Maruti Invicto MPV: ಬಿಡುಗಡೆ ಮುನ್ನವೇ ಲೀಕ್ ಆಯ್ತು ಇಂಟೀರಿಯರ್: ಹೈಕ್ರಾಸ್‌ಗೆ ಸೆಡ್ಡು?

ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ Maruti Invicto MPV ಅನ್ನು ಜುಲೈ 5 ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲು ಯೋಜಿಸಿದೆ. ಆದ್ರೆ ಬಿಡುಗಡೆಗೂ ಮುನ್ನ ಇಂಟೀರಿಯರ್ ಚಿತ್ರಗಳು ಲೀಕ್ ಆಗಿದ್ದು, ಗ್ರಾಹಕರಲ್ಲಿ ನಿರೀಕ್ಷೆಗಳು ಹೆಚ್ಚಾಗಿಬಿಟ್ಟಿವೆ. ಇದೀಗ ಲೀಕ್ ಆಗಿರುವ ಚಿತ್ರಗಳನ್ನು ಆಧರಿಸಿ ಇಂಟೀರಿಯರ್ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

ಎಲ್ಲರಿಗೂ ತಿಳಿದಿರುವಂತೆ ಈ ಮಾರುತಿ ಸುಜುಕಿ ಇನ್ವಿಕ್ಟೋ MPV ಟೊಯೋಟಾ ಹೈಕ್ರಾಸ್ ಅನ್ನು ಆಧರಿಸಿದೆ. ಅಂದರೆ ಈಗಾಗಲೇ ಈ ಎರಡೂ ಕಂಪನಿಗಳ ಸಹಭಾಗಿತ್ವದಲ್ಲಿ ಬಂದ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹಾಗೂ ಮಾರುತಿ ಗ್ರಾಂಡ್‌ ವಿಟಾರಾದಂತೆ ಈಗ ಮಾರುತಿ ಇನ್ವಿಕ್ಟೋ ಕೂಡ ಇನ್ನೋವಾ ಹೈಕ್ರಾಸ್ ಅನ್ನು ಹೋಲುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು.

maruti-invicto-mpv-interior-leaked-ahead-launch

ಆದ್ರೂ ಎರಡೂ ಕಂಪನಿಗಳು ತಮ್ಮದೇ ಆದ ಇಂಟೀರಿಯರ್ ನೀಡಬೇಕಾದ್ದರಿಂದ ಮಾರುತಿ ಇನ್ವಿಕ್ಟೋವನ್ನು ಇನ್ನೋವಾ ಹೈಕ್ರಾಸ್‌ಗಿಂತ ಭೀನ್ನವಾಗಿ ಸಜ್ಜುಗೊಳಿಸಿದೆ. ವಿಷಯಕ್ಕೆ ಬಂದರೆ ಇತ್ತೀಚೆಗಷ್ಟೇ ಮಾರುತಿ ಇನ್ವಿಕ್ಟೋ ಕಾರು ಡೀಲರ್‌ಶಿಪ್‌ ಒಂದರ ಬಳಿ ಕಾಣಿಸಿಕೊಂಡಿದ್ದ ಚಿತ್ರಗಳು ವೈರಲ್ ಆಗಿದ್ದವು. ಈಗ ಇಂಟೀರಿಯರ್ ಚಿತ್ರಗಳು ಕೂಡ ಹೊರಬಂದಿವೆ.

Maruti Invicto MPV ಸಂಪೂರ್ಣ ಬ್ಲಾಕ್ ಇಂಟೀರಿಯರ್ ಒಳಗೊಂಡಿರುವುದನ್ನು ಸೋರಿಕೆಯಾದ ಫೋಟೋಗಳಲ್ಲಿ ನೋಡಬಹುದು. ಇದು Innova Hycross ನ ಡ್ಯುಯಲ್-ಟೋನ್ ಆದ ಬ್ಲಾಕ್ ಮತ್ತು ಬೇಚ್ ಕಲರ್ ಟೋನ್‌ಗಿಂತ ಭಿನ್ನವಾಗಿದೆ. ಅಲ್ಲಿಗೆ ಹೈಕ್ರಾಸ್ ಇಂಟೀರಿಯರ್ ಅನ್ನು ಮಾರುತಿಯವರು ತಮ್ಮ ಬ್ರಾಂಡ್‌ಗೆ ತಕ್ಕಂತೆ ಡಿಸೈನ್ ಮಾಡಿರುವುದು ಇಲ್ಲಿ ಹೈಲೆಟ್ ಆಗಿದೆ.

maruti-invicto-mpv-interior-leaked-ahead-launch

ಲೀಕ್ ಆದ Maruti Invicto MPV ಫೋಟೋಗಳಲ್ಲಿ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಡ್ಯುಯಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪವರ್ಡ್ ಡ್ರೈವರ್ ಸೀಟ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳು ಇರುವುದು ಬಹೇತಕ ಖಚಿತವಾಗಿದೆ.

ಮಾರುತಿ ಇನ್ವಿಕ್ಟೋ ಡಿಸೈನ್: ಹೊರಭಾಗದಲ್ಲಿ ಸ್ವಲ್ಪ ಮರು-ವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಬಂಪರ್ ಇದೆ. ಅಲಾಯ್ ವೀಲ್‌ಗಳು ವಿಭಿನ್ನ ವಿನ್ಯಾಸವನ್ನು ಹೊಂದಿವೆ. ಟೈಲ್ ಲೈಟ್‌ಗಳಲ್ಲಿನ ಎಲ್‌ಇಡಿ ಕೂಡ ವಿಭಿನ್ನವಾಗಿದೆ. ಬಿಟ್ಟರೆ ಅದೇ ಹಳೆಯ ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತೆಯೇ ಬಹುತೇಕ ಕಾಣುತ್ತದೆ ಎಂದು ಹೇಳಬಹುದು.

maruti-invicto-mpv-interior-leaked-ahead-launch

ಎಂಜಿನ್: ಇನ್ವಿಕ್ಟೋದ ಉನ್ನತ-ಮಟ್ಟದ ವೇರಿಯೆಂಟ್‌ಗಳು 183hp ಪವರ್, 2.0-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಜೊತೆಗೆ ಇ-ಸಿವಿಟಿ ಟ್ರಾನ್ಸ್‌ಮಿಷನ್ ಜೊತೆಗೆ ಇನ್ನೋವಾ ಹೈಕ್ರಾಸ್‌ನಂತೆಯೇ ಬರಬಹುದು. ಪ್ರವೇಶ ಮಟ್ಟದ ಟ್ರಿಮ್‌ಗಳು 173hp ಪವರ್, 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು CVT ಯೊಂದಿಗೆ ಜೋಡಿಸುವ ನಿರೀಕ್ಷೆಯಿದೆ.

ಬೆಲೆ: ರೂ. 18.55 ಲಕ್ಷದಿಂದ ರೂ. 19.45 ಲಕ್ಷದವರೆ(ಎಕ್ಸ್ ಶೋ ರೂಂ)ಕ್ಕೆ ಮಾರಾಟವಾಗುವ ನಿರೀಕ್ಷೆಯಿದೆ. ಇದರ ಹೈಬ್ರಿಡ್ ಬೆಲೆ ರೂ. 25.03 ಲಕ್ಷ ಮತ್ತು ರೂ. 29.99 ಲಕ್ಷ (ಎಕ್ಸ್ ಶೋ ರೂಂ) ಇರಬಹುದು. ವಿಶೇಷವಾಗಿ ಮಾರುತಿ ಸುಜುಕಿ ಇನ್ವಿಕ್ಟೋ ಪ್ರೀಮಿಯಂ MPV ವಿಭಾಗದಲ್ಲಿ ತನ್ನ ಏಕೈಕ ಪ್ರತಿಸ್ಪರ್ಧಿಯೆಂದರೆ ಟೊಯೋಟಾ ಇನ್ನೋವಾ ಹೈಕ್ರಾಸ್ ಆಗಿದೆ.

Source: MotorBeam
Link: https://www.motorbeam.com/maruti-invicto-interior-spotted/

Article Published On: Monday, June 26, 2023, 15:28 [IST]
English summary
Maruti invicto mpv interior leaked ahead launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+