Maruti Engage: ಇನ್ನೋವಾ ಹೈಕ್ರಾಸ್ ಆಧರಿಸಿದ ಮಾರುತಿ ಕಾರು ಟೆಸ್ಟಿಂಗ್ ವೇಳೆ ಕ್ಯಾಮರಾಗೆ ಸೆರೆ
ಟೊಯೋಟಾ ಇನ್ನೋವಾ ಹೈಕ್ರಾಸ್ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಈಗ ಮಾರುತಿ ಸರದಿಯಾಗಿದ್ದು, ಹೈಕ್ರಾಸ್ ಆಧರಿಸಿದ ಮಾರುತಿ ಎಂಗೇಜ್ ಎಂಪಿವಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಕಂಪನಿಯು ಈ ಹೊಸ ಕಾರಿನ ಪರೀಕ್ಷಾ ಹಂತಗಳನ್ನು ವೇಗಗೊಳಿಸಿದ್ದು, ಇತ್ತೀಚೆಗೆ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.
ಮಾರುತಿ ಸುಜುಕಿ ತನ್ನ ಮುಂಬರುವ ಎಂಗೇಜ್ ಎಂಪಿವಿಯ ಅನಾವರಣ ದಿನಾಂಕವನ್ನು ಕೂಡ ಪ್ರಕಟಿಸಿದೆ. ಜುಲೈ 5 ರಂದು ಇದನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದೆ. ಆ ಬಳಿಕ ಅದರ ಬೆಲೆಯನ್ನು ಸಹ ಬಹಿರಂಗಪಡಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನವೇ ವಾಹನ ಹೇಗಿರಲಿದೆ ಎಂಬುದಕ್ಕೆ ಹೊಸ ಸ್ಪೈ ವಿಡಿಯೋ ಒಂದು ಸಣ್ಣ ನೋಟವನ್ನು ನೀಡಿದೆ.

ಉತ್ಪಾದನೆಗೆ ಸಿದ್ಧವಾಗಿರುವ ಹೊಸ Maruti Engage ಎಂಪಿವಿಯನ್ನು ಭಾರತೀಯ ರಸ್ತೆಗಳಲ್ಲಿ ರಾತ್ರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ನಮಗೆ ಕಂಡಿರುವಂತೆ ಇದು ದೈತ್ಯ ಆಕಾರವನ್ನು ಹೊಂದಿದ್ದು, ಆಕಾರದಲ್ಲಿ ಬಹುತೇಕ ಹೈಕ್ರಾಸ್ ಅನ್ನು ಹೋಲುವ ಸಾಧ್ಯತೆಯಿದೆ. ಮಾರುತಿ ಎಂಗೇಜ್‌ನ ಸ್ಪೈ ಚಿತ್ರಗಳನ್ನು ಆಧರಿಸಿ ಅದರ ಬಾಹ್ಯಾ ವಿನ್ಯಾಸ ಕುರಿತು ವಿವಿರವಾಗಿ ಈ ಕೆಳಗೆ ತಿಳಿಸಲಾಗಿದೆ.
ಮೊದಲೇ ಹೇಳಿದಂತೆ ಮಾರುತಿ ಹಾಗೂ ಟೊಯೋಟಾ ಪಾಲುದಾರಿಕೆಯಲ್ಲಿ ವಾಹನಗಳನ್ನು ಹಳಚಿಕೊಳ್ಳುತ್ತವೆ. ಅದರಂತೆ ಮಾರುತಿ ಎಂಗೇಜ್ ಟೊಯೊಟಾದ MPV ಕೊಡುಗೆಯಾದ ಇನ್ನೋವಾ ಹೈಕ್ರಾಸ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ. ನಮಗೆ ಲಭ್ಯವಿರುವ ಸ್ಪೈ ಚಿತ್ರಗಳಲ್ಲಿ ನೋಡಿದಂತೆ, ಮಾರುತಿ ಎಂಗೇಜ್ ಪರಿಷ್ಕೃತ ನೆಕ್ಸಾ ಸಿಗ್ನೇಚರ್ ಮೂರು-ಬ್ಲಾಕ್ ಎಲ್ಇಡಿ ಸರೌಂಡೆಡ್ ಟೈಲ್ ಲೈಟ್‌ಗಳನ್ನು ಹೊಂದಿದೆ.

ಮೂರು ಪಾಡ್ LED DRL ಗಳು, ಹೆಕ್ಸಾಗನಲ್ ಗ್ರಿಲ್, ಅಲಾಯ್ ವೀಲ್‌ಗಳು ಮತ್ತು ಹೊಸ ಹೆಡ್ ಲ್ಯಾಂಪ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಮುಂಭಾಗದ ಫೆಂಡರ್‌ಗಳು ಮತ್ತು ಹಿಂಭಾಗದ ಟೈಲ್‌ಗೇಟ್, ಡೋರ್ ಪ್ಯಾನೆಲ್‌ಗಳು ಬಹುತೇಕ ಇನ್ನೋವಾ ಹೈಕ್ರಾಸ್ ಅನ್ನು ಹೋಲುತ್ತಿರುವಂತೆ ಕಾಣುತ್ತಿವೆ. ಜೊತೆಗೆ ಇದೇ ಮಾಹಿತಿಯನ್ನು ಬಲ್ಲ ಮೂಲಗಳು ಕೂಡ ತಿಳಿಸಿವೆ.
ಎಂಜಿನ್ ವಿಶೇಷತಗಳು: ಎಂಜಿನ್ ಕುರಿತು ಹೇಳುವುದಾದರೆ ಇದು ಹೈಬ್ರಿಡ್ ಮೋಟರ್ ನೊಂದಿಗೆ ಜೋಡಿಯಾಗಿರುವ 2.0- ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಸ್ಟ್ಯಾಂಡರ್ಡ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಈ ಮೋಟಾರ್ ಅನ್ನು ಇ-ಸಿವಿಟಿ ಘಟಕಕ್ಕೆ ಜೋಡಿಸಲಾಗುತ್ತದೆ ಎಂದು ತಿಳದುಬಂದಿದೆ.

ಫಿಚರ್ಸ್‌ಗಳ ವಿಷಯದಲ್ಲಿ ಎಂಗೇಜ್ ಎಂಪಿವಿ ಇನ್ನೋವಾ ಹೈಕ್ರಾಸ್‌ನಲ್ಲಿ ಸಿಗುವ ಅದೇ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ದೊಡ್ಡ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರನ್ನಿಂಗ್ ಒಟ್ಟೋಮನ್ ಸೀಟ್ಗಳು, ಕ್ರೂಸ್ ಕಂಟ್ರೋಲ್ ಒಳಗೊಂಡಿರುತ್ತದೆ. ಹಾಗೆಯೇ 360-ಡಿಗ್ರಿ ಸರೌಂಡ್ ಕ್ಯಾಮೆರಾ ಮತ್ತು ADAS ಟೆಕ್ ಪನೋರಮಿಕ್ ಸನ್‌ರೂಫ್ ಸಹ ಪಡೆಯಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications