ಲೀಟರ್‌ಗೆ 35 ಕಿ.ಮೀ ಮೈಲೇಜ್... ಬೈಕ್ ಬದಲು ಈ ಮಾರುತಿ ಹೈಬ್ರಿಡ್ ಕಾರನ್ನು ಖರೀದಿಸಿ!

ಮಾರುತಿ ಸುಜುಕಿ ಕಂಪನಿಯು ಸದ್ಯ ತನ್ನ ಮಾದರಿಗಳನ್ನು ಹೈಬ್ರಿಡ್ ಆಗಿ ಪರಿವರ್ತಿಸಲು ಹೊರಟಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಡಿಜೈರ್ ಅನ್ನು ಕೂಡ ಹೈಬ್ರಿಡ್ ಆಗಿ ತರಲು ಸಜ್ಜಾಗಿದೆ. ಇದು ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು, ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಮಾರುತಿ ತನ್ನ ಹೊಸ ತಲೆಮಾರಿನ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಭಾರತೀಯ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿರುವ ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ 2024 ರ ಮೊದಲಾರ್ಧದಲ್ಲಿ ಮಾರಾಟವಾಗಲಿದೆ. ಒಮ್ಮೆ ಇದು ಮಾರಾಟಕ್ಕೆ ಬಂದರೆ, ಇದು ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್‌ನಂತಹ ಕಾರುಗಳಿಗೆ ತೀವ್ರ ಸವಾಲನ್ನು ಒಡ್ಡುವ ನಿರೀಕ್ಷೆಯಿದೆ. ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಅನ್ನು ಪ್ರಬಲವಾದ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುವುದು.

ಲೀಟರ್‌ಗೆ 35 ಕಿ.ಮೀ ಮೈಲೇಜ್... ಬೈಕ್ ಬದಲು ಈ ಮಾರುತಿ ಹೈಬ್ರಿಡ್ ಕಾರನ್ನು ಖರೀದಿಸಿ!

ಮಾರುತಿ ಸುಜುಕಿಯಿಂದ ಈ ಹೈಬ್ರಿಡ್ ಎಂಜಿನ್ ಪಡೆದ ಮೊದಲ ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಎಂಬುದು ಇಲ್ಲಿ ಗಮನಾರ್ಹವಾಗಿದೆ. ಇದು ಹೊಸ ತಲೆಮಾರಿನ ಡಿಜೈರ್ ಅನ್ನು ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳಲ್ಲಿ ಒಂದಾಗಿಸಲಿದೆ. ಸದ್ಯ ಈ ಮಟ್ಟದ ಮೈಲೇಜ್ ಹೊಂದಿರುವ (ಎಲೆಕ್ಟ್ರಿಕ್ ಕಾರುಗಳನ್ನು ಹೊರತುಪಡಿಸಿ) ಕಾರುಗಳು ಮಾರಾಟದಲ್ಲಿ ಇಲ್ಲ. ಈ ಮೂಲಕ ಇಂಧನ ದಕ್ಷತೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಗೆ ಎದುರಾಳಿಯಿಲ್ಲದೇ ಡಿಜೈರ್ ತನ್ನ ಆಧಿಪತ್ಯವನ್ನು ಮುಂದುವರಿಸಲಿದೆ.

ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್‌ನಲ್ಲಿ 1.2 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಸಿಎನ್‌ಜಿ ಎಂಜಿನ್ ಒಟ್ಟು 3 ಎಂಜಿನ್ ಆಯ್ಕೆಗಳನ್ನು ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ವಿಭಾಗದಲ್ಲಿ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಹೊಂದಿರುವ ಮತ್ತು ಸಿಎನ್‌ಜಿ ಎಂಜಿನ್‌ಗಳು ಎಲ್ಲರಿಗೂ ತಿಳಿದಿರುವಂತೆ ಉತ್ತಮ ಮೈಲೇಜ್ ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.

ಲೀಟರ್‌ಗೆ 35 ಕಿ.ಮೀ ಮೈಲೇಜ್... ಬೈಕ್ ಬದಲು ಈ ಮಾರುತಿ ಹೈಬ್ರಿಡ್ ಕಾರನ್ನು ಖರೀದಿಸಿ!

ವರದಿಗಳ ಪ್ರಕಾರ, ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್‌ನ ಪ್ರಬಲ ಹೈಬ್ರಿಡ್ ಪೆಟ್ರೋಲ್ ಎಂಜಿನ್ 35 kmpl ಮೈಲೇಜ್ ನೀಡುತ್ತದೆ. ಈ ಮಾಹಿತಿಯು ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇದಲ್ಲದೆ, ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ವಿನ್ಯಾಸ ಬದಲಾವಣೆಗಳನ್ನು ಸಹ ಪಡೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿನ ಪೈಪೋಟಿ ಹಾಗೂ ಈ ವಿಭಾಗದಲ್ಲಿನ ಇತರ ಬ್ರಾಂಡ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಫೀಚರ್ಸ್ ಕೂಡ ಇರಲಿವೆ ಎಂದು ಹೇಳಲಾಗುತ್ತಿದೆ.

ಮಾಹಿತಿಯ ಪ್ರಕಾರ, ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಮುಂಭಾಗದಲ್ಲಿ ಹೊಸ ಬಂಪರ್, ದೊಡ್ಡದಾದ ಗ್ರಿಲ್ ರಚನೆ, ಪ್ರೊಜೆಕ್ಟರ್ ಎಲ್ಇಡಿ ಹೆಡ್‌ ಲೈಟ್‌ಗಳು ಮತ್ತು ಮೆಷಿನ್ ಕಟ್ ಅಲಾಯ್ ವೀಲ್‌ಗಳನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಹೊಸ ಬಣ್ಣ ಆಯ್ಕೆಗಳನ್ನು ಸಹ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಒಳಾಂಗಣಕ್ಕೆ ಸಂಬಂಧಿಸಿದಂತೆ, ಗ್ರಾಹಕರು ವಿಶಾಲವಾದ ರಿಯರ್ ಕ್ಯಾಬಿನ್, ಆರಮದಾಯಕ ಸೀಟ್‌ಗಳು ಹಾಗೂ ಡ್ರೈವರ್ ಕಂಫರ್ಟ್ ಅನ್ನು ನಿರೀಕ್ಷಿಸಬಹುದು.

ವೈಶಿಷ್ಟ್ಯಗಳ ವಿಷಯದಲ್ಲಿ, ಗ್ರಾಹಕರು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಹೆಡ್ಸ್ ಅಪ್ ಡಿಸ್ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪುಶ್ ಬಟನ್ ಸ್ಟಾರ್ಟ್ ಅನ್ನು ನಿರೀಕ್ಷಿಸಬಹುದು. ಇದನ್ನು ಹೊಸ ಸುಜುಕಿ ಕನೆಕ್ಟ್ ತಂತ್ರಜ್ಞಾನದೊಂದಿಗೆ ನೀಡುವ ಸಾಧ್ಯತೆಯಿದೆ. ಹೊಸ ತಲೆಮಾರಿನ ಡಿಜೈರ್ ಹೊರತಾಗಿ, ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಸಹ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದೆ. ಹೊಸ ತಲೆಮಾರಿನ ಡಿಜೈರ್‌ನ ಅದೇ ಎಂಜಿನ್ ಆಯ್ಕೆಗಳನ್ನು ಹೊಸ ತಲೆಮಾರಿನ ಸ್ವಿಫ್ಟ್‌ನಲ್ಲಿ ನೀಡಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Sunday, March 5, 2023, 14:00 [IST]
English summary
Maruti dzire hybrid is expected to go on sale in 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+