Maruti Grand Vitara: ಮಾರಾಟದಲ್ಲಿ ಸ್ಕಾರ್ಪಿಯೋ, ಸೆಲ್ಟೋಸ್ ಎಸ್‍ಯುವಿಗಳನ್ನು ಹಿಂದಿಕ್ಕಿದ ಮಾರುತಿ ಈ ಎಸ್‍ಯುವಿ
ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿಗಳಿಗೆ ಭಾರೀ ಬೇಡಿಕೆಯನ್ನು ಹೊಂದಿರುವುದರಿಂದ, ಎಸ್‍ಯುವಿಯು ವಿಭಾಗವು ಅತಿಯಾದ ಸ್ಪರ್ಧೆಯಿಂದ ಕೂಡಿದೆ. ಎಸ್‍ಯುವಿ ವಿಭಾಗದ ಮಿಡ್ ಸೈಜ್ ಎಸ್‍ಯುವಿಗಳ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ ಹಲವು ವರ್ಷಗಳಿಂದ ಪಾರುಪತ್ಯ ಸಾಧಿಸುತ್ತಿತ್ತು. ಈ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಹೆಚ್ಚು ಕಡಿಮೆ ಎರಡನೇ ಸ್ಥಾನವನ್ನೇ ಪಡೆದುಕೊಳ್ಳುತ್ತಿತ್ತು.
ಆದರೆ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಂಟ್ರಿ ಬಳಿಕ ಎಲ್ಲಾವೂ ಬದಲಾಗಿದೆ. 2023ರ ಮಾರ್ಚ್ ತಿಂಗಳ ಮಾರಾಟದಲ್ಲಿ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ, ಗ್ರ್ಯಾಂಡ್ ವಿಟಾರಾ ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆದಿದಿದೆ. ಕಳೆದ ತಿಂಗಳಿನಲ್ಲಿ, ಹುಂಡೈ ಕ್ರೆಟಾದ 14,026 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ 10,045 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಿಯಾ ಸೆಲ್ಟೋಸ್ ಮಾದರಿಯ 6,554 ಯುನಿಟ್‌ಗಳು ಮಾರಾಟವಾಗಿವೆ.

ಕಿಯಾ ಸೆಲ್ಟೋಸ್ ಎಸ್‍ಯುವಿ ಮತ್ತು ಹೊಸದಾಗಿ ಬಿಡುಗಡೆಗೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾದರಿಯ ಮಾರಾಟಕ್ಕೆ ಹೋಲಿಸಿದರೆ ದೊಡ್ಡ ಅಂತರವಿದೆ. ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ.
ಹೈರೈಡರ್‌ನಿಂದ ಗ್ರಾಂಡ್ ವಿಟಾರಾ ದೊಡ್ಡ ವ್ಯತ್ಯಾಸವೆಂದರೆ ಅದರ ಮುಂಭಾಗದ ವಿನ್ಯಾಸ. ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸುಜುಕಿ ಎಸ್-ಕ್ರಾಸ್ ಮಾದರಿಗೆ ಹೋಲುತ್ತಿದೆ. ಈ ಗ್ರ್ಯಾಂಡ್ ವಿಟಾರಾ ವಿಟಾರಾ ಎಸ್‍ಯುವಿಯನ್ನು ಹೊಸ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮೊದಲಿನಿಂದ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ.
ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ನೀಡಿದೆ. ಇನ್ನು ಈ ಎಸ್‍ಯುವಿಯ ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತದೆ. ಇನ್ನು ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.
ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ. ಈ ಗ್ರ್ಯಾಂಡ್ ವಿಟಾರಾ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಗಳೊಂದಿಗೆ ಪೈಪೋಟಿ ನೀಡುತ್ತದೆ,
ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ಎಸ್‍ಯುವಿಯನ್ನು ಟೊಯೊಟಾ ಕಂಪನಿಯೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಮಾರುತಿ ಸುಜುಕಿ ಕಂಪನಿಯು ಈ ಎಸ್‌ಯುವಿಯನ್ನು ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಫ್ತು ಮಾಡಲು ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಈ ಹೊಸ ಮಾರುತಿ ಎಸ್‍ಯುವಿಯು ಮಾರಾಟದಲ್ಲಿ ಭಾರೀ ವೇಗದಕ್ಕು ಮುನ್ನುಗುತ್ತಿದೆ.


Click it and Unblock the Notifications