Maruti Baleno RS ನಲ್ಲಿ ದೊಡ್ಡ ದೋಷ ಪತ್ತೆ... ಕಂಪನಿಯಿಂದ 7,213 ಕಾರುಗಳ ರೀಕಾಲ್
ಬ್ರೇಕ್ ಪಾರ್ಟ್ ದೋಷವನ್ನು ಸರಿಪಡಿಸಲು ಮಾರುತಿ ಸುಜುಕಿ 7,213 ಬಲೆನೊ ಆರ್‌ಎಸ್ ಮಾದರಿಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಮಾಹಿತಿಯ ಪ್ರಕಾರ ಕಂಪನಿಯು ಬ್ರೇಕ್ ಪೆಡಲ್‌ನಲ್ಲಿ ದೋಷವನ್ನು ಗುರ್ತಿಸಿದ್ದು, ಕಂಪನಿ ತಿಳಿಸಿರುವ ಅವಧಿಯಲ್ಲಿ ನಿರ್ಮಾಣಗೊಂಡಿರುವ ಮಾದರಿಗಳನ್ನು ಹಿಂಪಡಿಯುವುದಾಗಿ ತಿಳಿಸಿದೆ. ಯಾವ ಅವಧಿಯ ಕಾರುಗಳನ್ನು ಹಿಂಪಡೆಯಲಿದೆ ಎಂಬುದನ್ನು ಇಲ್ಲಿ ನೋಡೋಣ.
"ಬ್ರೇಕ್ ಕಾರ್ಯಕ್ಕೆ ಸಹಾಯ ಮಾಡುವ ವ್ಯಾಕ್ಯೂಮ್ ಪಂಪ್‌ನಲ್ಲಿ ಸಂಭವನೀಯ ದೋಷವಿದೆ ಎಂದು ಶಂಕಿಸಲಾಗಿದೆ. ಅಪರೂಪದ ಸಂದರ್ಭದಲ್ಲಿ, ಈ ಸಮಸ್ಯೆ ಇರುವ ವಾಹನವು ಬ್ರೇಕ್ ಪೆಡಲ್ ಒತ್ತುವಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ" ಎಂದು ಕಂಪನಿ ಹೇಳಿದೆ. ಒಂದು ವೇಳೆ ಅನಿವಾರ್ಯ ಹಾಗೂ ಅತಿ ಮುಖ್ಯ ಸಂದರ್ಭಗಳಲ್ಲಿ ಬ್ರೇಕ್ ಒತ್ತುವಲ್ಲಿ ಸ್ವಲ್ಪ ತಡವಾದ್ರೂ ಅನಾಹುತವಾಗಬಹುದು. ಇದು ಗಂಭಿರವಾದ ದೋಷ ಆಗಿರುವುದರಿಂದ ಕಂಪನಿಯು ರೀಕಾಲ್ ಅನ್ನು ಘೋಷಿಸಿದೆ.

ಭಾರತದ ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಪ್ರಕಾರ ತಾನು ಉತ್ಪಾದನೆ ಮಾಡಿದ ಬರೋಬ್ಬರಿ 7,213 Baleno RS ವಾಹನಗಳಲ್ಲಿ ಈ ದೋಷವಿರಬಹುದು ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ 27, 2016 ಮತ್ತು ನವೆಂಬರ್ 01 2019 ರ ನಡುವೆ ತಯಾರಿಸಲಾದ 7,213 ಬಲೆನೊ ಆರ್‌ಎಸ್ ವಾಹನಗಳನ್ನು ಹಿಂಪಡೆಯಲು ಕಂಪನಿ ನಿರ್ಧರಿಸಿದ್ದು, ಪಂಪ್ ನಲ್ಲಿನ ಸಂಭವನೀಯ ದೋಷವನ್ನು ಮರುಸ್ಥಾಪನೆ ಮಾಡುವುದಾಗಿ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಮಾಲೀಕರು ಈ ಕುರಿತು ಹೆಚ್ಚಾಗಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬಲೆನೋ RS ಬ್ರೇಕ್ ಪೆಡಲ್‌ನಲ್ಲಿನ ದೋಷವು ಅದನ್ನು ಒತ್ತುವಲ್ಲಿ ತುಸು ಹೆಚ್ಚಿನ ಪ್ರಯತ್ನ ಮಾಡಬೇಕು ಅಷ್ಟೇ, ಆದರೆ ಬ್ರೇಕ್ ಸಂಪೂರ್ಣ ದೋಷವಿದೆ ಎಂದು ಉಲ್ಲೇಖಿಸಿಲ್ಲ. ಈಗಾಗಲೇ ಇಂತಹ ದೋಷ ಹೊಂದಿರುವ ವಾಹನ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಡೀಲರ್ ವರ್ಕ್‌ಶಾಪ್‌ಗಳಿಂದ ದೋಷಪೂರಿತ ಭಾಗಗಳನ್ನು ಉಚಿತವಾಗಿ ಬದಲಾಯಿಸಿಕೊಳ್ಳಬಹುದು ಎಂದು ಕಂಪನಿಯು ಗ್ರಾಹಕರಿಗೆ ಭರವಸೆ ನೀಡಿದೆ.

ಮಾರುತಿ ಸುಜುಕಿ ಪ್ರಸ್ತುತ ದೇಶದಲ್ಲಿ ಅತ್ಯಧಿಕ ಕಾರು ಮಾರಾಟ ಹೊಂದಿರುವ ಬ್ರಾಂಡ್ ಆಗಿದೆ. ಮಾರುತಿ ಅವರ ಉತ್ಪಾದನಾ ಜಾಲವು ದೇಶದಲ್ಲೇ ಅತಿ ದೊಡ್ಡ ಜಾಲವೆಂದು ಖ್ಯಾತಿ ಪಡೆದಿದೆ. ಪ್ರತಿ ತಿಂಗಳು ಹೆಚ್ಚಿನ ಬುಕಿಂಗ್‌ಗಳ ಕಾರಣ ನಿರ್ಮಾಣ ವೇಗವು ಹೆಚ್ಚಾಗಿರುತ್ತದೆ. ಇದೇ ಕಾರಣದಿಂದಲೇ ಮಾರುತಿ ವಾಹನಗಳಲ್ಲಿ ದೋಷಗಳು ಆಗಾಗ್ಗೆ ಕಂಡುಬರುತ್ತಿರುತ್ತವೆ. ಕಳೆದ ಜನವರಿಯಲ್ಲಿ ಕೂಡ ಮಾರುತಿ ಸುಜುಕಿ ತನ್ನ ಹಲವು ವಿಭಾಗದ ಮಾದರಿಗಳನ್ನು ಹಿಂಪಡೆದಿದತ್ತು.
ಆಲ್ಟೊ ಕೆ10, ಎಸ್ ಪ್ರೆಸ್ಸೊ, ಇಕೊ, ಬ್ರೆಜ್ಜಾ, ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾದಲ್ಲಿ ಇರಿಸಲಾದ ದೋಷಯುಕ್ತ ಏರ್‌ಬ್ಯಾಗ್ ನಿಯಂತ್ರಕದಿಂದಾಗಿ, ಮಾರುತಿ ಡಿಸೆಂಬರ್ 8, 2022 ಮತ್ತು ಜನವರಿ 12, 2023 ರ ನಡುವೆ ತಯಾರಿಸಲಾದ 17,000 ಕ್ಕೂ ಹೆಚ್ಚು ವಾಹನಗಳನ್ನು ಹಿಂಪಡೆದಿತ್ತು. ಇದೀಗ ಬ್ರೇಕ್ ಕಾರ್ಯಕ್ಕೆ ಸಹಾಯ ಮಾಡುವ ವ್ಯಾಕ್ಯೂಮ್ ಪಂಪ್‌ನಲ್ಲಿ ಸಂಭವನೀಯ ದೋಷವಿರುವುದರಿಂದ ಮಾರುತಿ ಸುಜುಕಿ 7,213 ಬಲೆನೊ ಆರ್‌ಎಸ್ ಮಾದರಿಗಳನ್ನು ಹಿಂಪಡೆಯುತ್ತಿದೆ.

ಸದ್ಯ ಮಾರುತಿ ಕಂಪನಿಯು ಬಲೆನೋ ಆಧಾರಿತ ಮಾರು ಫ್ರಾಂಕ್ಸ್ ಹಾಗೂ ಮಾರುತಿ ಜಿಮ್ನಿ ಮಾದರಿಗಳಿಂದ ಅತ್ಯಧಿಕ ಬುಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದೆ. ಇವೆರಡು ಮಾದರಿಗಳನ್ನು ಇದೇ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಇದಕ್ಕೂ ಮುಂಚೆ ಮಾರುತಿ ಗ್ರಾಂಡ್ ವಿಟಾರಾ ಹೈಬ್ರಿಡ್ ಸಖತ್ ಸದ್ದು ಮಾಡಿತ್ತು. ಹೀಗೆ ಮಾರುತಿ ಕಂಪನಿಯು ಕಾಲ ಕಾಲಕ್ಕೆ ತನ್ನ ಹೊಸ ಮಾದರಿಗಳೊಂದಿಗೆ ಎದುರಾಳಿಗಳಿಗೆ ಪೈಪೋಟಿ ನೀಡುತ್ತಲೇ ಬರುತ್ತಿದೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications