Maruti Fronx ಕುರಿತು ಗ್ರಾಹಕರು ಕೇಳಿದ ಪ್ರಮುಖ ಪ್ರಶ್ನೆಗಳಿಗೆ ನಮ್ಮ ಉತ್ತರಗಳಿವು!
ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇದೇ ವರ್ಷದ ಆರಂಭದಲ್ಲಿ ಮಾರುತಿ ಫ್ರಾಂಕ್ಸ್ ಅನ್ನು ಜಿಮ್ನಿಯೊಂದಿಗೆ ಅನಾವರಣಗೊಳಿಸಿತ್ತು. ಅಂದಿನಿಂದ ಗ್ರಾಹಕರಲ್ಲಿ ಮಾರುತಿ ಫ್ರಾಂಕ್ಸ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದರು. ಇದರಲ್ಲಿ ಅತಿಹೆಚ್ಚು ಕೇಳಲಾದ ಪ್ರಶ್ನೆಗಳನ್ನು ಆಯ್ಕೆ ಮಾಡಿ ಇಲ್ಲಿ ಉತ್ತರಿಸಲಾಗಿದೆ.
ಅನಾವರಣದ ಬಳಿಕ ಬುಕಿಂಗ್ಸ್ ಅನ್ನು ಅಂದೇ ಆರಂಭಿಸಿದ್ದ ಕಂಪನಿಯು ಇತ್ತೀಚೆಗಷ್ಟೇ ಕಾರನ್ನು ಬಿಡುಗಡೆ ಮಾಡಿತ್ತು. ಇದೀಗ ಯಾವ ವೇರಿಯೆಂಟ್ ಎಷ್ಟು ಬೆಲೆ ಹೊಂದಿದೆ ಎಂಬುದರ ಕುರಿತು ಹಲವರಿಗೆ ತಿಳಿದಿಲ್ಲದ ಕಾರಣ ಬೆಲೆ ಕುರಿತು ಹಲವರು ಕೇಳಿದ್ದರು. ಫ್ರಾಂಕ್ಸ್ ಬೆಲೆ ರೂ 7.46 ಲಕ್ಷದಿಂದ ಪ್ರಾರಂಭವಾಗಿ ರೂ. 13.13 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಹೋಗುತ್ತದೆ.

ಮಾರುತಿ ಫ್ರಾಂಕ್ಸ್ ವೇರಿಯಂಟ್-ವಾರು ಬೆಲೆಗಳನ್ನು ನೋಡುವುದಾದರೆ, ಸಿಗ್ಮಾ 1.2 MT - 7.46 ಲಕ್ಷ ರೂ., ಡೆಲ್ಟಾ 1.2 MT - 8.32 ಲಕ್ಷ ರೂ., ಡೆಲ್ಟಾ 1.2 AMT - 8.87 ಲಕ್ಷ ರೂ., ಡೆಲ್ಟಾ+ 1.2 MT - 8.72 ಲಕ್ಷ ರೂ., ಡೆಲ್ಟಾ+ 1.2 AMT - 9.27 ಲಕ್ಷ ರೂ. ಡೆಲ್ಟಾ+ 1.0 MT - 9.72 ಲಕ್ಷ ರೂ. ಇದೆ.
ಝೀಟಾ-ಆಲ್ಫಾ ವೇರಿಯೆಂಟ್‌ಗಳನ್ನು ನೋಡುವುದಾದರೆ, ಝೀಟಾ 1.0 MT-10.55 ಲಕ್ಷ ರೂ., ಝೀಟಾ 1.0 ಎಟಿ-12.05 ಲಕ್ಷ ರೂ.,ಆಲ್ಫಾ 1.0 MT-11.47 ಲಕ್ಷ ರೂ., ಆಲ್ಫಾ 1.0 ಎಟಿ-12.97 ಲಕ್ಷ ರೂ., ಆಲ್ಫಾ 1.0 MT ಡ್ಯುಯಲ್ ಟೋನ್-11.63 ಲಕ್ಷ ರೂ., ಆಲ್ಫಾ 1.0 ಎಟಿ ಡ್ಯುಯಲ್ ಟೋನ್ - 13.13 ಲಕ್ಷ ರೂ. ಇದೆ. (ಇವೆಲ್ಲವು ಎಕ್ಸ್ ಶೋ ರೂಂ ಬೆಲೆಗಳು)

ಮಾರುತಿ ಸುಜುಕಿ ಫ್ರಾಂಕ್ಸ್ ವೈಶಿಷ್ಟ್ಯಗಳು?:
ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಈ SUV ಸಬ್ 4 ಮೀಟರ್ ವಿಭಾಗದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತದೆ. ಅದರ ಟಾಪ್ ಎಂಡ್ ವೇರಿಯೆಂಟ್‌ಗಳಲ್ಲಿ ಎಲ್‌ಇಡಿ ಮಲ್ಟಿ-ರಿಫ್ಲೆಕ್ಟರ್ ಹೆಡ್‌ಲ್ಯಾಂಪ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, 16-ಇಂಚಿನ ಅಲಾಯ್ ವೀಲ್‌ಗಳು, ಎಲ್‌ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.
ಇಂಟೀರಿಯರ್‌ನಲ್ಲಿ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 9-ಇಂಚಿನ ಎಚ್‌ಡಿ ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅರ್ಕಾಮಿಸ್ ಸರೌಂಡ್, ಆಟೋ ಕ್ಲೈಮೆಟ್ ಕಂಟ್ರೋಲ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ನೊಂದಿಗೆ ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ವ್ಯೂ ಕ್ಯಾಮೆರಾದೊಂದಿಗೆ ಬರುತ್ತದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಯಾವುವು?:
ಫ್ರಾಂಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಇದರಲ್ಲಿ ಮೊದಲೆನಯದು 1.2 ಲೀಟರ್ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಪೆಟ್ರೋಲ್ ಎಂಜಿನ್ ಆಗಿದೆ. ಇದು 89.73 PS ಗರಿಷ್ಠ ಪವರ್ ಹಾಗೂ 113 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಎರಡನೆಯದು 1.0-ಲೀಟರ್ ಟರ್ಬೊ ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್ ಆಗಿದೆ. ಇದು 100.06 PS ಗರಿಷ್ಠ ಪವರ್ ಮತ್ತು 147.6 Nm ಗರಿಷ್ಠ ಟಾರ್ಕ್ ಅನ್ನು ಹೊರ ಹಾಕುತ್ತದೆ. 1.2 ಲೀಟರ್ ಘಟಕದೊಂದಿಗೆ ಟ್ರಾನ್ಸ್ಮಿಷನ್ ಆಯ್ಕೆಗಳು 5-ಸ್ಪೀಡ್ MT ಮತ್ತು 5-ಸ್ಪೀಡ್ AMT ಅನ್ನು ಒಳಗೊಂಡಿವೆ. 1.0-ಲೀಟರ್ ಎಂಜಿನ್ 5-ಸ್ಪೀಡ್ MT ಮತ್ತು 6-ಸ್ಪೀಡ್ AT ಆಯ್ಕೆಗಳನ್ನು ಪಡೆಯುತ್ತದೆ.
ಮೈಲೇಜ್ ಎಷ್ಟು, ಪ್ರತಿಸ್ಪರ್ಧಿಗಳು ಯಾರು?:
ಮಾರುತಿ ಸುಜುಕಿ ಹೇಳಿಕೆಯ ಪ್ರಕಾರ, ಫ್ರಾಂಕ್ಸ್ 1.0 MT ಗೆ 21.5kmpl, 1.0 AT ಗೆ 20.01kmpl, 1.2 MT ಗೆ 21.79kmpl ಹಾಗೂ 1.2 AMT ಗೆ 22.89kmpl ಎಂದು ಹೇಳಲಾಗಿದೆ. ಇನ್ನು ಮಾರುತಿ ಸುಜುಕಿ ಫ್ರಾಂಕ್ಸ್ ಪ್ರತಿ ಸ್ಪರ್ಧಿಗಳನ್ನು ನೋಡುವುದಾದರೆ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್ ಮಾದರಿಗಳು ಪ್ರತಿಸ್ಪರ್ಧಿಗಳಾಗಿವೆ.


Click it and Unblock the Notifications