ಯಾರೂ ನೋಡಿರದ Maruti Invicto MPV ಸದ್ದಿಲ್ಲದೆ ಡೀಲರ್‌ಶಿಪ್‌ಗೆ ಎಂಟ್ರಿ... ಹೇಗಿದೆ ನೋಡಿ
ಮಾರುತಿ ಸುಜುಕಿಯ ಅತ್ಯಂತ ಪ್ರೀಮಿಯಂ ಕೊಡುಗೆಯಾಗಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೈಬ್ರಿಡ್ MPV ಇತ್ತೀಚೆಗೆ ಅದರ ಅಧಿಕೃತ ಬಿಡುಗಡೆಗೂ ಮುನ್ನವೆ ಮಾರುತಿ ಸುಜುಕಿ ಡೀಲರ್‌ಶಿಪ್‌ಗಳನ್ನು ತಲುಪಿವೆ. ಈ ಚಿತ್ರಗಳು ಈ ಹೈಬ್ರಿಡ್ MPV ಯ ಡಿಸೈನ್ ಕುರಿತು ಸಾಕಷ್ಟು ಮಾಹಿತಿಯನ್ನು ನೀಡುತ್ತಿವೆ.
ಈ ವರೆಗೆ ಸಂಪೂರ್ಣವಾಗಿ ಕಾರನ್ನು ಯಾರೂ ಕೂಡ ನೋಡಿರಲಿಲ್ಲ. ಮಾರುತಿಯವರು Invicto ಎಂಪಿವಿಯನ್ನು ಬಿಡುಗಡೆಗೆ ಸಜ್ಜುಗೊಳಿಸಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ಲೋಕಲ್ ಡೀಲರ್‌ಶಿಪ್‌ಗಳಿಗೆ ತಲುಪಿದ ಈ ಎಂಪಿವಿಯ ಕೆಲ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಕಂಪನಿಯು ಅಧಿಕೃತವಾಗಿ Maruti Invicto MPV ಅನ್ನು ಜುಲೈ 5 ರಂದು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ಈಗಾಗಲೇ ಅದರ ಬುಕಿಂಗ್‌ಗಳು ಆರಂಭಿಕ ಟೋಕನ್ ಮೊತ್ತ ರೂ. 25,000 ಕ್ಕೆ ಅಧಿಕೃತ Nexa ಡೀಲರ್‌ಶಿಪ್‌ಗಳು ಮತ್ತು ಆನ್‌ಲೈನ್‌ನಲ್ಲಿ ತೆರೆಯಲಾಗಿದೆ. ಮಾರುತಿ ಇನ್ವಿಕ್ಟೊ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಬ್ಯಾಡ್ಜ್ ಇಂಜಿನಿಯರಿಂಗ್ ಆವೃತ್ತಿಯಾಗಿದೆ. ಕೆಲವು ಸಣ್ಣ ವಿನ್ಯಾಸದ ಬದಲಾವಣೆಗಳ ಹೊರತಾಗಿ MPV ಹೆಚ್ಚಾಗಿ ಅದರ ಟೊಯೋಟಾ ಹೈಕ್ರಾಸ್‌ನಂತೆಯೇ ಇರುತ್ತದೆ ಎಂದು ಊಹಿಸಲಾಗಿತ್ತು.
ಆದ್ರೆ ಕೊನೆಗೂ ಡೀಲರ್‌ಶಿಪ್‌ನಿಂದ ಸೋರಿಕೆಯಾದ ಹೊಸ ಫೋಟೋಗಳು ಕಾರು ಹೇಗಿದೆ ಎಂಬುದರ ಕುರಿತು ತಿಳಿಸಿಬಿಟ್ಟಿವೆ. ಹಾಗಾದ್ರೆ ಕಾರು ಹೇಗಿದೆ ಎಂಬುದನ್ನು ಇಲ್ಲಿ ನೋಡೋಣ. ಈ ಮೇಲಿನ ಚಿತ್ರದಲ್ಲಿ ಕಾಣುತ್ತಿರುವಂತೆ Invicto MPV ಅನ್ನು Hycross ಗೆ ಹೋಲಿಸಿದಾಗ, ಎರಡು ಕ್ರೋಮ್ ಸ್ಲ್ಯಾಟ್‌ಗಳು ರೀಡಿಸೈನ್ ಮಾಡಲಾದ ಮುಂಭಾಗದ ಬಂಪರ್, ಚಿಕ್ಕದಾದ LED DRL ಗಳು, ಹೆಡ್‌ಲೈಟ್‌ಗಳು, ಹೊಸ ಗ್ರಿಲ್‌ನೊಂದಿಗೆ ಕೆಲ ಬದಲಾವಣೆಗಳನ್ನು ಪಡೆದಿದೆ.

ಉಳಿದಂತೆ ಫಾಗ್ ಲ್ಯಾಂಪ್ ಹೌಸಿಂಗ್‌ಗಳು ಮತ್ತು ಸೆಂಟ್ರಲ್ ಏರ್ ಇನ್‌ಟೇಕ್ ಇನ್ನೋವಾ ಹೈಕ್ರಾಸ್‌ನಂತೆಯೇ ಕಾಣುತ್ತದೆ. ಪಿಲ್ಲರ್‌ಗಳು, ರೂಫ್‌ಲೈನ್, ಬಾಡಿ ಪ್ಯಾನೆಲ್‌ಗಳು ಮತ್ತು ಅಲಾಯ್ ವೀಲ್‌ಗಳ ವಿನ್ಯಾಸವೂ ಸಹ ಭಿನ್ನವಾಗೇನಿಲ್ಲ. ಉಳಿದಂತೆ ಹೆಚ್ಚುವರಿಯಾಗಿ ಇದರಲ್ಲಿ ಇನ್ವಿಕ್ಟೊ ಮತ್ತು ಹೈಬ್ರಿಡ್ ಎಂಬ ಬ್ಯಾಡ್ಜ್‌ಗಳನ್ನು ನೋಡಬಹುದು.
ಇನ್ವಿಕ್ಟೊ ಒಳಾಂಗಣ: ಒಳಭಾಗದಲ್ಲಿ, ಹೊಸ ಇನ್ವಿಕ್ಟೋ ಪನಾರಮಿಕ್ ಸನ್‌ರೂಫ್, ಎರಡನೇ ಸಾಲಿಗೆ ಒಟ್ಟೋಮನ್ ಸೀಟ್‌ಗಳು, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮುಂಭಾಗದಲ್ಲಿ ರನ್ನಿಂಗ್ ಸೀಟುಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ADAS ತಂತ್ರಜ್ಞಾನವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ವಿಕ್ಟೋ ಎಂಜಿನ್: ಇನ್ವಿಕ್ಟೋದ ಉನ್ನತ-ಮಟ್ಟದ ರೂಪಾಂತರಗಳು 183hp ಪವರ್, 2.0-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಜೊತೆಗೆ ಇ-ಸಿವಿಟಿ ಟ್ರಾನ್ಸ್‌ಮಿಷನ್ ಜೊತೆಗೆ ಇನ್ನೋವಾ ಹೈಕ್ರಾಸ್‌ನಂತೆಯೇ ಬರಬಹುದು. ಪ್ರವೇಶ ಮಟ್ಟದ ಟ್ರಿಮ್‌ಗಳು 173hp ಪವರ್, 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು CVT ಯೊಂದಿಗೆ ಜೋಡಿಸುವ ನಿರೀಕ್ಷೆಯಿದೆ.
ಬೆಲೆ: ರೂ. 18.55 ಲಕ್ಷದಿಂದ ರೂ. 19.45 ಲಕ್ಷದವರೆಗೆ (ಎಕ್ಸ್ ಶೋ ರೂಂ)ಕ್ಕೆ ಮಾರಾಟವಾಗುವ ನಿರೀಕ್ಷೆಯಿದೆ. ಇದರ ಹೈಬ್ರಿಡ್ ಬೆಲೆ ರೂ. 25.03 ಲಕ್ಷ ಮತ್ತು ರೂ. 29.99 ಲಕ್ಷ (ಎಕ್ಸ್ ಶೋ ರೂಂ) ಇರಬಹುದು. ವಿಶೇಷವಾಗಿ ಮಾರುತಿ ಸುಜುಕಿ ಇನ್ವಿಕ್ಟೋ ಪ್ರೀಮಿಯಂ MPV ವಿಭಾಗದಲ್ಲಿ ತನ್ನ ಏಕೈಕ ಪ್ರತಿಸ್ಪರ್ಧಿಯೆಂದರೆ ಟೊಯೋಟಾ ಇನ್ನೋವಾ ಹೈಕ್ರಾಸ್ ಆಗಿದೆ.
Source: MotorBeam
Link: https://twitter.com/MotorBeam/status/1672105997052284928


Click it and Unblock the Notifications