Maruti Fronx: ಭರ್ಜರಿ ಮೈಲೇಜ್, ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಮಾರುತಿ ಕಾರಿನ ವಿಶೇಷತೆಗಳು

ಭಾರತದಲ್ಲಿ ಎಸ್‍ಯುವಿಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ, ಇದರಿಂದ ಜನಪ್ರಿಯ ಕಾರು ತಯಾರಕ ಕಂಪನಿಗಳು ಪೈಪೋಟಿಗೆ ಬಿದ್ದು ಎಸ್‍ಯುವಿಗಳನ್ನು ಪರಿಚಯಿಸುತ್ತಿದೆ. ಈ ನಡುವೆ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಬಹು ನಿರೀಕ್ಷಿತ ಫ್ರಾಂಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ ಅನ್ನು ಬಿಡುಗಡೆಗೊಳಿಸಿದೆ.

ಮಾರುತಿ ಸುಜುಕಿ ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿ ಆಕರ್ಷಕ ಬೆಲೆಯಲ್ಲಿ ಈ ಹೊಸ ಫ್ರಾಂಕ್ಸ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.7.46 ಲಕ್ಷವಾಗಿದೆ. ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ 5 ರೂಪಾಂತರಗಳಲ್ಲಿ ಲಭ್ಯವಿದೆ.

Maruti Suzuki Fronx

ಬೆಲೆಗಳು: ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಕೆ-ಸೀರಿಸ್ ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್ ಚಾಲಿತ ರೂಪಾಂತರಗಳ ಬೆಲೆಯು ರೂ, 7.46 ಲಕ್ಷ - ರೂ.9.27 ಲಕ್ಷದ ವ್ಯಾಪ್ತಿಯಲ್ಲಿ ಲಭ್ಯವಿದೆ. ಇನ್ನು 1.0 ಲೀಟರ್ ಟರ್ಬೊ ಬೂಸ್ಟರ್‌ಜೆಟ್ ಡಿಐ ರೂಪಾಂತರಗಳ ಬೆಲೆಗಳು ರೂ 9.72 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ 13.13 ಲಕ್ಷವರೆಗೆ ಇದೆ.

ಇನ್ನು ಡೆಲ್ಟಾ ಮತ್ತು ಡೆಲ್ಟಾ+ ರೂಪಾಂತರಗಳ ಬೆಲೆಯು ಬೆಲೆ ಕ್ರಮವಾಗಿ ರೂ.8.87 ಲಕ್ಷ ಮತ್ತು ರೂ.9.27 ಲಕ್ಷವಾಗಿದೆ, ಇನ್ನು 6-ಸ್ಪೀಡ್ ಆಟೋಮ್ಯಾಟಿಕ್ ಮಾಡೆಲ್‌ಗಳ ಬೆಲೆ 12.05 ಲಕ್ಷ ರೂ.ಗಳಿಂದ 13.13 ಲಕ್ಷವಾಗಿದೆ, ಈ ಹೊಸ ಎಸ್‍ಯುವಿಯು ಬೆಲೆಯು ಆಕರ್ಷಕವಾಗಿದೆ. ತುಸು ಕೈಗೆಟುಕುವ ಬೆಲೆ ಆಗಿರುವುದರಿಂದ ಈ ಹೊಸ ಎಸ್‍ಯುವಿ ಮಾದರಿಯ ಕ್ರಾಸ್ಒವರ್ ಹೆಚ್ಚಿನ ಗ್ರಾಹಕರ ಗಮನಸೆಳೆಯುತ್ತದೆ.

Maruti Suzuki Fronx

ಎಂಜಿನ್: ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0 ಲೀಟರ್ ಟರ್ಬೊ ಮತ್ತು 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ, ಇದರಲ್ಲಿ 1.2 K12C ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ 6,000rpm ನಲ್ಲಿ 88.5bhp ಮತ್ತು 4,400rpm ನಲ್ಲಿ 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗಿದೆ.

ಬಲೆನೊ ಆರ್‌ಎಸ್‌ನೊಂದಿಗೆ ಕೊನೆಯದಾಗಿ ಕಂಡ ಟರ್ಬೋಚಾರ್ಜ್ಡ್ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಹೆಚ್ಚು ಶಕ್ತಿಶಾಲಿ ಎಂಜಿನ್ ಆಗಿದೆ. ಫ್ರಾಂಕ್ಸ್‌ನಲ್ಲಿ, ಈ ಎಂಜಿನ್ 5,500rpm ನಲ್ಲಿ 98.7bhp ಮತ್ತು 2,000 ರಿಂದ 4,500rpm ವರೆಗೆ 147.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೂಸ್ಟರ್‌ಜೆಟ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಆಗಿ ನೀಡಲಾಗುತ್ತದೆ,

ಮೈಲೇಜ್: ಮಾರುತಿ ಫ್ರಾಂಕ್ಸ್ 1.2 ಲೀಟರ್ Dualjet-AMT ಗೇರ್‌ಬಾಕ್ಸ್ ಸಂಯೋಜನೆಯೊಂದಿಗೆ 22.89 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಇದರ 1.2 ಲೀಟರ್ ಪೆಟ್ರೋಲ್ ಜೊತೆಗೆ ಮ್ಯಾನ್ಯುವಲ್ ಆವೃತ್ತಿಯು 21.7 ಎಂಜಿನ್ ಆವೃತ್ತಿಯು 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 1.0 ಲೀಟರ್ ಬೂಸ್ಟರ್‌ಜೆಟ್ ರೂಪಾಂತರಗಳು ಮ್ಯಾನುವಲ್‌ನೊಂದಿಗೆ 21.50 ಕಿ.,ಮೀ ಮೈಲೇಜ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 20.01 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಫೀಚರ್ಸ್: ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ ರೂಪಾಂತರವು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ವೀಲ್ ಕವರ್‌ಗಳೊಂದಿಗೆ ಸ್ಟೀಲ್ ವೀಲ್‌ಗಳು, ಕೀಲೆಸ್ ಎಂಟ್ರಿ ಮತ್ತು ಗೋ, ಡ್ಯುಯಲ್-ಟೋನ್ ಇಂಟೀರಿಯರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫ್ಯಾಬ್ರಿಕ್ ಸೀಟ್ ಅಪ್ಹೋಲ್‌ಸ್ಟರಿ, ಸ್ಟೀರಿಂಗ್‌ಗಾಗಿ ಟಿಲ್ಟ್ ಹೊಂದಾಣಿಕೆ ಮತ್ತು 60:40 ಹಿಂಭಾಗದ ಫೀಚರ್ಸ್ ಗಳೊಂದಿಗೆ ಪ್ಯಾಕ್ ಮಾಡಲಾಗಿದೆ.

ಇನ್ನು ಸೀಟ್ ಸ್ಪ್ಲಿಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿಯರ್ ಡಿಫಾಗರ್ ಅನ್ನು ಹೊಂದಿದೆ. ಮಾರುತಿ ಫ್ರಾಂಕ್ಸ್ ಆಲ್ಫಾ ಟ್ರಿಮ್ 16-ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳ್ಯ್, ಡ್ಯುಯಲ್-ಟೋನ್ ಬಾಹ್ಯ ಬಣ್ಣಗಳು, 360 ಡಿಗ್ರಿ ಕ್ಯಾಮೆರಾ, HUD ಯುನಿಟ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ಸುತ್ತುವ ಸ್ಟೀರಿಂಗ್ ವೀಲ್ ಸೇರಿದಂತೆ ಕೆಲವು ವಿಶೇಷ ಫೀಚರ್ಸ್ ಗಳೊಂದಿಗೆ ಬರುತ್ತದೆ.

ಕಾಂಪ್ಯಾಕ್ಟ್ ಕ್ರಾಸ್‌ಒವರ್ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, OAT, ವಾಯ್ಸ್ ಅಸಿಸ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಸುಜುಕಿ ಕನೆಕ್ಟಿವಿಟಿ ಕಾರ್ ಫೀಚರ್ಸ್, ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, ರಿಯರ್ ಎಸಿ ವೆಂಟ್‌ಗಳು, 6-ಸ್ಪೀಕರ್ ಸೌಂಡ್ ಸಿಸ್ಟಮ್, ಬಣ್ಣದ MID ಅನ್ನು ಸಹ ನೀಡುತ್ತದೆ. ಇನ್ನು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ, ವೈರ್‌ಲೆಸ್ ಚಾರ್ಜರ್ ಮತ್ತು ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್ ಹೊಂದಿದೆ.

ಸುರಕ್ಷತಾ ಫೀಚರ್ಸ್: ಮಾರುತಿ ಸುಜುಕಿ ಫ್ರಾಂಕ್ಸ್‌ನ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, 3-ಪಾಯಿಂಟ್ ELR ಸೀಟ್‌ಬೆಲ್ಟ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರೋಲ್ ಓವರ್ ಮಿಟಿಗೇಷನ್ ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಸೇರಿವೆ. ಕಂಪನಿಯು ಮುಂಭಾಗದೊಂದಿಗೆ 'VILOX' ಆಕ್ಸೆಸರಿ ಪ್ಯಾಕೇಜ್ ಅನ್ನು ನೀಡುತ್ತಿದೆ.

ಇದರಲ್ಲಿ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್, ಸೈಡ್ ಸ್ಕಿಡ್ ಪ್ಲೇಟ್, ಮುಂಭಾಗ ಮತ್ತು ಹಿಂಭಾಗದ ಬಂಪರ್ ಪೇಂಟೆಡ್ ಗಾರ್ನಿಶ್, ರೆಡ್ ಇನ್ಸರ್ಟ್‌ನೊಂದಿಗೆ ಬಾಡಿ ಸೈಡ್ ಮೋಲ್ಡಿಂಗ್, ORVM ಕವರ್, ಕ್ರಾಸ್-ಕಂಟ್ರಿ ರೆಡ್ ಡ್ಯಾಶ್ ಸೇರಿವೆ. ಫಿನಿಶ್ ಸೀಟ್ ಕವರ್, ರೆಡ್ ಡ್ಯಾಶ್ ಡಿಸೈನರ್ ಮ್ಯಾಟ್ ಮತ್ತು ರಕ್ಷಣಾತ್ಮಕ ಡೋರ್ ಸಿಲ್ ಗಾರ್ಡ್ ಮತ್ತು ಇನ್ನಷ್ಟು ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

Article Published On: Monday, April 24, 2023, 18:40 [IST]
English summary
Maruti fronx variants features engine prices details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+