Marut Invicto: ಬಹಿರಂಗವಾಯ್ತು ಮಾರುತಿ ಸುಜುಕಿಯ ಹೊಸ MPV ಹೆಸರು... ದುಬಾರಿ ವಾಹನದ ಅಂತಿಮ ನೋಟ
ಎಲ್ಲರಿಗೂ ತಿಳಿದಿರುವಂತೆ ಮಾರುತಿ ಸುಜುಕಿ ದೇಶದಲ್ಲಿ ಅಗ್ಗದ ಬೆಲೆಗೆ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಜೊತೆಗೆ ಟೊಯೊಟಾ ಪಾಲುದಾರಿಕೆಯಲ್ಲಿ ಎಂಜಿನ್ ಸೇರಿದಂತೆ ಹಲವು ಯಾಂತ್ರಿಕ ವಿಶೇಷತೆಗಳನ್ನು ಹಂಚಿಕೊಳ್ಳುತ್ತದೆ. ಈ ಹಿಂದೆ ಮಾರುತಿ ಗ್ರಾಂಡ್ ವಿಟಾರಾ ಹಾಗೂ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಒಂದೇ ಪ್ಲಾರ್ಟ್ ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು.
ಇತ್ತಿಚೆಗೆ ಟೊಯೋಟಾದಿಂದ ಇನ್ನೋವಾ ಹೈಕ್ರಾಸ್ ಬಿಡುಗಡೆಯಾಗಿ ಸಖತ್ ಸದ್ದು ಮಾಡಿತ್ತು. ಇದೀಗ ಈ ಇನ್ನೋವಾ ಹೈಕ್ರಾಸ್ ಆಧರಿಸಿ ಮಾರುತಿಯಿಂದ ಹೊಸ ಕಾರು ಬರಲಿದೆ ಎಂಬ ಸುದ್ದಿಯು ಕಳೆದ ಹಲವು ದಿನಗಳಿಂದ ಭಾರೀ ಕುತೂಹಲ ಕೆರಳಿಸಿತ್ತು. ಕೊನೆಗೂ ಮಾರುತಿಯ ಈ ಹೊಸ ಕಾರಿನ ಸ್ಪೈ ಶಾಟ್‌ಗಳು ಕೂಡ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿವೆ.

ಮಾರುತಿ ಸುಜುಕಿ ಮುಂಬರುವ ತಿಂಗಳುಗಳಲ್ಲಿ ತಮ್ಮ ಕಂಪನಿಯ ಅತ್ಯಂತ ದುಬಾರಿ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಂದು ಇತ್ತೀಚೆಗೆ ಘೋಷಿಸಿತು. ಈಗ, ಈ ಮಾದರಿಯು ಟೊಯೋಟಾ ಇನ್ನೋವಾ ಹೈಕ್ರಾಸ್ ಆಧಾರಿತ ಪ್ರೀಮಿಯಂ MPV ಆಗಿದ್ದು, ಇದನ್ನು ಮಾರುತಿ ಸುಜುಕಿ ಎಂಗೇಜ್ ಎಂದು ಹೆಸರಿಡಲಾಗುವುದಾಗಿ ಊಹಿಸಲಾಗಿತ್ತು. ಆದರೆ ಬಲ್ಲ ಮೂಲಗಳಿಂದ ಈಗ ಆ ಹೆಸರು ಬದಲಾಗಿರುವುದು ತಿಳಿದುಬಂದಿದೆ.
ಭಾರತದ ಪ್ರಮುಖ ಆಟೋ ಸುದ್ದಿ ಸಂಸ್ಥೆಯು, ಮುಂಬರುವ MPV ಗೆ "ಇನ್ವಿಕ್ಟೋ" (marut invicto) ಎಂದು ಹೆಸರಿಸಲಿದೆ ಎಂದು ಬಹಿರಂಗಪಡಿಸಿದೆ. ಈ ಹೊಸ ಮಾರುತಿ ಪ್ರೀಮಿಯಂ MPV ಹೇಗರಬಹುದು ಎಂಬುದರ ಕುರಿತು ನಮಗಿರುವ ಮಾಹಿತಿಯಂತೆ ಇಲ್ಲಿ ತಿಳಿಸುತ್ತಿದ್ದೇವೆ. ಮೊದಲಿಗೆ ಇದು ಟೊಯೋಟಾ ಇನ್ನೋವಾ ಹೈಕ್ರಾಸ್ ಅನ್ನು ಆಧರಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಆದರೆ ತಿಳಿಯದ ವಿಚಾರಗಳನ್ನು ಇಲ್ಲಿ ನೋಡೋಣ, ಪ್ರಮುಖವಾಗಿ ಎಂಜಿನ್ ಕುರಿತು ಹೇಳುವುದಾದರೆ ಪವರ್‌ಟ್ರೇನ್ ಆಯ್ಕೆಗಳ ವಿಷಯದಲ್ಲಿ, ಈ ಮುಂಬರುವ ಮಾದರಿಯು ಇನ್ನೋವಾ ಹೈಕ್ರಾಸ್‌ನಂತೆಯೇ ಅದೇ ಆಯ್ಕೆಗಳನ್ನು ನೀಡಲಿದೆ. ಟೊಯೊಟಾ ಪ್ರಸ್ತುತ ಇನ್ನೋವಾ ಹೈಕ್ರಾಸ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ ನೀಡುತ್ತಿದೆ. ಅದರಲ್ಲಿ ಒಂದು 2.0-ಲೀಟರ್ 4-ಸಿಲಿಂಡರ್ NA ಎಂಜಿನ್ ಹಾಗೂ 2.0-ಲೀಟರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಆಗಿದೆ.
ವಿನ್ಯಾಸದ ವಿಷಯದಲ್ಲಿ ಹೊಸ ಮಾರುತಿ ಸುಜುಕಿ MPV ಎರಡು ಕ್ರೋಮ್ ಪಟ್ಟಿಗಳೊಂದಿಗಿನ LED ಹೆಡ್‌ಲ್ಯಾಂಪ್‌ಗಳ ಮಧ್ಯದಲ್ಲಿ ಸುಜುಕಿ ಮಾನಿಕರ್ ಅನ್ನು ಇರಿಸುತ್ತದೆ. ಎರಡು MPV ಗಳ ನಡುವಿನ ವ್ಯತ್ಯಾಸವನ್ನು ಮತ್ತಷ್ಟು ಹೆಚ್ಚಿಸಲು ಮುಂಭಾಗದ ಬಂಪರ್‌ಗೆ ಕೆಲವು ಸಣ್ಣ ವ್ಯತ್ಯಾಸಗಳನ್ನು ಮಾಡಬಹುದು ಎನ್ನಲಾಗಿದೆ. ಉಳಿದಂತೆ MPV ಗಳು ಸೈಡ್ ಪ್ರೊಫೈಲ್‌ಗಳಲ್ಲಿ ಅದೇ ಡಿಸೈನ್ ಹೊಂದಿರುತ್ತವೆ.
ವೈಶಿಷ್ಟ್ಯಗಳನ್ನು ನೊಡುವುದಾದರೆ ಮಾರುತಿ ಸುಜುಕಿ ತನ್ನ ಹೊಸ MPV ಗೆ ಹೊಸ ಅಲಾಯ್ ವೀಲ್‌ಗಳನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಇಂಟೀರಿಯರ್‌ನಲ್ಲಿ ಇನ್ನೋವಾ ಹೈಕ್ರಾಸ್‌ಗೆ ಹೋಲುವ ಸೀಟುಗಳು, ವೈರ್‌ಲೆಸ್ ಚಾರ್ಜರ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ನೀಡಬಹುದು.
ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಮಾರುತಿ ಸುಜುಕಿ ಇನ್ವಿಕ್ಟೋ ಬುಕಿಂಗ್ಸ್ ಅನ್ನು ಜೂನ್ 19 ರಂದು ತೆರೆಯಲಾಗುವುದು ಎಂದು ತಿಳಿದುಬಂದಿದೆ. ಹಾಗೆಯೇ ಈ ಹೊಸ ಎಂಪಿವಿಯನ್ನು ಜುಲೈ 5 ರಂದು ಬಿಡುಗಡೆ ಮಾಡಲು ಕಂಪನಿ ತಯಾರಿ ನಡೆಸುತ್ತಿದೆ. ಈ ಹೊಸ ಎಂಪಿವಿ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದರು ಆಶ್ಚರ್ಯವಿಲ್ಲ.
Image Courtesy: Overdrive
Link: https://www.overdrive.in/news-cars-auto/upcoming-innova-hycross-based-maruti-suzuki-mpv-to-be-called-invicto/


Click it and Unblock the Notifications