ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 2023ರ ಆಟೋ ಎಕ್ಸ್‌ಪೋದಲ್ಲಿ ಜಿಮ್ನಿ ಮತ್ತು ಫ್ರಾಂಕ್ಸ್ ಎಸ್‌ಯುವಿಗಳನ್ನು ಅನಾವರಣಗೊಳಿಸಿತು. ಈ ಎರಡು ಎಸ್‍ಯುವಿಗಳು ಆಟೋ ಎಕ್ಸ್‌ಪೋದಲ್ಲಿ ಹೆಚ್ಚು ಜನರ ಗಮನಸೆಳೆದಿದೆ. ಇತ್ತೀಚೆಗೆ ಮಾರುತಿ ಸುಜುಕಿ ಕಂಪನಿಯು ಈ ಎರಡು ಎಸ್‍ಯುವಿಗಳ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿತು.
ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಗೆ 10,000ಕ್ಕಿಂತ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ. ಜಿಮ್ನಿ ಎಸ್‌ಯುವಿಗಾಗಿ ಬುಕಿಂಗ್ ಮೊತ್ತವನ್ನು ರೂ 11,000 ರಿಂದ ರೂ 25,000 ಕ್ಕೆ ಹೆಚ್ಚಿಸುವ ಮೂಲಕ ಕಂಪನಿಯು ಬುಕಿಂಗ್ ಅನ್ನು ನಿಧಾನಗೊಳಿಸಲು ಪ್ರಯತ್ನಿಸಿತು. ಆದರೂ ಕೂಡ ಈ ಜಿಮ್ನಿ ಎಸ್‍ಯುವಿಯು ಭರ್ಜರಿ ಬುಕ್ಕಿಂಗ್ ಗಳನ್ನು ಪಡೆದುಕೊಳ್ಳುತ್ತಿದೆ. ದಿನಕ್ಕೆ ಸರಾಸರಿ 1,000 ಕ್ಕಿಂತ ಹೆಚ್ಚು ಬುಕಿಂಗ್‌ಗಳನ್ನು ಪಡಿಯುತ್ತಿದೆ. ಇನ್ನು ಫ್ರಾಂಕ್ಸ್ ಎಸ್‌ಯುವಿಗಾಗಿ ಸರಿಸುಮಾರು 4,000 ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ.

ಮಾರುತಿ ಜಿಮ್ನಿ ಎಸ್‍ಯುವಿಗಾಗಿ ಭರ್ಜರಿ ಬುಕ್ಕಿಂಗ್ ಆಗುವುದರಿಂದ ಇದರ ಕಾಯುವ ಅವಧಿಯು 10 ತಿಂಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತಿದೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುಜುಕಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಇದೀಗ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆಯನ್ನು ಪಡೆದುಕೊಂಡಿದೆ. 2023ರ ಆಟೋ ಎಕ್ಸ್‌ಪೋದಲ್ಲಿ ಕಾಣಿಸಿಕೊಂಡ ಈ ಮಾರುತಿ ಸುಜುಕಿ ಜಿಮ್ನಿ ಮಾದರಿಯು ಮುಂದಿನ 2-3 ತಿಂಗಳುಗಳಲ್ಲಿ ರಸ್ತೆಗಿಳಿಯುವ ಸಾಧ್ಯತೆಯಿದೆ.
ಈ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. Arkamys ಸರೌಂಡ್ ಸೆನ್ಸ್‌ನೊಂದಿಗೆ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಈ ಮಾರುತಿ ಜಿಮ್ನಿ 5 ಡೋರ್ ಎಸ್‍ಯುವಿಯಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಸಂಪರ್ಕ, ಲೆದರ್ ಸುತ್ತುವ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ ಸ್ಟಾರ್ಟ್/ಸ್ಟಾಪ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಗ್ಲಾಸ್ ಅನ್ನು ಹೊಂದಿದೆ.
ಇದರೊಂದಿಗೆ ವಾಷರ್, ಫಾಗ್ ಜೊತೆ LED ಆಟೋ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಲ್ಯಾಂಪ್‌ಗಳನ್ನು ಹೊಂದಿವೆ. ಇನ್ನು ಬಾಡಿ ಬಣ್ಣದ ORMVಗಳು, ಅಲಾಯ್ ವ್ಹೀಲ್ ಗಳು ಮತ್ತು ಟಾಪ್-ಎಂಡ್ ಆಲ್ಫಾ ಟ್ರಿಮ್‌ನಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಇನ್ನು ಸ್ಟ್ಯಾಂಡರ್ಡ್ ಫೀಚರ್ ಕಿಟ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಎಂಐಡಿ (ಟಿಎಫ್‌ಟಿ ಕಲರ್ ಡಿಸ್ಪ್ಲೇ), ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ಹೊಂದಿದೆ.
ಇನ್ನು ಫ್ರಂಟ್ ಮತ್ತು ರಿಯರ್ ವೆಲ್ಡ್ ಟೋ ಹುಕ್ಸ್, ಫ್ರಂಟ್ ಮತ್ತು ರಿಯರ್ ಸೀಟ್ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್ ಇದರೊಂದಿಗೆ ಸ್ಟೇನ್ ತೆಗೆಯಬಹುದಾದ ಐಪಿ ಫಿನಿಶ್ ಅನು ಹೊಂದಿದೆ. ಈ ಎಸ್‍ಯುವಿಯಲ್ಲಿ 1.5 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಅದು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಹೊಂದಬಹುದು. ಗ್ಯಾಸೋಲಿನ್ ಮೋಟಾರ್ 6,000 rpm ನಲ್ಲಿ 102 ಬಿಹೆಚ್‍ಪಿ ಪವರ್ ಮತ್ತು 4,400rpm ನಲ್ಲಿ 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ಫ್ರಾಂಕ್ಸ್ ಎಸ್‍ಯುವಿಯ ಬೆಲೆಯ 2023ರ ಆರ್ಥಿಕ ವರ್ಷದಲ್ಲೇ ಬೆಲೆಯನ್ನು ಘೋಷಿಸಬಹುದು ಎಂದು ನಿರೀಕ್ಷಿಸುತ್ತೇವೆ. ಮಾರುತಿ ಸುಜುಕಿ ಕಂಪನಿಯು ಫ್ರಾಂಕ್ಸ್ ಕೂಪೆ ಎಸ್‌ಯುವಿಯ ಬಿಡುಗಡೆ ದಿನಾಂಕವನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಫ್ರಾಂಕ್ಸ್ ಎಸ್‍ಯುವಿಯು ಮಾರುತಿಯ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಈ ಹೊಸ ಕೊಪೆ ಎಸ್‍ಯುವಿಯು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ.
ಹೊಸ ಮಾರುತಿ ಫ್ರಾಂಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಮಾರುತಿ ಕೂಪೆ ಎಸ್‌ಯುವಿಯನ್ನು ಪ್ರೀಮಿಯಂ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇನ್ನು ಈ ಎಸ್‍ಯುವಿ 1.2 ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ. ಗೇರ್ ಬಾಕ್ಸ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.


Click it and Unblock the Notifications