿ ಎಸ್‌ಯುವಿ: ಅಧಿಕೃತ ಘೋಷಣೆ

ಅಂತೂ ಒಂದು ಲಕ್ಷ ಕಾರುಗಳನ್ನು ವಿತರಣೆ ಮಾಡಿ, ಸಖತ್ ಜೋಶ್ ನಲ್ಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಡಿಲೆವರಿಯನ್ನು ವೇಗಗೊಳಿಸಲು ಹೆಚ್ಚಿನ XUV700 ಎಸ್‌ಯುವಿಗಳನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ. ಈ ಕಾರನ್ನು ಗ್ರಾಹಕರು, ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು ಒಂದಷ್ಟು ತಿಂಗಳು ಕಾಯಲೇಬೇಕು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ XUV700 ಎಸ್‌ಯುವಿ, ರೂಪಾಂತರಗಳಿಗೆ ಅನುಗುಣವಾಗಿ ರೂ.14.01 - 26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಪ್ರಮುಖವಾಗಿ ಡೀಸೆಲ್ ಎಂಜಿನ್ ಚಾಲಿತ ರೂಪಾಂತರ ಜಿಪ್, ಜ್ಯಾಪ್, ಜೂಮ್ ಮತ್ತು ಕಸ್ಟಮ್ ಎಂಬ ಡ್ರೈವ್ ಮೋಡ್ ಹೊಂದಿದೆ.

ಇದರ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 hp ಪವರ್, 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 155 hp ಪವರ್, 360 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇವೆರೆಡು ಎಂಜಿನ್ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ.

ಸುರಕ್ಷತೆಯ ದೃಷ್ಟಿಯಿಂದ ಮಹೀಂದ್ರಾ XUV700 ಅತ್ಯುತ್ತಮ ಎಸ್‌ಯುವಿ ಎಂದು ಖ್ಯಾತಿಗಳಿಸಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಈ ಕಾರು, 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ XUV700 ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಅತ್ಯಾಧುನಿಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.

ಮಹೀಂದ್ರಾ XUV 700 ಎಸ್‌ಯುವಿಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ನೇರ ಪ್ರತಿಸ್ಪರ್ಧಿಯಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಪೂರೈಸಲು ಕಂಪನಿಯು ತಯಾರಿ ನಡೆಸಿದೆ. ಮುಂಬರುವ ದಿನಗಳಲ್ಲಿ ಭಾರತದ ಗ್ರಾಹಕರು, ಈ ಎಸ್‌ಯುವಿಗೆ ಇದೇ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Monday, July 3, 2023, 17:25 [IST]
English summary
Mahindra xvv700 suv one lakh deliveries milestone details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+