ಇದೇ ವಾರದ ಕೊನೆಯಲ್ಲಿ Maruti Invicto ಅಧಿಕೃತ ಬುಕಿಂಗ್‌ಗಳು ಪ್ರಾರಂಭ: ಹೆಚ್ಚಿನ ಮಾಹಿತಿ ಇಲ್ಲಿದೆ...

ಮಾರುತಿ ಸುಜುಕಿ ತನ್ನ ಹೊಸ ಪ್ರೀಮಿಯಂ MPV ಗಾಗಿ ಜೂನ್ 19 ರಿಂದ ಬುಕಿಂಗ್ ಅನ್ನು ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಬಿಡುಗಡೆಯನ್ನು ಜುಲೈ 5 ರಂದು ಮಾಡಲು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೃಢಪಡಿಸಿದೆ. ಇನ್ವಿಕ್ಟೊವನ್ನು ಮಾರುತಿ ಸುಜುಕಿಯ NEXA ಸರಣಿಯ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಇದು ಮಾರುತಿ ಸುಜುಕಿ ಲೈನ್‌ ಅಪ್‌ನಲ್ಲಿಯೇ ದುಬಾರಿ ಕಾರಾಗಿರಲಿದೆ. ಅಂದಾಜು ರೂ. 20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಕಾರು ಬಿಡುಗಡೆಯಾಗಬಹುದು. ಈ ಹಿಂದೆ ಈ ಎಂಪಿವಿಗೆ ಎಂಗೇಜ್ ಎಂಬ ಹೆಸರಿಡುವುದಾಗಿ ವದಂತಿಗಳು ಹಬ್ಬಿದ್ದವು. ಆದರೆ ಈಗ ಕಂಪನಿಯು ಇದಕ್ಕೆ ಮಾರುತಿ ಇನ್ವಿಕ್ಟೋ ಎಂದು ಹೆಸರಿಸಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್‌ನೊಂದಿಗೆ ಬ್ಯಾಡ್ಜ್-ಎಂಜಿನಿಯರಿಂಗ್ ಅನ್ನು ಇದು ಹಂಚಿಕೊಳ್ಳಲಿದೆ.

Maruti Invicto

ಇದು ಎರ್ಟಿಗಾ ಮತ್ತು XL6 ನಂತರ ಮಾರುತಿಯ ಮೂರನೇ MPV ಆಗಿದೆ. ಹೊಸ Maruti Invicto ದೇಶದಲ್ಲಿ ಮಾರುತಿ ಸುಜುಕಿಯ ಪ್ರಮುಖ ಕೊಡುಗೆಯಾಗಲಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿರುವ ಕಾರಣ ಇನ್ನೋವಾ ಹೈಕ್ರಾಸ್ ಅನ್ನು ಉತ್ಪಾದಿಸುವ ಕರ್ನಾಟಕದ ಬಿಡದಿಯಲ್ಲಿ ಅದೇ ಅಸೆಂಬ್ಲಿ ಲೈನ್‌ನಲ್ಲಿ ಇದನ್ನು ತಯಾರಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಉದಾಹರಣೆಗೆ ಮಾರುತಿ ಗ್ರಾಂಡ್‌ ವಿಟಾರಾ ಹಾಗೂ ಟೊಯೊಟಾ ಅರ್ಬನ್ ಕ್ರೂಸರ್‌ನಂತೆಯೇ ಇವು ಕೂಡ ಎಂಜಿನಿಯರಿಂಗ್ ಅನ್ನು ಹಂಚಿಕೊಳ್ಳಲಿವೆ. ಇದಕ್ಕಾಗಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿಗೆ ಉತ್ಪಾದನೆ ಮತ್ತು ಸರಬರಾಜು ಮಾಡಲಾಗುವುದು. ಆದರೂ ಮಾರುತಿ ಕೆಲವು ಬದಲಾವಣೆಗಳನ್ನು ಮಾಡಲಿದ್ದು, ಜನರು ಇದನ್ನು ಇನ್ನೋವಾ ಹೈಕ್ರಾಸ್ ಬದಲಿಗೆ ಇನ್ವಿಕ್ಟೋ ಎಂದು ಗುರುತಿಸಬಹುದು.

Maruti Invicto

ಟೊಯೊಟಾದ TNGA-C ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾದ ಇನ್ನೋವಾ ಹೈಕ್ರಾಸ್ ಸ್ಟೈಲಿಂಗ್ ಹೊಂದಿರುವ ಇನ್ವಿಕ್ಟೊದ ಫೋಟೋಗಳು ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರ ಮುಂಭಾಗದ ಗ್ರಿಲ್ ವಿಶಿಷ್ಟವಾದ ಕ್ರೋಮ್‌ನೊಂದಿಗೆ ಬರುತ್ತದೆ, XL6 ಮತ್ತು ಗ್ರ್ಯಾಂಡ್ ವಿಟಾರಾದಂತಹ ಇತರ ಮಾರುತಿ ಸುಜುಕಿ ಕಾರುಗಳಂತೆಯೇ ಇದು ಕೂಡ ವಿಶೇಷ ಕ್ರೋಮ್ ಅಂಶಗಳನ್ನು ಒಳಗೊಂಡಿರಲಿದೆ.

ಸದ್ಯಕ್ಕೆ, ಈ ಬದಲಾವಣೆಗಳನ್ನು ದೃಢಪಡಿಸಿಲ್ಲವಾದರೂ ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್, ಮಾರುತಿ ಬ್ಯಾಡ್ಜ್‌ಗಳು ಮತ್ತು ಗ್ರಿಲ್ ಸ್ವಲ್ಪ ವಿಭಿನ್ನವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್‌ಗಳು ಸೇರಿದಂತೆ ಅಪ್ಹೋಲ್ಸ್ಟರಿ ಮತ್ತು ವೈಶಿಷ್ಟ್ಯಗಳ ಪಟ್ಟಿಯಲ್ಲಿ ಬದಲಾವಣೆಳಾಗಬಹುದು.

Maruti Invicto

ಮಾರುತಿ Invicto ಇನ್ನೋವಾ ಹೈಕ್ರಾಸ್‌ನ 183hp, 2.0-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನಿಂದ e-CVT ಟ್ರಾನ್ಸ್‌ಮಿಷನ್‌ ಪಡೆಯಲಿದೆ ಎಂದು ಮಾರುತಿ ದೃಢಪಡಿಸಿದೆ. 173hp, 2.0-ಲೀಟರ್ ಪೆಟ್ರೋಲ್ ಘಟಕವನ್ನು ಪ್ರವೇಶ ಮಟ್ಟದ ಟ್ರಿಮ್‌ಗಳಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದನ್ನು CVT ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುವುದು.

ಹೊಸ MPV ಅನ್ನು 7 ಮತ್ತು 8-ಆಸನಗಳ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ರೂಪಾಂತರದ ಶ್ರೇಣಿಯು ಇನ್ನೋವಾ ಹೈಕ್ರಾಸ್‌ಗಿಂತ ಭಿನ್ನವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ವೈಶಿಷ್ಟ್ಯಗಳನ್ನು ನೊಡುವುದಾದರೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಸಂಪರ್ಕಿತ ಕಾರ್ ಟೆಕ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ.

Article Published On: Wednesday, June 14, 2023, 13:06 [IST]
English summary
Maruti invicto official bookings start june 19
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+