ಮೂರ್ತಿ ಚಿಕ್ಕದಾದ್ರು ಕೀರ್ತಿಯಲ್ಲಿ ದುಬಾರಿ ಕಾರುಗಳಿಗೆ ಸೆಡ್ಡು: ಮಾರುತಿ ಸೆಲೆರಿಯೊ ಹೊಸ ಮೈಲಿಗಲ್ಲು

ಮಾರುತಿ ಸುಜುಕಿ ಸೆಲೆರಿಯೊ 2014 ರಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೆ ಬರೋಬ್ಬರಿ 7 ಲಕ್ಷ ಯುನಿಟ್ ಕಾರುಗಳ ಮಾರಾಟದ ಮೈಲಿಗಲ್ಲನ್ನು ದಾಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್‌ ಈಗ ದುಬಾರಿ ಕಾರಿಗಳಿಗಿಂತ ಬೇಡಿಕೆ ಪಡೆದಿದೆ.

ಮಾರುತಿ ಸೆಲೆರಿಯೊ ಭಾರತದಲ್ಲಿ ಪ್ರಸ್ತುತ 5.36 ಲಕ್ಷ (ಎಕ್ಸ್ ಶೋ ರೂಂ)ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟದಲ್ಲಿದೆ. ಸೆಲೆರಿಯೊ ಕಾರು ಒಟ್ಟು ಏಳು ವೆರಿಯೆಂಟ್‌‌ಗಳೊಂದಿಗೆ ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

maruti-celerio-achieves-7-lakh-unit-milestone

ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು LXi, VXi, ZXi ಮತ್ತು ZXi ಪ್ಲಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ಹೊಂದಬಹುದು. ಇದು 1.0-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಮೋಟಾರ್ BS6 2.0-ಕಾಂಪ್ಲೈಂಟ್ ಆಗಿದೆ. 66bhp ಪವರ್ ಮತ್ತು 89Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗ್ರಾಹಕರು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸೆಲೆರಿಯೊದ CNG ಆವೃತ್ತಿಯನ್ನು ಸಹ ಆಯ್ಕೆ ಮಾಡಬಹುದು.

ವಿನ್ಯಾಸದ ವಿಷಯಕ್ಕೆ ಬಂದರೆ, ಮಾರುತಿ ಸುಜುಕಿ ಸೆಲೆರಿಯೊ ಆಕರ್ಷಕವಾದ ಗ್ರಿಲ್, ರಿಫ್ರೆಶ್‌ ಫ್ರಂಟ್ ಫಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರವಾದ ಹೆಡ್‌ಲ್ಯಾಂಪ್‌ಗಳು, ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದುವ ಸಿಗ್ನೇಚರ್ ಲೋಗೋ ಹೊಂದಿದೆ. ಈ ಹೊಸ ಸೆಲೆರಿಯೊ ಕಾರಿನ ಲೋ ಟ್ರಿಮ್‌ಗಳು ಸಾಧಾರಣ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದ್ದು, ಉನ್ನತ ರೂಪಾಂತರಗಳು ಬ್ಲ್ಯಾಕ್ ಬಣ್ಣದ 15-ಇಂಚಿನ ಅಲಾಯ್ ವ್ಹೀಲ್ ಜೋಡಣೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಇಂಟಿರಿಯರ್ ಅನ್ನು ಹೊಂದಿವೆ.

maruti-celerio-achieves-7-lakh-unit-milestone

ಈ ಕಾರಿನ ಇಂಟಿರಿಯರ್ ನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಕಾಲ್ ಹಾಗೂ ಮ್ಯೂಸಿಕ್ ಅಸಿಸ್ಟ್‌ ಹೊಂದಿರುವ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಸಿಂಗಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸರ್ಕ್ಯುಲರ್ ಡಿಜಿಟಲ್ ಸ್ಕ್ರೀನ್ ಅನ್ನು ಒಳಗೊಂಡಿದೆ. ಈ ಕಾರಿನ ಹೆಡ್‌ಲೈಟ್‌ ವಿನ್ಯಾಸವನ್ನು ಅಪ್ ಡೇಟ್ ಮಾಡಲಾಗಿದೆ.

ಇದರ ಜೊತೆಗೆ ಈ ಕಾರು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕ ಹೊಂದಿರುವ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನಂತಹ ಹಲವಾರು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳನ್ನು ಕೂಡ ಪಡೆದುಕೊಂಡಿದೆ. ಇದರ ಹೊರತಾಗಿ ಈ ಸೆಲೆರಿಯೊದಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಜೊತೆಗೆ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ ಸಹ ನೀಡಲಾಗಿದೆ.

maruti-celerio-achieves-7-lakh-unit-milestone

ಹೊಸ ಸೆಲೆರಿಯೊ ಕಾರಿನಲ್ಲಿ ಸುರಕ್ಷತಾ ಫೀಚರ್ ಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಹೊಸ ಸೆಲೆರಿಯೊ ಕಾರಿನಲ್ಲಿ ಡ್ರೈವರ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್-ಇಬಿಡಿ, ಇಂಜಿನ್ ಇಮೊಬಿಲೈಜರ್, ಹಿಂಭಾಗದ ಬಾಗಿಲುಗಳಲ್ಲಿ ಚೈಲ್ಡ್ ಪ್ರೂಫ್ ಲಾಕ್, ಸ್ಪೀಡ್ ಅಲರ್ಟ್ ಸಿಸ್ಟಂ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, October 22, 2023, 11:00 [IST]
English summary
Maruti celerio achieves 7 lakh unit milestone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+