Maruti Brezza ಬೆಲೆ ಏರಿಕೆ... ಪ್ರಸ್ತುತ ಬ್ರೆಝಾ ಎಸ್‌ಯುವಿ ಬೆಲೆಯ ವಿವರಗಳು
ದೇಶದ ಆಟೋ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯಂತೆಯೇ ಕಾರುಗಳ ಬಿಡಿಭಾಗಗಳ ಬೆಲೆ ಏರಿಕೆ ಕೂಡ ಸಾಮಾನ್ಯವಾಗಿಬಿಟ್ಟಿದೆ. ದೇಶದ ಬಹುತೇಕ ಕಂಪನಿಗಳು ಈಗ ತಮ್ಮ ಮಾದರಿಗಳ ಬೆಲೆ ಏರಿಕೆಯನ್ನು ಘೋಷಿಸಲು ಸಜ್ಜಾಗಿವೆ. ಸದ್ಯಕ್ಕೆ ಮಾರುತಿ ಸುಜುಕಿ ತನ್ನ ಎಲ್ಲಾ ಮಾದರಿಗಳು ತಮ್ಮ ಎಕ್ಸ್ ಶೋರೂಂ ಮೌಲ್ಯದ ಮೇಲೆ ಶೇ 0.8 ರಷ್ಟು ಏಕರೂಪದ ಹೆಚ್ಚಳವನ್ನು ಮಾಡಿದೆ.
ಕಳೆದ ತಿಂಗಳೇ ಮಾರುತಿ ಸುಜುಕಿ ಕಂಪನಿಯು ತನ್ನ ಮಾದರಿಗಳ ಬೆಲೆಯನ್ನು ಏಪ್ರಿಲ್ 1 ರಿಂದ ಹೆಚ್ಚಿಸುವುದಾಗಿ ಘೋಷಿಸಿತ್ತು. ಎಲ್ಲಾ ಮಾದರಿಗಳು ತಮ್ಮ ಎಕ್ಸ್ ಶೋರೂಂ ಮೌಲ್ಯದ ಮೇಲೆ ಶೇಕಡಾ 0.8 ರಷ್ಟು ಹೆಚ್ಚಳವನ್ನು ಪಡೆಯುತ್ತವೆ ಎಂದು ತಿಳಿಸಿತ್ತು. ಅದರಂತೆ ಶೇಕಡಾ 0.8 ರಷ್ಟು ಹೆಚ್ಚಳದೊಂದಿಗೆ ಕಂಪನಿಯ ಪ್ರಮುಖ ಮಾದರಿಯಾದ ಮಾರುತಿ ಸುಜುಕಿ ಬ್ರೆಝಾ ಈಗ ಎಷ್ಟು ದುಬಾರಿಯಾಗಿದೆ ಎಂಬುದನ್ನು ಈ ಕೆಳಗೆ ನೋಡೊಣ.

ಕಂಪನಿ ಹೇಳಿದ ಶೇ 0.8 ರಷ್ಟು ಬೆಲೆ ಏರಿಕೆಯನ್ನು ಪರಿಗಣಿಸಿ ನೋಡುವುದಾದರೆ ಮಾರುತಿ ಸುಜುಕಿ ಬ್ರೆಝಾ ಬರೋಬ್ಬರಿ 10,000 ಹೆಚ್ಚಳವಾಗಿದೆ. ಈ ಮೂಲಕ ಬ್ರೆಝಾ ಕಾಂಪ್ಯಾಕ್ಟ್ SUV ಬೆಲೆಗಳು ಈಗ ರೂ.8.28 ಲಕ್ಷದಿಂದ ಪ್ರಾರಂಭವಾಗುತ್ತವೆ. ಅಂದರೆ ಮೂಲ ರೂಪಾಂತರಕ್ಕಾಗಿ 8.28 ಲಕ್ಷ (ಎಕ್ಸ್ ಶೋ ರೂಂ) ದಿಂದ ಆರಂಭಗವಾಗಿ ಟಾಪ್-ಸ್ಪೆಕ್ ಡ್ಯುಯಲ್ ಟೋನ್ ರೂಪಾಂತರಕ್ಕಾಗಿ 14.03 ಲಕ್ಷ (ಎಕ್ಸ್ ಶೋ ರೂಂ)ವೆರೆಗೆ ಹೋಗುತ್ತದೆ.
ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿಯಲ್ಲೂ ಲಭ್ಯ:
ಮಾರುತಿ ಸುಜುಕಿ ಕಂಪನಿಯು ತನ್ನ S-CNG ಪೋರ್ಟ್ ಫೋಲಿಯೊವನ್ನು ವಿಸ್ತರಿಸಿದೆ. ಇದನ್ನು ಖರೀದಿಸಲು ಬಯಸುವ ಗ್ರಾಹಕರು ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೊಸ ಬ್ರೆಝಾ CNG ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9.14 ಲಕ್ಷವಾಗಿದೆ. ಈ 2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿ ಕಾರು 3 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ.

2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿಯು ಬರೊಬ್ಬರಿ 25.51 ಕಿ.ಮೀ ರೇಂಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಬ್ರೆಝಾ CNG ಎಸ್‍ಯುವಿ 1.5-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ VVT, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. CNG ಮೋಡ್‌ನಲ್ಲಿ 86.63 ಬಿಹೆಚ್‍ಪಿ ಪವರ್ ಮತ್ತು 86.63 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಪೆಟ್ರೋಲ್ ಮೋಡ್‌ನಲ್ಲಿ 99.2 ಬಿಹೆಚ್‍ಪಿ ಪವರ್ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಗೇರ್‌ಬಾಕ್ಸ್ ಆಯ್ಕೆಗಳ ವಿಷಯದಲ್ಲಿ, ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯನ್ನು ಪ್ರಸ್ತುತ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗಿದೆ. S-CNG ಬ್ಯಾಡ್ಜ್ ಸೇರಿಸುವುದನ್ನು ಹೊರತುಪಡಿಸಿ ಈ ಎಸ್‍ಯುವಿಯ ಹೊರಭಾಗವು ಸಾಮಾನ್ಯ ಬ್ರೆಝಾ ಮಾದರಿಯಂತೆಯೇ ಇರುತ್ತದೆ. ಮಾರುತಿ ಸುಜುಕಿಯಿಂದ 14ನೇ S-CNG ಮಾದರಿಯು ಸಿಎನ್‌ಜಿ-ನಿರ್ದಿಷ್ಟ ಫೀಚರ್ಸ್ ಗಳಾದ ಇಂಟಿಗ್ರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯೂಯಲ್ ಲಿಡ್ ಮತ್ತು ಮೀಸಲಾದ ಸಿಎನ್‌ಜಿ ಡ್ರೈವ್ ಮೋಡ್ ಗಳನ್ನು ಹೊಂದಿವೆ.

2023ರ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಎಸ್‌ಯುವಿಯಲ್ಲಿನ ಸುರಕ್ಷತಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), 360 ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ ಸೇರಿದಂತೆ ಹೆಚ್ಚಿನದನ್ನು ಒಳಗೊಂಡಿದೆ. ಮಾರುತಿ ಕಂಪನಿಯು ಮುಂದಿನ ದಿನಗಳಲ್ಲಿ ಒಂದು ಆಯ್ಕೆಯಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ನೀಡುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications