ಮಹೀಂದ್ರಾ ಥಾರ್‌ಗೆ ಮನಸೋತ ಲ್ಯಾಂಬೋರ್ಗಿನಿ ಮಾಲೀಕ: ಲ್ಯಾಂಬೋರ್ಗಿನಿಗೆ ಸಡ್ಡು ಹೊಡೆದ ಥಾರ್‌

ಭಾರತದ ಹೆಮ್ಮೆಯ ಕಾರು ತಯಾರಿಕಾ ಕಂಪನಿಯಾದ ಮಹೀಂದ್ರಾ ಬಿಡುಗಡೆಗೊಳಿಸಿದ ಬಹುತೇಕ ಎಲ್ಲಾ ವಾಹನಗಳನ್ನು ಭಾರತೀಯರು ಎರಡೂ ಕೈಗಳಿಂದ ಸ್ವೀಕರಿಸಿ ಅದರ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಅದರಲ್ಲಿ ಮಹೀಂದ್ರಾ ಸ್ಕಾರ್ಪಿಯೋ, ಎಕ್ಸ್‌ಯುವಿ 700, ಥಾರ್‌ ಪ್ರಮುಖವಾದವು. ಇದರಲ್ಲಿ ಥಾರ್‌ ವಾಹನವು ಇತ್ತೀಚೆಗೆ ಆಫ್‌ ರೋಡ್ ಪ್ರೀಯರ ಬಹು ನೆಚ್ಚಿನ ವಾಹನವಾಗಿ ಹೊರಹೊಮ್ಮಿದೆ.

ಇಲ್ಲೊಬ್ಬ ಥಾರ್ ಪ್ರೀಯ, ಮಹೀಂದ್ರಾ ಥಾರ್‌ನ (Mahindra Thar) ಡೆಲಿವರಿ ಪಡೆಯುವುದಕ್ಕಾಗಿ ಲ್ಯಾಂಬೋರ್ಗಿನಿಯಲ್ಲಿ ಹೋದ ಅಪರೂಪದ ಘಟನೆಯೊಂದು ನಡೆದಿದೆ. ಭಾರತದಲ್ಲಿ ಬಹುತೇಕ ವಾಹನ ಪ್ರೀಯರಿಗೂ ತಮ್ಮ ಎರಡನೇ ಕಾರಾಗಿ ಥಾರ್‌ ಅನ್ನು ಕೊಳ್ಳಬೇಕು ಎನ್ನುವ ಮನಸ್ಸಿರುತ್ತದೆ. ಆದರೆ ಮೇಲಿನ ಘಟನೆಯಿಂದ ಐಷಾರಾಮಿ ಕಾರಿನ ಮಾಲೀಕರು ಸಹ ಥಾರ್‌ ಅನ್ನು ತಮ್ಮ ಎರಡನೇ ಕಾರಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ.

Man Arrived In His Lamborghini

ನಿಮೇಶ್‌ ದಿವಾನ್ ಎಂಬಾತ ತನ್ನ ಸಾಮಾಜಿಕ ಜಾಲತಾಣದ ಅಕೌಂಟ್‌ ನಲ್ಲಿ ವಿಷಯವನ್ನು ಹಂಚಿಕೊಂಡಿದ್ದಾನೆ. ನಿಮೇಶ್‌ ದಿವಾನ್‌ ತನ್ನ ಲ್ಯಾಂಬೋರ್ಗಿನಿ ಹುರಾಕಾನ್‌ ಕಾರಿನಲ್ಲಿ ತನ್ನ ಎರಡನೇ ಕಾರ್‌ ಆದ ಮಹೀಂದ್ರಾ ಥಾರ್‌ನ ಡೆಲಿವರಿ ತೆಗೆದುಕೊಳ್ಳುವುದಕ್ಕಾಗಿ ಹೋಗಿರುವ ಅನುಭವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.

ಮಾಹಿತಿಗಳ ಪ್ರಕಾರ ಈತನ ಬಳಿ ಲ್ಯಾಂಬೊರ್ಗಿನಿ ಹುರಾಕಾನ್‌ ಇದ್ದು, ಈತ ತನ್ನ ಎರಡನೇ ಕಾರಾಗಿ, ದಿನಂಪ್ರತಿ ಬಳಕೆಗಾಗಿ ಮಹೀಂದ್ರಾ ಥಾರ್‌ ಅನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ನಿಮೇಶ್‌ ದಿವಾನ್‌‌ ಅವರು ಒಂದು ಸಂಧರ್ಭದಲ್ಲಿ, ಅಕಸ್ಮಾತ್‌ ಆಗಿ ಒಮ್ಮೆ ಕಾರನ್ನು ಓಡಿಸಿದ್ದಾನೆ.

Man Arrived In His Lamborghini

ಮಹೀಂದ್ರಾ ಥಾರ್‌ ಅನ್ನು ಓಡಿಸಿದ ಮೇಲೆ ನಿಮೇಶ್‌ ದಿವಾನ್‌ ಮಹೀಂದ್ರ ಥಾರ್‌ನ ಪರ್ಫಾಮೆನ್ಸ್‌ಗೆ ಫಿದಾ ಆಗಿದ್ದಾರೆ ಎಂದು ತಿಳಿದು ಬಂದಿದೆ. ಆಫ್‌ರೊಡ್‌ ಮತ್ತು ಆನ್‌ ರೋಡ್‌ ಎರಡೂ ಕಡೆ ಮಹೀಂದ್ರಾ ಥಾರ್‌ ನೀಡಿದ ಪರ್ಫಾಮೆನ್ಸ್‌ ಗೆ ನಿಮೇಶ್ ದಿವಾನ್‌ ಮಾರು ಹೋಗಿದ್ದಾರೆ.

ಇನ್ನು ನಿಮೇಶ್ ದಿವಾನ್‌ ಅವರ ಪತ್ನಿಗೆ ಮಹೀಂದ್ರಾ ಥಾರ್‌ ಅಷ್ಟೊಂದು ಇಷ್ಟ ಆಗಿಲ್ಲ ಎಂದು ತಿಳಿದು ಬಂದಿದೆ. ಅವರ ಬಳಿ ಇದ್ದ ಮೊದಲ ಕಾರ್ ರೇಂಜ್‌ ರೋವರ್‌ ವೋಗ್ ಮತ್ತು ಆಡಿ ಕ್ಯೂ7 ಆಗಿದ್ದರಿಂದ ಇದರ ಇಂಟಿರೀಯರ್‌ ಅವರ ಪತ್ನಿಯ ಮನಸ್ಸನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.

ತನ್ನ ಪತ್ನಿಗೆ ಇಷ್ಟವಿಲ್ಲದಿದ್ದರೂ ಮಹೀಂದ್ರಾ ಥಾರನ್ನು ನಿಮೇಶ್‌ ದಿವಾನ್‌ ಬುಕ್‌ ಮಾಡಿದ್ದರು. ಕೆಲ ದಿನಗಳ ನಂತರ ಅದನ್ನು ಕ್ಯಾನ್ಸಲ್‌ ಮೂರು ಡೋರ್‌ನ ಲ್ಯಾಂಡ್‌ ರೋವರ್‌ ಡಿಫೆಂಡರ್‌ ಅನ್ನು ಬುಕ್‌ ಮಾಡಲು ಪ್ರಯತ್ನಿಸಿದ್ದರು. ಆದರೆ ಡಿಫೆಂಡರ್‌ ಡೆಲಿವರಿ ಪಡೆಯಲು ತಿಂಗಳು ಕಾಯಬೇಕಿದ್ದರಿಂದ ಮತ್ತೆ ಮಹೀಂದ್ರಾ ಥಾರ್ ಅನ್ನು ಬುಕ್‌ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, July 15, 2023, 8:30 [IST]
English summary
Man arrived in his lamborghini to pick up his new mahindra thar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+