Maruti Fronx ಬೆಲೆಗೆ ತಕ್ಕ ಮಾದರಿಯೇ?: ಯಾರೂ ತಿಳಿಸಿದ ಮಾಹಿತಿ... ಖರೀದಿಗೂ ಮುನ್ನ ಇದನ್ನೊಮ್ಮೆ ನೋಡಿ

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಹೊಸ ಫ್ರಾಂಕ್ಸ್ ಅನ್ನು ಅನಾವರಣಗೊಳಿಸಿದ ಬಳಿಕ ದೇಶದಲ್ಲಿ ಬಹುಳಷ್ಟು ಬೇಡಿಕೆ ಸೃಷ್ಟಿಯಾಗಿತ್ತು. ಇದೀಗ ಫ್ರಾಂಕ್ಸ್ ಅನ್ನು ಬಿಡುಗಡೆಗೊಳಿಸಿ ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಆದರೆ ಈ ಮಾದರಿಯು ಬೆಲೆಗೆ ತಕ್ಕ ಮೌಲ್ಯವನ್ನು ಹೊಂದಿದೆಯೇ ಎಂಬುದನ್ನು ಇಲ್ಲಿ ನೋಡೋಣ.

ಇದೇ ವರ್ಷ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಫ್ರಾಂಕ್ಸ್ ಅನ್ನು ಅನಾವರಣಗೊಳಿಸಿ ಬುಕಿಂಗ್ಸ್ ಆರಂಭಿಸಿದ್ದ ಮಾರುತಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಪ್ರಸ್ತುತ ಡೀಲರ್‌ಶಿಪ್‌ಗಳಿಗೂ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿರುವ ಫ್ರಾಂಕ್ಸ್ ಬೆಲೆಗಳನ್ನು ಒಮ್ಮೆ ನೋಡೋಣ. ಹೊಸ ಫ್ರಾಂಕ್ಸ್ ಬೆಲೆ 7.46 ಲಕ್ಷ ರೂ. ನಿಂದ ಆರಂಭವಾಗಿ 13.13 ಲಕ್ಷ (ಎಕ್ಸ್ ಶೋ ರೂಂ)ವರೆಗೆ ಹೋಗುತ್ತದೆ. ಈ ಬೆಲೆಗಳನ್ನು ಒಪ್ಪಬಹುದೇ ಎಂಬುದನ್ನು ಅದರ ಸುರಕ್ಷತೆ ಹಾಗೂ ವೈಶಿಷ್ಟ್ಯಗಳ ಮೇಲೆ ಅವಲಂಭಿತವಾಗಿರುವುದರಿಂದ ಅವನ್ನೊಮ್ಮೆ ಪರಿಶೀಲಿಸೋಣ.

Maruti Fronx worth the price?: Check this before buying

ಹೊಸ ಮಾರುತಿ ಫ್ರಾಂಕ್ಸ್ 9.0 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕನೆಕ್ಟ್ದ್ ಕಾರ್ ಟೆಕ್ನಾಲಜಿ, ಅರ್ಕಾಮಿಸ್ ಸೌಂಡ್ ಸಿಸ್ಟಮ್, ಆಟೋ ಕ್ಲೈಮೇಟ್ ಕಂಟ್ರೋಲ್ ಟೈಪ್ ಸಿ ಚಾರ್ಜರ್ ನಂತಹ ಪ್ರಮುಖ ವೈಶಿಷ್ಟ್ಯಗಳ ಜೊತೆಗೆ ಬರುತ್ತದೆ. ಇನ್ನು ಸುರಕ್ಷತೆಯ ವಿಷಯಕ್ಕೆ ಬಂದರೆ ಇದು 6 ಏರ್‌ಬ್ಯಾಗ್ಸ್, 3 ಪಾಯಿಂಟ್ ಸೀಟ್‌ಬೆಲ್ಟ್ಸ್, ಹಿಲ್ ಹೋಲ್ಡ್ ಅಸಿಸ್ಟ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಸೇರಿದಂತೆ ವಿವಿಧ ಸುರಕ್ಷಿತ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಮಾರುತಿ ಫ್ರಾಂಕ್ಸ್ ಸಬ್-4 ಮೀ. ಮಾದರಿಯಾಗಿರುವುದರಿಂದ ಈ ಬೆಲೆ ಸಮ್ಮತವಾಗಿದೆಯಾದರೂ ಇದರಲ್ಲಿ ನೀಡಲಾದ ಎಂಜಿನ್ ಆಯ್ಕೆ ಕೂಡ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಂದನ್ನು ವಿವರವಾಗಿ ನೋಡೋಣ. ಮೊದಲಿಗೆ ಟಾಪ್ ಆಫ್ ಲೈನ್ ಫ್ರಾಂಕ್ಸ್ ಆಲ್ಫಾ 1.0 ಎಟಿ (ಡ್ಯುಯಲ್ ಟೋನ್) ಬೆಲೆ ರೂ. 13.13 ಲಕ್ಷ (ಎಕ್ಸ್ ಶೋ ರೂಂ)ವಿದೆ. ಎಲ್ಲರಿಗೂ ತಿಳಿದಿರುವಂತೆ ಮಾರುತಿ ಫ್ರಾಂಕ್ಸ್ ಬಲೆನೋ ಆಧಾರಿತ ಕ್ರಾಸ್‌ಓವರ್ ಆಗಿದೆ.

Maruti Fronx worth the price?: Check this before buying

ಹಾಗಾಗಿಯೇ ಬಹುತೇಕರು ಫ್ರಾಂಕ್ಸ್ ಅನ್ನು ಬಲೆನೋಗಿಂತ 25,000 ರಿಂದ 35,000 ರೂ. ವ್ಯತ್ಯಾಸದಲ್ಲಿ ಬೆಲೆಯನ್ನು ನಿರೀಕ್ಷಿಸಿದ್ದರು. ಆದರೆ ಇದು 85,000 ರೂ. ವ್ಯತ್ಯಾಸವನ್ನು ಹೊಂದಿದೆ. ಫ್ರಾಂಕ್ಸ್ (ಸಿಗ್ಮಾ 1.2 MT) ನ ಪ್ರವೇಶ ಮಟ್ಟದ ರೂಪಾಂತರವು ರೂ. 7.46 ಲಕ್ಷ (ಎಕ್ಸ್ ಶೋರೂಂ) ಆಗಿದ್ದರೆ, ಬಲೆನೊ (ಸಿಗ್ಮಾ 1.2 MT) ಮೂಲ ರೂಪಾಂತರವು ರೂ. 6.61 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.

ಮೈಲೇಜ್ ಬಗ್ಗೆ ಮಾತನಾನಾಡುವುದಾದರೆ, 1.0 ಲೀಟರ್, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 21.50 ಕಿ.ಮೀ ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ನಲ್ಲಿ 20.01 ಕಿ.ಮೀ ಮೈಲೇಜ್ ನೀಡಲಿದೆ. 1.2 ಲೀಟರ್ ಎಂಜಿನ್, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 21.79 ಕಿ.ಮೀ ಹಾಗೂ ಆಟೋಮೆಟಿಕ್ ಟ್ರಾನ್ಸ್ಮಿಷನ್ ನಲ್ಲಿ 22.89 ಕೀ.ಮೀ ಮೈಲೇಜ್ ಅನ್ನು ಹಿಂದಿರುಗಿಸುವುದಾಗಿ ಕಂಪನಿ ಹೇಳಿಕೊಂಡಿದೆ.

Maruti Fronx worth the price?: Check this before buying

ಆದರೂ ಖರೀದಿಸಬೇಕೆಂದರೆ ಡೆಲ್ಟಾ+ 1.2 MT ಅಥವಾ Delta+ 1.0 MT ಅನ್ನು ಖರೀದಿಸಬಹದು. ಎರಡು ರೂಪಾಂತರಗಳ ನಡುವೆ 1 ಲಕ್ಷ ರೂ. ಬೆಲೆ ವ್ಯತ್ಯಾಸವಿದೆ. ಫ್ರಾಂಕ್ಸ್‌ನ ಮಿಡ್-ಸ್ಪೆಕ್ ಡೆಲ್ಟಾ+ 1.2 MT ರೂಪಾಂತರವು ರೂ. 8.72 ಲಕ್ಷ (ಎಕ್ಸ್-ಶೋ ರೂಂ) ಮತ್ತು ಡೆಲ್ಟಾ + 1.0 MT ರೂಪಾಂತರವು ರೂ. 9.72 ಲಕ್ಷ (ಎಕ್ಸ್-ಶೋ ರೂಂ) ವಿದೆ. ಡೆಲ್ಟಾ+ 1.2 AMT ಸಹ ರೂ. 9.27 ಲಕ್ಷದಲ್ಲಿ (ಎಕ್ಸ್ ಶೋ ರೂಂ) ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, April 25, 2023, 14:15 [IST]
English summary
Maruti fronx worth the price check this before buying
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+