ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ

ಮಾರುತಿ ಸುಜುಕಿ ಅರೆನಾ ಡೀಲರ್‌ಶಿಪ್‌ಗಳಲ್ಲಿ ಮಾರಾಟವಾಗುವ ಕಾರುಗಳು ಈ ಬಾರಿ ಭರ್ಜರಿ ಡಿಸ್ಕೌಂಟ್‌ನೊಂದಿಗೆ ಬರುತ್ತಿವೆ. ಮಾರ್ಚ್ 2023 ರಲ್ಲಿ (ಇದೇ ತಿಂಗಳಲ್ಲಿ) ಒಟ್ಟು ರೂ. 59,000 ವರೆಗಿನ ರಿಯಾಯಿತಿಯೊಂದಿಗೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಹಾಗಾದರೆ ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿ ಇದೆ ಎಂಬುದನ್ನು ಈ ಕೆಳಗೆ ನೋಡೋಣ.

ಮಾರುತಿ ಸುಜುಕಿ ಬ್ರೆಝಾ ಕಾಂಪ್ಯಾಕ್ಟ್ SUV ಅನ್ನು ಕಳೆದ ವರ್ಷವಷ್ಟೇ ಪರಿಚಯಿಸಲಾದ ಕಾರಣ ಹೊಸ ಪೀಳಿಗೆಯ ಬ್ರೆಝಾ ಕಾಂಪ್ಯಾಕ್ಟ್ SUV ಅನ್ನು ಹೊರತುಪಡಿಸಿ ತನ್ನ ಅರೆನಾ ಕೊಡುಗೆಗಳಾದ್ಯಂತ ಉತ್ತಮ ರಿಯಾಯಿತಿ ನೀಡುತ್ತಿದೆ. ಪ್ರವೇಶ ಮಟ್ಟದ ಮಾರುತಿ ಸುಜುಕಿ ಆಲ್ಟೊ K10 ಅನ್ನು ಆಗಸ್ಟ್ 2022 ರಲ್ಲಿ ಪರಿಚಯಿಸಲಾಗಿದ್ದು, ಆಲ್ಟೋ K10 ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದೀಗ ಮಾರ್ಚ್‌ ತಿಂಗಳ ಆಕರ್ಷಕ ರಿಯಾಯಿತಿಗಳೊಂದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ

ಇದು ಗ್ರಾಹಕ ಕೊಡುಗೆಯೊಂದಿಗೆ ರೂ. 30,000 ವರೆಗೆ ಬರುತ್ತದೆ. ವಿನಿಮಯ ಬೋನಸ್ ರೂ. 15,000 ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 4,000 - ಒಟ್ಟು ರೂ. 49,000 ವರೆಗಿನ ಭರ್ಜರಿ ಆಫರ್ ನೀಡಲಾಗುತ್ತಿದೆ. ಹಾಗೆಯೇ ಮಾರುತಿ ಸುಜುಕಿ ಆಲ್ಟೊ 800 ಮೇಲೆ ಗ್ರಾಹಕ ಕೊಡುಗೆಯೊಂದಿಗೆ ರೂ. 20,000, ವಿನಿಮಯ ಬೋನಸ್ ರೂ. 15,000 ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 3,100 - ಹೀಗೆ ರೂ. 38,100 ವರೆಗೆ ಉಳಿತಾಯ ಮಾಡಬಹುದು.

ಇತ್ತೀಚಿನ ಮಾರುತಿ ಸುಜುಕಿ ಸೆಲೆರಿಯೊ 2021 ರ ಕೊನೆಯಲ್ಲಿ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಈ ಮಾದರಿ ಮೇಲೆ ಒಟ್ಟು ರೂ. 44,000 ವರೆಗಿನ ರಿಯಾಯಿತಿ ನೀಡಲಾಗುತ್ತಿದೆ. ರೂ. 25 ಸಾವಿರ ನಗದು ರಿಯಾಯಿತಿ, ರೂ. 15 ಸಾವಿರ ವಿನಿಮಯ ಬೋನಸ್‌ ಮತ್ತು ರೂ. 4 ಸಾವಿರ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ. ಇನ್ನು ಎಸ್-ಪ್ರೆಸ್ಸೊ ಮಾದರಿಯ ಮೇಲೆ ಗ್ರಾಹಕ ಕೊಡುಗೆಯಾಗಿ ರೂ. 30,000, ವಿನಿಮಯ ಬೋನಸ್ ರೂ. 15,000 ಮತ್ತು ಕಾರ್ಪೊರೇಟ್ ರಿಯಾಯಿತಿಯಲ್ಲಿ ರೂ. 4,000 ಉಳಿಸಬಹುದು.

ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ

ಮಾರುತಿ ಸುಜುಕಿ ವ್ಯಾಗನ್ಆರ್, ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ರೂ. 59,000 ವರೆಗಿನ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತದೆ. ರೂ. 40 ಸಾವಿರ ನಗದು ರಿಯಾಯಿತಿ, ರೂ. 15 ಸಾವಿರ ವಿನಿಮಯ ಬೋನಸ್‌ ಮತ್ತು ರೂ. 4 ಸಾವಿರ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ. ಸ್ವಿಫ್ಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮೇಲೆ ಸೆಲೆರಿಯೊಗೆ ನೀಡಲಾದ ಅದೇ ರಿಯಾಯಿತಿಗಳೊಂದಿಗೆ ಒಟ್ಟು ರೂ. 49,100ವರೆಗಿನ ಆಫರ್‌ನೊಂದಿಗೆ ಬರುತ್ತದೆ.

ಡಿಜೈರ್ ಅನ್ನು ರೂ. 10,000 ವರೆಗಿನ ವಿನಿಮಯ ಬೋನಸ್‌ನೊಂದಿಗೆ ಮಾತ್ರ ಖರೀದಿಸಬಹುದು. ಡಿಜೈರ್‌ಗ ನಗದು ಇಲ್ಲ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಲಭ್ಯವಿಲ್ಲ. ಉಳಿದಂತೆ ಕೊನೆಯದಾಗಿ Eeco ಕಾರ್ಗೋವನ್ನು ರೂ. 15,000 ವರೆಗಿನ ಗ್ರಾಹಕ ಕೊಡುಗೆಯೊಂದಿಗೆ ಹೊಂದಬಹುದು. ವಿನಿಮಯ ಬೋನಸ್ ರೂ. 10,000 ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 4,000 ವರೆಗೆ ನೀಡಲಾಗುತ್ತಿದೆ. ಮೇಲೆ ತಿಳಿಸಿದ ರಿಯಾಯಿತಿಗಳು ಲಭ್ಯತೆಗೆ ಒಳಪಟ್ಟಿರುತ್ತವೆ ಮತ್ತು ವೇರಿಯಂಟ್ ಹಂತಗಳನ್ನು ಆಧರಿಸಿವೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ

ಬ್ರೆಝಾಗೆ ನಂ.1 ಸ್ಥಾನ:
ಟಾಟಾ ನೆಕ್ಸಾನ್ ಹಲವು ತಿಂಗಳುಗಳಿಂದ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ನಂ.1 SUV ಆಗಿ ಗುರ್ತಿಸಿಕೊಂಡಿದೆ. ಆದರೆ ಫೆಬ್ರವರಿ 2023 ರಲ್ಲಿ ಇದು ಮಾರುತಿ ಬ್ರೆಜ್ಜಾಗೆ ಅಗ್ರ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಟಾಟಾ ಮೋಟಾರ್ಸ್‌ನ ನೆಕ್ಸಾನ್ ಕಳೆದ ವರ್ಷ ಇದೇ ಫೆಬ್ರವರಿಯಲ್ಲಿ ಮಾರಾಟವಾದ ಅಂಕಿ ಅಂಶಗಳಿಗೆ ಹೋಲಿಸಿಕೊಂಡರೆ ಉತ್ತಮ ಬೆಳವಣಿಗೆ ಸಾಧಿಸಿದೆಯಾದರೂ ಮಾರುತಿ ಬ್ರೆಜ್ಜಾ ಇದಕ್ಕಿಂತಲೂ ಹೆಚ್ಚು ಮಾರಾಟ ಕಂಡಿದೆ.

ಮಾರುತಿ ಬ್ರೆಝಾ ಫೆಬ್ರವರಿ 2023 ರಲ್ಲಿ 15,787 ಯುನಿಟ್‌ಗಳ ಮಾರಾಟದೊಂದಿಗೆ ವಾರ್ಷಿಕ ಮತ್ತು ತಿಂಗಳ ಬೆಳವಣಿಗೆಯನ್ನು ಸಾಧಿಸಿದೆ. ಇದು ಶೇ70.56 ರಷ್ಟು ವಾರ್ಷಿಕ ಮತ್ತು ಶೇ9.94 ರಷ್ಟು ತಿಂಗಳ ಮಾರಾಟ ಬೆಳವಣಿಗೆ ಸಾಧಿಸಿದೆ. ಫೆಬ್ರವರಿ 2022 ಮತ್ತು ಜನವರಿ 2023 ರಲ್ಲಿ ಕ್ರಮವಾಗಿ 9,256 ಯುನಿಟ್‌ಗಳು ಮತ್ತು 14,359 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಬ್ರೆಝಾ ಟಾಟಾ ನೆಕ್ಸಾನ್ ಅನ್ನು ಹಿಂದಿಕ್ಕಿ ನಂ.1 ಎಸ್‌ಯುವಿ ಸ್ಥಾನಕ್ಕೆ ಮರಳಿರುವುದು ಇದೇ ಮೊದಲು ಎನ್ನಲಾಗಿದೆ.

Article Published On: Wednesday, March 8, 2023, 12:01 [IST]
English summary
Maruti announces huge offer on alto wagonr swift
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+