ದೊಡ್ಡ ಬೇಡಿಕೆ ಸೃಷ್ಟಿ: ಮಾರುತಿ ಸುಜುಕಿಯ Made in India ಕಾರುಗಳು ವಿದೇಶಕ್ಕೆ ರಫ್ತು
ಭಾರತದ ಪ್ರಮುಖ ವಾಹನ ತಯಾಕರ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ ತಯಾರಿಸುವ ಕಾರುಗಳು ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿವೆ. ಅವುಗಳ ವಿನ್ಯಾಸ, ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆ ಪ್ರತಿಯೊಬ್ಬ ಗ್ರಾಹಕರನ್ನು ಆಕರ್ಷಿಸಲಿದೆ. ಇದೀಗ, ಕಂಪನಿಯು ದೊಡ್ಡ ಸಾಧನೆಯೊಂದನ್ನು ಮಾಡಿದ್ದು, ಹೆಚ್ಚಿನ ವಿವರ ತಿಳಿಯೋಣ.
ಮಾರುತಿ ಸುಜುಕಿ ತನ್ನ ಬಹುನೀರಿಕ್ಷಿತ ಜಿಮ್ನಿ 5 ಡೋರ್ ಹಾಗೂ ಫ್ರಾಂಕ್ಸ್ (Fronx) ಎಸ್‌ಯುವಿಗಳನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಖಚಿತಪಡಿಸಿದೆ. ಕಂಪನಿಯು ತನ್ನ ಜಿಮ್ನಿ 5 ಡೋರ್ ಎಸ್‌ಯುವಿಯನ್ನು ಹರಿಯಾಣದ ಗುರುಗ್ರಾಮ್ ಹಾಗೂ ಫ್ರಾಂಕ್ಸ್ ಕಾರನ್ನು ಗುಜರಾತ್ ರಾಜ್ಯದ ಉತ್ಪಾದನಾ ಘಟಕದಲ್ಲಿ ತಯಾರಿಸುತ್ತದೆ. ಇತ್ತೀಚೆಗೆ ಕಂಪನಿಯು ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅಲ್ಲದೆ, ಜಿಮ್ನಿ 3 ಡೋರ್ ಅನ್ನು ಜಾಗತಿಕವಾಗಿ ಸೇಲ್ ಮಾಡುತ್ತಿದೆ.

ಮಾರುತಿ ಸುಜುಕಿ ಕಳೆದ ತಿಂಗಳು ಮುಕ್ತಾಯಗೊಂಡ ದೆಹಲಿಯಲ್ಲಿ ಆಟೋ ಎಕ್ಸ್‌ಪೋದಲ್ಲಿ ಜಿಮ್ನಿ 5 ಡೋರ್ ಹಾಗೂ ಫ್ರಾಂಕ್ಸ್ ಎಸ್‌ಯುವಿಗಳನ್ನು ಪ್ರದರ್ಶನ ಮಾಡಿತ್ತು. ಜೊತೆಗೆ ಬುಕಿಂಗ್ ಕೂಡ ಆರಂಭಿಸಿತ್ತು. ಈಗಾಗಲೇ ಜಿಮ್ನಿ 5 ಡೋರ್ ಎಸ್‌ಯುವಿಗಾಗಿ ಬರೋಬ್ಬರಿ 18000 ಮತ್ತು ಫ್ರಾಂಕ್ಸ್ ಗಾಗಿ 6500 ಗ್ರಾಹಕರು ಬುಕ್ ಮಾಡಿದ್ದಾರೆ. ಜಿಮ್ನಿ ಬುಕಿಂಗ್ ಬೆಲೆ ರೂ.25,000 ಇದ್ದು, ಫ್ರಾಂಕ್ಸ್ ಬುಕಿಂಗ್ ದರ ರೂ.11,000 ಇದೆ.
ಜಿಮ್ನಿ 5 ಡೋರ್ ಎಸ್‌ಯುವಿ ಸುತ್ತಳತೆಯನ್ನು ನೋಡುವುದಾದರೆ, ಇದು 3,985ಎಂಎಂ ಉದ್ದ, 1,645ಎಂಎಂ ಅಗಲ ಹಾಗೂ 1,720ಎಂಎಂ ಎತ್ತರವನ್ನು ಹೊಂದಿದ್ದು, 210ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದಿದೆ. ಇದು ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಪವರ್ ಫುಲ್ ಆಗಿದ್ದು, 1.5 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 105 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5-ಸ್ವೀಡ್ ಮ್ಯಾನುವಲ್ ಅಥವಾ 4-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಫ್ರಾಂಕ್ಸ್ ಎಸ್‌ಯುವಿ ಬಹುತೇಕ ಗ್ರ್ಯಾಂಡ್ ವಿಟಾರಾವನ್ನು ಹೋಲಿಕೆಯಾಗುತ್ತದೆ. ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಅವುಗಳೆಂದರೆ, 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ 1.2-ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್. ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 100 bhp ಗರಿಷ್ಠ ಪವರ್ ಹಾಗೂ 148 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಮ್ಯಾನುವಲ್ ಹಾಗೂ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಆಕರ್ಷಕ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ ಅತ್ಯುತ್ತಮ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಈ ಎಸ್‌ಯುವಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. 6 ಏರ್‌ಬ್ಯಾಗ್ಸ್, ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ರೇರ್ ವ್ಯೂ ಕ್ಯಾಮೆರಾ, EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ನೂತನ ಫ್ರಾಂಕ್ಸ್ ಎಸ್‌ಯುವಿ ಬೆಲೆ ರೂ.10 ಲಕ್ಷದಿಂದ ರೂ.14 ಲಕ್ಷ ಇರಬಹುದು ಎಂದು ಹೇಳಲಾಗಿದೆ. ಇದು ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. 7 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ವಾಯ್ಸ್ ಅಸಿಸ್ಟೆಂಟ್, USB, ಬ್ಲೂಟೂತ್, OTA ಅಪ್‌ಡೇಟ್, 4 - ಸ್ಪೀಕರ್ ಆಡಿಯೊ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರಲಿದ್ದು, ಬುಕಿಂಗ್ ಕೂಡ ಉತ್ತಮವಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಹವಾ ಸೃಷ್ಟಿಸಬಹುದು.
ಭಾರತದಲ್ಲಿ ತಯಾರಾಗುವ ಮಾರುತಿ ಸುಜುಕಿಯ ಕಾರುಗಳು ವಿದೇಶದಲ್ಲೂ ಬೇಡಿಕೆ ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಬಹುನೀರಿಕ್ಷಿತ ಜಿಮ್ನಿ 5 ಡೋರ್ ಹಾಗೂ ಫ್ರಾಂಕ್ಸ್ ಎಸ್‌ಯುವಿಗಳು ಆಸ್ಟ್ರೇಲಿಯಾಕ್ಕೆ ರಫ್ತು ಆಗುತ್ತಿದ್ದು, ಅವುಗಳ ಜನಪ್ರಿಯತೆಯನ್ನು ಸುಲಭವಾಗಿ ಅರ್ಥವಾಗುತ್ತದೆ. ಜಿಮ್ನಿ 5 ಡೋರ್ ಗೆ ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ದಿಯಿಲ್ಲ. ಆದರೆ, ಮುಂಬರಲಿರುವ ಮಹೀಂದ್ರಾ ಥಾರ್ 5 ಡೋರ್ ಪೈಪೋಟಿ ನೀಡಬಹುದು. ಕೆಲವೇ ವರ್ಷಗಳಲ್ಲಿ ಜಿಮ್ನಿ ಎಲೆಕ್ಟ್ರಿಕ್ ಆವೃತ್ತಿಯು ಬಿಡುಗಡೆಯಾಗಲಿದೆ.


Click it and Unblock the Notifications